ಮತ್ತೊಮ್ಮೆ ಮಾಸ್ ಲುಕ್ ನಲ್ಲಿ ತೆರೆಗೆ ಬರಲಿದ್ದಾರೆ ರಾಜ್.ಬಿ.ಶೆಟ್ಟಿ: ಟೋಬಿ ಟ್ರೈಲರ್ ಸೃಷ್ಟಿಸಿದೆ ಟ್ರೆಂಡ್!!

ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ಮತ್ತು ವೃಷಭ ವಾಹನದಂತಹ ಚಲನಚಿತ್ರಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿರುವ ರಾಜ್.ಬಿ.ಶೆಟ್ಟಿ ಇದೀಗ ಮತ್ತೊಮ್ಮೆ ಟೋಬಿ ಮೂಲಕ ಮಾಸ್ ಲುಕ್ ನಲ್ಲಿ ಪ್ರೇಕ್ಷಕರ ಎದುರು ಬಂದಿದ್ದಾರೆ. ಬಹುನಿರೀಕ್ಷಿತ ಟೋಬಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಅದಾಗಲೇ 2 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದು ಟ್ರೆಂಡ್ ಸೃಷ್ಟಿಸಿದೆ. ರಾಜ್ ಗೆಳೆಯರಾದ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.

ರಾಜ್.ಬಿ.ಶೆಟ್ಟಿ ಚಿತ್ರಕಥೆ ಬರೆದು, ನಟಿಸಿರುವ ಚಿತ್ರವು ಬಹಳ ಕುತೂಹಲಗಳನ್ನು ಹುಟ್ಟುಹಾಕಿದ್ದು, ಜನರ ನಿರೀಕ್ಷೆಯೂ ಹೆಚ್ಚಿದೆ. ಮೂಗ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಜ್, ಗರುಡ ಗಮನ ವೃಷಭ ವಾಹನದ ಪಾತ್ರವನ್ನು ನೆನಪಿಸುತ್ತಿದ್ದಾರೆ. ಚಿತ್ರದ ಸಂಭಾಷಣೆಗಳು ಅದಾಗಲೇ ಜನರನ್ನು ಆಕರ್ಷಿಸುತ್ತಿದೆ.

ಚೈತ್ರ ಜೆ ಆಚಾರ್, ಸಂಯುಕ್ತ ಹೊರನಾಡು, ಗೋಪಾಲಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ ಮುಂತಾದವರು ತಾರಾಗಣದಲ್ಲಿದ್ದಾರೆ. ನಿರ್ದೇಶನದ ಜವಾಬ್ದಾರಿ ತುಳಸಿ ಆಲ್ಚಲಕ್ಕಲ್ ಅವರದ್ದಾದರೆ, ಲೈಟರ್ ಬುದ್ಧ ಫಿಲ್ಮ್ಸ್ – ಅಗಸ್ತ್ಯ ಫಿಲ್ಮ್ಸ್ – ಕಾಫಿ ಗ್ಯಾಂಗ್ ಸ್ಟುಡಿಯೋ – ಸ್ಮೂತ್ ಸೈಲರ್ಸ್ ಬ್ಯಾನರ್ಸ್ ನಡಿ ಚಿತ್ರ ಮೂಡಿಬಂದಿದ್ದು , ಕೆವಿಎನ್ ಪ್ರೊಡಕ್ಷನ್ಸ್ ಜೊತೆ ನೀಡಿದೆ. ಸಂಗೀತ ಮತ್ತು ಹಿನ್ನೆಲೆ ಸಂಗೀತ ಮಿಧುನ್ ಮುಕುಂದನ್, ಡಿಒಪಿ ಪ್ರವೀಣ್ ಶ್ರೀಯಾನ್ ಹಾಗೂ ಸಂಕಲನ ನಿತಿನ್ ಶೆಟ್ಟಿ ಅವರದ್ದಾಗಿದೆ.

ಆಗಸ್ಟ್ 25 ರಂದು ಚಿತ್ರ ತೆರೆಕಾಣಲಿದೆ.