ಭಾರತ ಸರ್ಕಾರದ ಪ್ರತಿನಿಧಿಯ ಹತ್ಯೆ ಸಂಚು ರೂಪಿಸಿದ್ದ ಐಸಿಸ್ ಆತ್ಮಹತ್ಯಾ ಬಾಂಬರ್ ರಷ್ಯಾದಲ್ಲಿ ಬಂಧನ

ಮಾಸ್ಕೋ: ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ) ಭಾರತ ಸರ್ಕಾರದ ಪ್ರತಿನಿಧಿಯ ವಿರುದ್ಧ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಐಸಿಸ್ ಆತ್ಮಹತ್ಯಾ ಬಾಂಬರ್ ಅನ್ನು ಬಂಧಿಸಿದೆ ಎಂದು ರಷ್ಯಾದ ಮಾಧ್ಯಮದಲ್ಲಿ ವರದಿಯಾಗಿದೆ. ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ಪ್ರಕಾರ, ದಾಯೆಶ್ ಭಯೋತ್ಪಾದಕ ಭಾರತದ ಗಣ್ಯ ನಾಯಕರೊಬ್ಬರ ಮೇಲೆ ದಾಳಿ ನಡೆಸಲು ಯೋಜಿಸುತ್ತಿದ್ದ ಎನ್ನಲಾಗಿದೆ.

ಸದ್ಯ ಹೊರ ಬರುತ್ತಿರುವ ಮಾಹಿತಿಗಳ ಪ್ರಕಾರ ಬಂಧಿತ ಭಯೋತ್ಪಾದಕ ಟರ್ಕಿಯಲ್ಲಿ ಐಸಿಸ್ ಗೆ ದಾಖಲಾಗಿದ್ದ. ರಷ್ಯಾದಲ್ಲಿ ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಸದಸ್ಯನನ್ನು ರಷ್ಯಾದ ಎಫ್‌ಎಸ್‌ಬಿ ಗುರುತಿಸಿ ಬಂಧಿಸಿದೆ. ಈತ ಮಧ್ಯ ಏಷ್ಯಾ ದೇಶವೊಂದರ ಮೂಲನಿವಾಸಿಯಾಗಿದ್ದು, ತನ್ನನ್ನು ತಾನು ಸ್ಫೋಟಿಸುವ ಮೂಲಕ ಭಾರತದ ಆಡಳಿತ ವಲಯದ ಪ್ರತಿನಿಧಿಗಳಲ್ಲಿ ಒಬ್ಬರ ವಿರುದ್ಧ ಭಯೋತ್ಪಾದಕ ದಾಳಿಯನ್ನು ಯೋಜಿಸಿದ್ದನು ಎಂದು ವರದಿಯಾಗಿದೆ.

ಹೆಚ್ಚಿನ ತನಿಖೆಗಳಿಂದ ಮಾಹಿತಿ ಬಹಿರಂಗವಾಗಲಿದೆ.