ರಷ್ಯಾದಲ್ಲಿ ಬ್ಲಾಕ್‌ಮೇಲ್ ಅಥವಾ ಆಂತರಿಕ ಪ್ರಕ್ಷುಬ್ಧತೆಯ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಲಾದುವುದು ಎಂದ ಪುತಿನ್
ಮಾಸ್ಕೋ: ವ್ಯಾಗ್ನರ್ ಖಾಸಗಿ ಮಿಲಿಟರಿ ದಂಗೆಯನ್ನು ವಿಫಲಗೊಳಿಸಿದ ನಂತರ, ಸೋಮವಾರದಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್, ರಷ್ಯಾದಲ್ಲಿ ಬ್ಲಾಕ್‌ಮೇಲ್ ಅಥವಾ ಆಂತರಿಕ ಪ್ರಕ್ಷುಬ್ಧತೆಯ ಯಾವುದೇ ಪ್ರಯತ್ನವು ವಿಫಲಗೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ. ರಷ್ಯನ್ನರು ಪರಸ್ಪರರನ್ನು ಕೊಲ್ಲಬೇಕೆಂದು ಪಶ್ಚಿಮ ದೇಶಗಳು ಮತ್ತು ಕೈವ್ ಬಯಸುತ್ತಿದೆ ಎಂದು ಅವರು ಹೇಳಿದ್ದಾರೆ. ಶನಿವಾರದಂದು ಪ್ರಾರಂಭವಾದ ಶಸ್ತ್ರಸಜ್ಜಿತ ಖಾಸಗಿ ಸೈನಿಕರ ದಂಗೆಯು 24 ಗಂಟೆಗಳಿಗೂ ಮೊದಲೆ ಕೊನೆಗೊಂಡಿತು. ಸೋಮವಾರ ರಾಷ್ಟ್ರವನ್ನುದ್ದೇಶಿಸಿ ದೂರದರ್ಶನದ ಭಾಷಣದಲ್ಲಿ ಮಾತನಾಡಿದ ಪುತಿನ್, ಘಟನೆಗಳು ಪ್ರಾರಂಭವಾದಾಗಿನಿಂದಲೂ ದೊಡ್ಡ ಪ್ರಮಾಣದ ರಕ್ತಪಾತವನ್ನು ತಪ್ಪಿಸಲು […]
ರಷ್ಯಾದ ಹೆಪ್ಪುಗಟ್ಟಿದ ಸರೋವರದಿಂದ 48,500 ವರ್ಷಗಳಷ್ಟು ಹಳೆಯ ವೈರಸ್ ಅನ್ನು ಪುನರುಜ್ಜೀವಗೊಳಿಸಿದ ಫ್ರೆಂಚ್ ವಿಜ್ಞಾನಿಗಳು
ಫ್ರೆಂಚ್ ವಿಜ್ಞಾನಿಗಳು ರಷ್ಯಾದಲ್ಲಿ ಹೆಪ್ಪುಗಟ್ಟಿದ ಸರೋವರದ ಅಡಿಯಲ್ಲಿ ಸಮಾಧಿಯಾಗಿದ್ದ 48,500 ವರ್ಷಗಳಷ್ಟು ಹಳೆಯದಾದ “ಜೊಂಬಿ ವೈರಸ್” ಅನ್ನು ಪುನರುಜ್ಜೀವನಗೊಳಿಸಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಫ್ರೆಂಚ್ ವಿಜ್ಞಾನಿಗಳು ಜೊಂಬಿ ವೈರಸ್ ಅನ್ನು ಪುನರುಜ್ಜೀವನಗೊಳಿಸಿ ಕೋವಿಡ್ ನಂತಹ ಮತ್ತೊಂದು ಜಾಗತಿಕ ಸಾಂಕ್ರಾಮಿಕ ರೋಗದ ಭಯವನ್ನು ಹುಟ್ಟುಹಾಕಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಈ ವೈರಸ್ ಅಧ್ಯಯನವನ್ನು ಉಲ್ಲೇಖಿಸಿದ್ದು, ಇದರ ವಿಮರ್ಷೆ ಇನ್ನೂ ಬಾಕಿ ಇದೆ ಎಂದಿದೆ. ಪ್ರಾಚೀನ ಅಜ್ಞಾತ ವೈರಸ್‌ನ ಪುನರುಜ್ಜೀವನದಿಂದ ಉಂಟಾಗುವ ಸಸ್ಯ, ಪ್ರಾಣಿ ಅಥವಾ ಮಾನವ ರೋಗಗಳ ಸಂದರ್ಭದಲ್ಲಿ ಪರಿಸ್ಥಿತಿಯು […]
ಭಾರತ ಸರ್ಕಾರದ ಪ್ರತಿನಿಧಿಯ ಹತ್ಯೆ ಸಂಚು ರೂಪಿಸಿದ್ದ ಐಸಿಸ್ ಆತ್ಮಹತ್ಯಾ ಬಾಂಬರ್ ರಷ್ಯಾದಲ್ಲಿ ಬಂಧನ
ಮಾಸ್ಕೋ: ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ) ಭಾರತ ಸರ್ಕಾರದ ಪ್ರತಿನಿಧಿಯ ವಿರುದ್ಧ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಐಸಿಸ್ ಆತ್ಮಹತ್ಯಾ ಬಾಂಬರ್ ಅನ್ನು ಬಂಧಿಸಿದೆ ಎಂದು ರಷ್ಯಾದ ಮಾಧ್ಯಮದಲ್ಲಿ ವರದಿಯಾಗಿದೆ. ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ಪ್ರಕಾರ, ದಾಯೆಶ್ ಭಯೋತ್ಪಾದಕ ಭಾರತದ ಗಣ್ಯ ನಾಯಕರೊಬ್ಬರ ಮೇಲೆ ದಾಳಿ ನಡೆಸಲು ಯೋಜಿಸುತ್ತಿದ್ದ ಎನ್ನಲಾಗಿದೆ. ಸದ್ಯ ಹೊರ ಬರುತ್ತಿರುವ ಮಾಹಿತಿಗಳ ಪ್ರಕಾರ ಬಂಧಿತ ಭಯೋತ್ಪಾದಕ ಟರ್ಕಿಯಲ್ಲಿ ಐಸಿಸ್ ಗೆ ದಾಖಲಾಗಿದ್ದ. ರಷ್ಯಾದಲ್ಲಿ ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಅಂತರಾಷ್ಟ್ರೀಯ […]
ರಷ್ಯಾದಲ್ಲಿ ಭಾರತೀಯ ಮಳಿಗೆಗಳನ್ನು ತೆರೆಯುವ ಬಗ್ಗೆ ಮಾತುಕತೆ ನಡೆಯುತ್ತಿದೆ: ವ್ಲಾದಿಮಿರ್ ಪುಟಿನ್
ಮಾಸ್ಕೋ: ಉಕ್ರೇನ್ ಮೇಲಿನ ಆಕ್ರಮಣದ ನಂತರ ಮಾಸ್ಕೋದ ಮೇಲೆ ಪಾಶ್ಚಿಮಾತ್ಯ ದೇಶಗಳ ಭಾರೀ ನಿರ್ಬಂಧಗಳ ನಡುವೆ ರಷ್ಯಾದಲ್ಲಿ ಭಾರತೀಯ ಮಳಿಗೆಗಳ ಸರಪಳಿಗಳನ್ನು ತೆರೆಯಲು ಮಾತುಕತೆ ನಡೆಯುತ್ತಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. “ರಷ್ಯಾದ ವ್ಯಾಪಾರ ವಲಯಗಳು ಮತ್ತು ಬ್ರಿಕ್ಸ್ ದೇಶಗಳ ವ್ಯಾಪಾರ ಸಮುದಾಯದ ನಡುವಿನ ಸಂಬಂಧಗಳು ಹೆಚ್ಚಾಗಿವೆ. ಉದಾಹರಣೆಗೆ, ರಷ್ಯಾದಲ್ಲಿ ಭಾರತೀಯ ಸರಣಿ ಮಳಿಗೆಗಳನ್ನು ತೆರೆಯಲು ಮಾತುಕತೆಗಳು ನಡೆಯುತ್ತಿವೆ ಮತ್ತು ನಮ್ಮ ಮಾರುಕಟ್ಟೆಯಲ್ಲಿ ಚೀನೀ ಕಾರುಗಳು, ಉಪಕರಣಗಳು ಮತ್ತು ಹಾರ್ಡ್‌ವೇರ್‌ಗಳ ಪಾಲು ಹೆಚ್ಚುತ್ತಿವೆ. ಅದಕ್ಕೆ […]
ರಷ್ಯಾದಿಂದ ತೈಲ ಆಮದನ್ನು ದ್ವಿಗುಣಗೊಳಿಸುವತ್ತ ಭಾರತದ ಚಿತ್ತ? ರಷ್ಯಾ ಕಂಪನಿಯಿಂದ ಹೆಚ್ಚು ತೈಲ ಖರೀದಿಸಲು ಭಾರತ ಉತ್ಸುಕ
ನವದೆಹಲಿ: ರಷ್ಯಾ ಮತ್ತು ಉಕ್ರೇನ್ ಯುದ್ದ ಹಿನ್ನೆಲೆಯಲ್ಲಿ ಯೂರೋಪ್ ಮತ್ತಿತರ ಪಾಶ್ಚಾತ್ಯ ದೇಶಗಳು ಮಾಸ್ಕೋದೊಂದಿಗಿನ ವ್ಯವಹಾರವನ್ನು ತಿರಸ್ಕರಿಸಿರುವುದರಿಂದ, ಭಾರತವು ಈ ಸನ್ನಿವೇಶವನ್ನು ತನ್ನ ಅನುಕೂಲಕ್ಕೆ ಪರಿವರ್ತಿಸಲು ಉತ್ಸುಕವಾಗಿದೆ ಎನ್ನಲಾಗಿದೆ. ಭಾರತವು ತನ್ನ ರಷ್ಯಾದ ತೈಲ ಆಮದುಗಳನ್ನು ಸರ್ಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳೊಂದಿಗೆ ದ್ವಿಗುಣಗೊಳಿಸಲು ನೋಡುತ್ತಿದ್ದು, ರಷ್ಯಾದ ರೋಸ್ನೆಫ್ಟ್ ಪಿ ಜೆ ಎಸ್ ಸಿ ಯಿಂದ ಹೆಚ್ಚು-ರಿಯಾಯಿತಿ ಸರಬರಾಜುಗಳನ್ನು ತೆಗೆದುಕೊಳ್ಳಲು ಉತ್ಸುಕವಾಗಿದೆ ಎಂದು ವರದಿಯಾಗಿದೆ. ಭಾರತದ ಸಂಸ್ಕಾರಕಗಳು ಒಟ್ಟಾಗಿ ಭಾರತಕ್ಕೆ ರಷ್ಯಾದ ಕಚ್ಚಾ ತೈಲಕ್ಕಾಗಿ ಆರು ತಿಂಗಳ ಹೊಸ ಪೂರೈಕೆ […]