ರಷ್ಯಾದಲ್ಲಿ ಭಾರತೀಯ ಮಳಿಗೆಗಳನ್ನು ತೆರೆಯುವ ಬಗ್ಗೆ ಮಾತುಕತೆ ನಡೆಯುತ್ತಿದೆ: ವ್ಲಾದಿಮಿರ್ ಪುಟಿನ್

ಮಾಸ್ಕೋ: ಉಕ್ರೇನ್ ಮೇಲಿನ ಆಕ್ರಮಣದ ನಂತರ ಮಾಸ್ಕೋದ ಮೇಲೆ ಪಾಶ್ಚಿಮಾತ್ಯ ದೇಶಗಳ ಭಾರೀ ನಿರ್ಬಂಧಗಳ ನಡುವೆ ರಷ್ಯಾದಲ್ಲಿ ಭಾರತೀಯ ಮಳಿಗೆಗಳ ಸರಪಳಿಗಳನ್ನು ತೆರೆಯಲು ಮಾತುಕತೆ ನಡೆಯುತ್ತಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

“ರಷ್ಯಾದ ವ್ಯಾಪಾರ ವಲಯಗಳು ಮತ್ತು ಬ್ರಿಕ್ಸ್ ದೇಶಗಳ ವ್ಯಾಪಾರ ಸಮುದಾಯದ ನಡುವಿನ ಸಂಬಂಧಗಳು ಹೆಚ್ಚಾಗಿವೆ. ಉದಾಹರಣೆಗೆ, ರಷ್ಯಾದಲ್ಲಿ ಭಾರತೀಯ ಸರಣಿ ಮಳಿಗೆಗಳನ್ನು ತೆರೆಯಲು ಮಾತುಕತೆಗಳು ನಡೆಯುತ್ತಿವೆ ಮತ್ತು ನಮ್ಮ ಮಾರುಕಟ್ಟೆಯಲ್ಲಿ ಚೀನೀ ಕಾರುಗಳು, ಉಪಕರಣಗಳು ಮತ್ತು ಹಾರ್ಡ್‌ವೇರ್‌ಗಳ ಪಾಲು ಹೆಚ್ಚುತ್ತಿವೆ. ಅದಕ್ಕೆ ಪ್ರತಿಯಾಗಿ, ಬ್ರಿಕ್ಸ್ ದೇಶಗಳಲ್ಲಿ ರಷ್ಯಾದ ಉಪಸ್ಥಿತಿಯು ಹೆಚ್ಚುತ್ತಿದೆ. ಚೀನಾ ಮತ್ತು ಭಾರತಕ್ಕೆ ರಷ್ಯಾದ ತೈಲದ ರಫ್ತಿನಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ”.

“ಕೃಷಿ ಸಹಕಾರವು ಕ್ರಿಯಾತ್ಮಕವಾಗಿ ಅಭಿವೃದ್ಧಿ ಹೊಂದುತ್ತಿದೆ. ಬ್ರಿಕ್ಸ್ ರಾಜ್ಯಗಳಿಗೆ ಗಣನೀಯ ಪ್ರಮಾಣದ ರಸಗೊಬ್ಬರಗಳನ್ನು ರಷ್ಯಾ ರಫ್ತು ಮಾಡುತ್ತಿದೆ. ರಷ್ಯಾದ ಐಟಿ ಕಂಪನಿಗಳು ಭಾರತ ಮತ್ತು ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಚಟುವಟಿಕೆಗಳನ್ನು ವಿಸ್ತರಿಸುತ್ತಿವೆ ಮತ್ತು ನಮ್ಮ ಉಪಗ್ರಹಗಳು ಬ್ರೆಜಿಲ್‌ನ 40 ಮಿಲಿಯನ್ ನಿವಾಸಿಗಳಿಗೆ ಟಿವಿ ಪ್ರಸಾರವನ್ನು ಸಕ್ರಿಯಗೊಳಿಸುತ್ತಿವೆ ”ಎಂದು ಅವರು ಹೇಳಿದ್ದಾರೆ.

ಚೀನಾ ದೇಶವು ಆಯೋಜಿದ್ದ ವರ್ಚುವಲ್ ಬ್ರಿಕ್ಸ್ ಬ್ಯುಸಿನೆಸ್ ಫೋರಂನಲ್ಲಿ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.