ಬಹುನಿರೀಕ್ಷಿತ ಕಾಂತಾರ-2 ಪ್ರೀಕ್ವಲ್ ನ ಪೋಸ್ಟರ್ ಬಿಡುಗಡೆ; ಶೀಘ್ರವೆ ಚಿತ್ರೀಕರಣ ಆರಂಭ…

ದೇಶ ವಿದೇಶಗಳಲ್ಲಿ ಖಾತಿ ಗಳಿಸಿದ ಕಾಂತಾರ-1 ರ ಪ್ರೀಕ್ವಲ್ ಕಾಂತಾರ-2ರ ಪ್ರಥಮ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ಟಿ X ನಲ್ಲಿ ಪೋಸ್ಟರ್ ಹಂಚಿಕೊಂಡಿದ್ದು, ಚಿತ್ರೀಕರಣ ಶೀಘ್ರವೆ ಆರಂಭವಾಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಮತ್ತೊಮ್ಮೆ ಮಾಸ್ ಲುಕ್ ನಲ್ಲಿ ತೆರೆಗೆ ಬರಲಿದ್ದಾರೆ ರಾಜ್.ಬಿ.ಶೆಟ್ಟಿ: ಟೋಬಿ ಟ್ರೈಲರ್ ಸೃಷ್ಟಿಸಿದೆ ಟ್ರೆಂಡ್!!

ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ಮತ್ತು ವೃಷಭ ವಾಹನದಂತಹ ಚಲನಚಿತ್ರಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿರುವ ರಾಜ್.ಬಿ.ಶೆಟ್ಟಿ ಇದೀಗ ಮತ್ತೊಮ್ಮೆ ಟೋಬಿ ಮೂಲಕ ಮಾಸ್ ಲುಕ್ ನಲ್ಲಿ ಪ್ರೇಕ್ಷಕರ ಎದುರು ಬಂದಿದ್ದಾರೆ. ಬಹುನಿರೀಕ್ಷಿತ ಟೋಬಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಅದಾಗಲೇ 2 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದು ಟ್ರೆಂಡ್ ಸೃಷ್ಟಿಸಿದೆ. ರಾಜ್ ಗೆಳೆಯರಾದ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ರಾಜ್.ಬಿ.ಶೆಟ್ಟಿ ಚಿತ್ರಕಥೆ ಬರೆದು, ನಟಿಸಿರುವ ಚಿತ್ರವು ಬಹಳ ಕುತೂಹಲಗಳನ್ನು […]

ರಿಷಬ್ ಶೆಟ್ಟಿ ಹೊಸ ಹೆಜ್ಜೆ “ಕೆರಾಡಿ ಸ್ಟುಡಿಯೋಸ್” ಸ್ಥಾಪನೆ: ಚಿತ್ರಗಳ ಮಾರ್ಕೆಂಟಿಗ್ ಗಾಗಿ ಹೊಸ ವೇದಿಕೆ

ಚಿತನಟ, ನಿರ್ದೇಶಕ ರಿಷಬ್ ಶೆಟ್ಟಿ ಹೊಸ ಹೆಜ್ಜೆ, ಹೊಸ ಕನಸೊಂದನ್ನು ನನಸಾಗಿಸಿದ್ದು, ಚಿತ್ರಗಳ ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳಿಗಾಗಿ “ಕೆರಾಡಿ ಸ್ಟುಡಿಯೋಸ್” ಅನ್ನು ಸ್ಥಾಪಿಸಿದ್ದಾರೆ. ಚಿತ್ರದ ಗೆಲುವಿಗೆ ನಿರ್ಮಾಣದಷ್ಟೇ ಪ್ರಚಾರವೂ ಅತ್ಯಗತ್ಯವಾಗಿದ್ದು, ತಾವು ಹುಟ್ಟಿ ಬೆಳೆದ ಊರಾದ ಕುಂದಾಪುರದ ಸಣ್ಣ ಹಳ್ಳಿ ‘ಕೆರಾಡಿ’ಯ ಹೆಸರಿನಲ್ಲಿ ಸಂಸ್ಥೆಯನ್ನು ಸ್ಥಾಪಿಸಿದಾರೆ. ತಮ್ಮ ಹೊಸ ಪ್ರಯತ್ನಕ್ಕೆ ಚಿತ್ರರಸಿಕರ ಬೆಂಬಲವನ್ನು ಅವರು ಕೋರಿದ್ದಾರೆ.  

ಸೆಟ್ಟೇರುವುದಕ್ಕೂ ಮುನ್ನವೇ ವಿವಾದ ಸುಳಿಯಲ್ಲಿ ಕಾಂತಾರ-2: ನಿತ್ಯವೂ ದೈವಕ್ಕೆ ಅಪಚಾರ ನಡೆಯುತ್ತಿರುವುದನ್ನು ನೋಡಿ ಬೇಸತ್ತ ತುಳುವರು

ಬೆಂಗಳೂರು: ದೇಶ ಮಾತ್ರವಲ್ಲ ವಿದೇಶಗಳಲ್ಲೂ ತುಳುನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ ಕಾಂತಾರ ಚಲನಚಿತ್ರವು ಒಂದಲ್ಲ ಒಂದು ವಿವಾದದ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳುತ್ತಲೇ ಬಂದಿದೆ. ವರಾಹರೂಪಂ ಹಾಡಿನ ಮೇಲೆ ಕೃತಿ ಚೌರ್ಯದ ಆರೋಪದಿಂದ ಹಿಡಿದು ದೈವಾರಾಧನೆಗೆ ಅಪಚಾರ ಮಾಡಿದ ಆರೋಪದವರೆಗೆ ಕಾಂತಾರ ಚಿತ್ರ ಮತ್ತು ಅದರ ನಿರ್ಮಾತೃಗಳ ಸುತ್ತ ಒಂದಲ್ಲಾ ಒಂದು ರೀತಿಯಲ್ಲಿ ವಿವಾದಗಳು ಸುತ್ತಿಕೊಂಡಿವೆ. ಇದೀಗ ಈ ಆರೋಪಕ್ಕೆ ಹೊಸ ಸೇರ್ಪಡೆಯಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಗಂಗಮ್ಮ ತಾಯಿಗೆ ಪಂಜುರ್ಲಿ ದೈವದದಂತೆ ಅಲಂಕಾರ ಮಾಡಿರುವುದು ತುಳುವರ ಕೋಪಕ್ಕೆ ಕಾರಣವಾಗಿದೆ. […]

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: ಅತ್ಯಂತ ಭರವಸೆಯ ನಟ ವಿಭಾಗದಲ್ಲಿ ರಿಷಬ್ ಶೆಟ್ಟಿ ಆಯ್ಕೆ

  ದಾದಾ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳು 2023- ಅತ್ಯಂತ ಭರವಸೆಯ ನಟ ವಿಭಾಗದಲ್ಲಿ ಕಾಂತಾರ ಚಲನಚಿತ್ರದ ನಟ ರಿಷಬ್ ಶೆಟ್ಟಿ ಆಯ್ಕೆಯಾಗಿದ್ದಾರೆ. ರಿಷಬ್ ಅವರು ಫೆ.20ರಂದು ಮುಂಬೈನ ತಾಜ್ ಲ್ಯಾಂಡ್ ಎಂಡ್ ಹೋಟೆಲ್‌ನಲ್ಲಿ ಪ್ರಶಸ್ತಿ ಯನ್ನು ಸ್ವೀಕರಿಸಲಿದ್ದಾರೆ.