ಪ್ರೀತಿಯಲ್ಲಿ ಬಿದ್ದ ರಕ್ಷಿತ್ ಶೆಟ್ಟಿ: ‘ರಿಚರ್ಡ್ ಆಂಟನಿ’ ಚಿತ್ರಕಥೆ ಬರೆಯುತ್ತಿರುವ ಕಿರಿಕ್ ಹುಡುಗನ ಮನದಾಳದ ಮಾತು

ಚಲನ ಚಿತ್ರಗಳೆಂದರೆ ಹೀಗೇ ಇರಬೇಕು ಎನ್ನುವ ಸಿದ್ದ ಸೂತ್ರಗಳನ್ನು ಬದಿಗಿಟ್ಟು, ತಮ್ಮದೇ ಹಾದಿಯಲ್ಲಿ ನಡೆದು ಚಲನಚಿತ್ರವೆಂದರೆ ಚಲನಶೀಲ ಜಗತ್ತು, ಸಿದ್ಧ ಸೂತ್ರಗಳನ್ನು ನೆಚ್ಚಿಕೊಂಡು ಕೂರುತ್ತಲೆ ಇರಬೇಕೆಂದಿಲ್ಲ. ಬದಲಾವಣೆ ಜಗದ ನಿಯಮ ಮತ್ತು ಬದಲಾವಣೆಗಳು ಒಳ್ಳೆಯದಾಗಿದ್ದರೆ ಜನ ಅದನ್ನು ಒಪ್ಪಿಕೊಳ್ಳುತ್ತಾರೆ ಎಂದು ತೋರಿಸಿಕೊಟ್ಟವರು ಹಲವರಿದ್ದಾರೆ. ಕನ್ನಡ ಚಿತ್ರರಂಗವೂ ಈ ಬದಲಾವಣೆಗಳನ್ನು ಹಲವು ಬಾರಿ ಕಂಡಿದೆ. ಶಂಕರ್ ನಾಗ್, ರವಿಚಂದ್ರನ್, ಕಿಚ್ಚ ಸುದೀಪ್ ಮುಂತಾದವರು ಸಿದ್ದ ಸೂತ್ರಗಳನ್ನು ಬದಿಗಿಟ್ಟು ತಮ್ಮದೇ ಹಾದಿಯಲ್ಲಿ ನಡೆದು ಯಶಸ್ಸು ಕಂಡವರು. ಇದೀಗ ಅವರ ಹಾದಿಯಲ್ಲಿ ಮುನ್ನಡೆಯುತ್ತಿರುವ ಪ್ರಶಾಂತ್ ನೀಲ್, ರಕ್ಷಿತ್, ರಿಷಬ್ ಕಿರಣ ರಾಜ್ ಮತ್ತು ರಾಜ್ ಬಿ ಶೆಟ್ಟಿ ಮುಂತಾದವರು ಒಳ್ಳೆಯ ವಸ್ತು ವಿಷಯಗಳನ್ನು ಕೊಟ್ಟಾಗ ಜನ ಅದನ್ನು ಖಂಡಿತವಾಗಿಯೂ ಸ್ವೀಕರಿಸುತ್ತಾರೆ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

ulidavaru kandante #kannada movie poster #chitragudi #Gandhadagudi @Gandhadagudi Live #ulidavarukandante @UKthemovie @Rakshi… | Movie posters, Movies, Actors images

ಸಿದ್ದ ಸೂತ್ರಗಳನ್ನು ಬದಿಗಿಟ್ಟು ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯ ಗಾಳಿಯನ್ನು ತಂದ ಉಳಿದವರು ಕಂಡಂತೆ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಸದ್ದು ಮಾಡಲಿಲ್ಲವಾದರೂ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಹುಟ್ಟುಹಾಕಲಿರುವ ಮುನ್ಸೂಚನೆಯನ್ನಂತೂ ನೀಡಿತ್ತು. ಕಾಂತಾರ ಯಶಸ್ಸಿನೊಂದಿಗೆ ಅದಕ್ಕೀಗ ಅಧಿಕೃತ ಮುದ್ರೆ ಬಿದ್ದಿದೆ. ಚಿತ್ರಕಥೆಯಲ್ಲಿ ಗಟ್ಟಿತನವಿದ್ದರೆ ಚಿತ್ರರಸಿಕ ಗೆಲ್ಲಿಸುತ್ತಾನೆ ಎನ್ನುವುದು ಈಗ ಸಾಬೀತಾಗುತ್ತಿದೆ.

Image

ಉಳಿದವರು ಕಂಡಂತೆ ರಕ್ಷಿತ್ ಮತ್ತು ರಿಷಭ್ ಅವರ ಕನಸಿನ ಕೂಸು. ಇದೀಗ ಇದರ ಎರಡನೇ ಭಾಗ ತೆರೆಗೆ ಬರುವ ಹಂತದಲ್ಲಿದೆ. ಉಳಿದವರು ಕಂಡಂತೆ ಚಿತ್ರದ ನಾಯಕ ರಿಚ್ಚಿ ಕಥೆಯಾಧಾರಿತ “ರಿಚರ್ಡ್ ಆಂಟನಿ: ಲಾರ್ಡ್ ಆಫ್ ದಿ ಸೀ” ಚಿತ್ರೀಕರಣವನ್ನು ಪ್ರಾರಂಭಿಸಲು ರಕ್ಷಿತ್ ಯೋಜಿಸುತ್ತಿದ್ದಾರೆ. ಈ ಬಾರಿ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ರಕ್ಷಿತ್ ಯೋಜನೆಗೆ ಬೆಂಬಲ ನೀಡುತ್ತಿದೆ. ಯಥಾಪ್ರಕಾರ ಅಜನೀಶ್ ಲೋಕನಾಥ್ ಸಂಗೀತವಿರಲಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಕೆ.ಆರ್.ಜಿ ಕಾರ್ತಿಕ್ ಗೌಡ ಕೈಜೋಡಿಸುತ್ತಿದ್ದಾರೆ ಈ ಚಿತ್ರದ ಬಗ್ಗೆ ರಕ್ಷಿತ್ ತುಂಬಾ ಆತ್ಮವಿಶ್ವಾಸವನ್ನು ಹೊಂದಿದ್ದಾರೆ.

Image

“ಚಿತ್ರವು ತುಂಬಾ ಆಳವಾಗಿದೆ ಆದರೆ ಬರವಣಿಗೆಯ ಪ್ರಕ್ರಿಯೆಯಷ್ಟು ಸಂಕೀರ್ಣವಾಗಿಲ್ಲ. ನಾನು ಈಗಾಗಲೇ ಸ್ಕ್ರಿಪ್ಟ್ ಅನ್ನು ಪ್ರೀತಿಸುತ್ತಿದ್ದೇನೆ, ಆದರೆ ನಾನು ಇನ್ನೂ ಅನೇಕ ಡ್ರಾಫ್ಟ್‌ಗಳೊಂದಿಗೆ ಅದನ್ನು ಉತ್ತಮಗೊಳಿಸುತ್ತಿದ್ದೇನೆ. ನಾನು ಪಾತ್ರವನ್ನು ಮಾಡಲು ಪ್ರಾರಂಭಿಸಿದಾಗ ನಾನು ರಿಚ್ಚಿಯೊಂದಿಗೆ ಪ್ರೀತಿಯಲ್ಲಿ ಬೀಳಬಹುದು ಎಂದು ನಾನು ಭಾವಿಸುತ್ತೇನೆ” ಎಂದು ರಕ್ಷಿತ್ ಹೇಳಿದ್ದಾರೆ.

Image

ರಕ್ಷಿತ್ ಪ್ರಸ್ತುತ ಆಧ್ಯಾತ್ಮಿಕ ಪ್ರಯಾಣದಲ್ಲಿದ್ದಾರೆ ಮತ್ತು ಇದು ಅವರಿಗೆ ಸಹಾಯ ಮಾಡುತ್ತಿದೆ ಎಂದು ಅವರು ನಂಬುತ್ತಾರೆ. “ಇದು ಖಂಡಿತವಾಗಿಯೂ ನನ್ನ ನಟನೆಗೆ ಸಹಾಯ ಮಾಡುತ್ತದೆ, ಇದು ಬರಹಗಾರನಾಗಿ ನನ್ನನ್ನು ಪುನರುಜ್ಜೀವನಗೊಳಿಸುತ್ತದೆ. ಇದು ನನ್ನನ್ನು ಕಾಲ್ಪನಿಕ ಜಗತ್ತಿಗೆ ಎಳೆಯುತ್ತದೆ” ಎಂದು ಅವರು ಹೇಳಿದ್ದಾರೆ.

Image

ಚಿತ್ರದ ಟ್ರೈಲರ್ ಅದಾಗಲೇ ಜನರಲ್ಲಿ ಕುತೂಹಲವನ್ನು ಮೂಡಿಸಿದ್ದು, ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

ರಕ್ಷಿತ್ ಸದ್ಯಕ್ಕೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಶೂಟಿಂಗ್ ನಲ್ಲಿ ವ್ಯಸ್ತರಾಗಿದ್ದಾರೆ.