ಪ್ರಧಾನಿ ಮೋದಿ ಭೇಟಿ ಮಾಡಿದ ಕನ್ನಡ ಚಿತ್ರರಂಗದ ಕಲಾವಿದರು
ಬೆಂಗಳೂರು: ಕನ್ನಡ ಚಿತ್ರರಂಗದ ದಿಗ್ಗಜ ನಟರಾದ ಯಶ್, ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು, ಬ್ಲಾಗರ್ ಅಯ್ಯೋ ಶ್ರದ್ಧಾ ಮತ್ತು ದಿವಂಗತ ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಬೆಂಗಳೂರಿನ ಇಂಡಿಯಾ ಪವಿಲಿಯನ್ ನಲ್ಲಿ ಏರೋ ಶೋನಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದು ಈ ಸಂದರ್ಭ ಭೇಟಿ ನಡೆದಿದೆ. ಪ್ರಧಾನಿ ಮೋದಿಯವರನ್ನು ಭೇಟಿಯಾದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಯಶ್, ಮೋದಿಯವರ ಬಳಿ ಚಿತ್ರೋದ್ಯಮದ ಬಗ್ಗೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ. […]
2024 ರಲ್ಲಿ ಬರಲಿದೆ ಕಾಂತಾರ ಭಾಗ-1: ಪ್ರೀಕ್ವೆಲ್ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ರಿಷಬ್ ಶೆಟ್ಟಿ
ಬಹುಚರ್ಚಿತ ಮತ್ತು ವಿಶ್ವದಾದ್ಯಂತ ಜನಮನ್ನಣೆ ಗಳಿಸಿದ ಕಾಂತಾರ ಚಿತ್ರವು ಯಶಸ್ವಿ ನೂರು ದಿನಗಳನ್ನು ಪೂರೈಸಿದ್ದು, ಈ ಸಂದರ್ಭದಲ್ಲಿ ಕಾಂತಾರದ ಪೂರ್ವಾಭಾವಿ ಕಥೆಯನ್ನೊಳಗೊಂಡ ಕಾಂತಾರ ಪ್ರೀಕ್ವಲ್ ಅನ್ನು 2024ರಲ್ಲಿ ತೆರೆಗೆ ತರಲಿರುವುದಾಗಿ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ. ಥಿಯೇಟರ್ಗಳಲ್ಲಿ “ಕಾಂತಾರ”ದ ಶತದಿನೋತ್ಸವವನ್ನು ಆಚರಿಸಲು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿಷಬ್ ಬಹು ನಿರೀಕ್ಷಿತ ಚಿತ್ರದ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ. ಕಾಂತಾರ ಚಿತ್ರಕ್ಕೆ ಅಪಾರ ಪ್ರೀತಿ ಮತ್ತು ಬೆಂಬಲವನ್ನು ತೋರಿಸಿದ ಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಾವು ತುಂಬಾ ಸಂತೋಷದಲ್ಲಿದ್ದೇವೆ. ದೈವದ ಆಶೀರ್ವಾದದಿಂದ […]
ಆಸ್ಕರ್ ನತ್ತ ಕಾಂತಾರ: ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಟ ವಿಭಾಗಗಳ ಸ್ಪರ್ಧಾ ಪಟ್ಟಿಯಲ್ಲಿ ಸ್ಥಾನ
ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಹೊಂಬಾಳೆ ಫಿಲ್ಮ್ಸ್ ನ ಕಾಂತಾರ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಟ ವಿಭಾಗಗಳಲ್ಲಿ ಅಕಾಡೆಮಿ ಪ್ರಶಸ್ತಿಗಳ ಸ್ಪರ್ಧೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದರರ್ಥ, ಚಲನಚಿತ್ರವು ಮುಖ್ಯ ನಾಮನಿರ್ದೇಶನಗಳಿಗೆ ಆಯ್ಕೆಯಾಗಲು ಆಸ್ಕರ್ ಸದಸ್ಯರು ಮತ ಚಲಾಯಿಸಲು ಅರ್ಹವಾಗಿದೆ. ಕಾಂತಾರ ಆಸ್ಕರ್ ರೇಸ್ಗೆ ತಡವಾಗಿ ಪ್ರವೇಶ ಪಡೆದಿದೆ. ಇದರೊಂದಿಗೆ ಎಸ್ಎಸ್ ರಾಜಮೌಳಿ ಅವರ ಆರ್ಆರ್ಆರ್ ಮತ್ತು ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರಗಳು ತಮ್ಮ ಆಸ್ಕರ್ ಪ್ರಯಾಣವನ್ನು ಪ್ರಾರಂಭಿಸಿವೆ. ಕಾಂತಾರ ಅಂತಿಮ ನಾಮನಿರ್ದೇಶನಕ್ಕೆ […]
ಪ್ರೀತಿಯಲ್ಲಿ ಬಿದ್ದ ರಕ್ಷಿತ್ ಶೆಟ್ಟಿ: ‘ರಿಚರ್ಡ್ ಆಂಟನಿ’ ಚಿತ್ರಕಥೆ ಬರೆಯುತ್ತಿರುವ ಕಿರಿಕ್ ಹುಡುಗನ ಮನದಾಳದ ಮಾತು
ಚಲನ ಚಿತ್ರಗಳೆಂದರೆ ಹೀಗೇ ಇರಬೇಕು ಎನ್ನುವ ಸಿದ್ದ ಸೂತ್ರಗಳನ್ನು ಬದಿಗಿಟ್ಟು, ತಮ್ಮದೇ ಹಾದಿಯಲ್ಲಿ ನಡೆದು ಚಲನಚಿತ್ರವೆಂದರೆ ಚಲನಶೀಲ ಜಗತ್ತು, ಸಿದ್ಧ ಸೂತ್ರಗಳನ್ನು ನೆಚ್ಚಿಕೊಂಡು ಕೂರುತ್ತಲೆ ಇರಬೇಕೆಂದಿಲ್ಲ. ಬದಲಾವಣೆ ಜಗದ ನಿಯಮ ಮತ್ತು ಬದಲಾವಣೆಗಳು ಒಳ್ಳೆಯದಾಗಿದ್ದರೆ ಜನ ಅದನ್ನು ಒಪ್ಪಿಕೊಳ್ಳುತ್ತಾರೆ ಎಂದು ತೋರಿಸಿಕೊಟ್ಟವರು ಹಲವರಿದ್ದಾರೆ. ಕನ್ನಡ ಚಿತ್ರರಂಗವೂ ಈ ಬದಲಾವಣೆಗಳನ್ನು ಹಲವು ಬಾರಿ ಕಂಡಿದೆ. ಶಂಕರ್ ನಾಗ್, ರವಿಚಂದ್ರನ್, ಕಿಚ್ಚ ಸುದೀಪ್ ಮುಂತಾದವರು ಸಿದ್ದ ಸೂತ್ರಗಳನ್ನು ಬದಿಗಿಟ್ಟು ತಮ್ಮದೇ ಹಾದಿಯಲ್ಲಿ ನಡೆದು ಯಶಸ್ಸು ಕಂಡವರು. ಇದೀಗ ಅವರ ಹಾದಿಯಲ್ಲಿ […]
ಯೂಟ್ಯೂಬ್ ನಲ್ಲಿ ಬಿಡುಗಡೆಯಾಯ್ತು ಗಗನ್ ಗಾಂವ್ಕರ್ ಸುಮಧುರ ಕಂಠದಲ್ಲಿ ಸಿಂಗಾರ ಸಿರಿಯೆ ತುಳು ಆವೃತ್ತಿ
ವಿಶ್ವದಾದ್ಯಂತ ಕಿಚ್ಚು ಹಚ್ಚಿದ ಕಾಂತಾರ ಚಿತ್ರದ ಸಿಂಗಾರ ಸಿರಿಯೆ ಗೀತೆಯನ್ನು ಮೆಚ್ಚದವರೇ ಇಲ್ಲ. ಇದೀಗ ಸಿಂಗಾರ ಸಿರಿಯೆ ಹಾಡಿನ ತುಳು ಆವೃತ್ತಿಯು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರತಾಪ್ ಶೆಟ್ಟಿ ಸಾಹಿತ್ಯದ ಗೀತೆಯನ್ನು ಝೀಟಿವಿಯ ಸರೆಗಮಪ ಸಂಗೀತ ರಿಯಾಲಿಟಿ ಶೋ ವಿಜೇತ ಗಗನ್ ಗಾಂವ್ಕರ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಹಾಡಿನ ಮಿಕ್ಸಿಂಗ್ ಅನ್ನು ಉಡುಪಿಯ ನಿನಾದ್ ಆಡಿಯೋ ರೆಕಾರ್ಡಿಂಗ್ ಮಿಕ್ಸಿಂಗ್ ಸ್ಟುಡಿಯೋನ ಶರತ್ ಉಚ್ಚಿಲ ಮಾಡಿದ್ದಾರೆ.