ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಮಾತಿನ ಚಕಮಕಿ ಪ್ರಕರಣ: ಪಂದ್ಯದ ಶುಲ್ಕದ 100% ದಂಡ ವಿಧಿಸಿದ ಬಿಸಿಸಿಐ

ಸೋಮವಾರ ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಮತ್ತು ನವೀನ್-ಉಲ್-ಹಕ್ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. ಕೊಹ್ಲಿ, ಗಂಭೀರ್ ಅವರು ಲೆವೆಲ್ 2 ಅಪರಾಧದಲ್ಲಿ ತಪ್ಪಿತಸ್ಥರೆಂದು ಕಂಡುಬಂದ ನಂತರ ಅವರ ಪಂದ್ಯದ ಶುಲ್ಕದ 100% ದಂಡವನ್ನು ವಿಧಿಸಲಾಯಿತು. ನವೀನ್-ಉಲ್-ಹಕ್ ಅವರ ಲೆವೆಲ್ 1 ಅಪರಾಧಕ್ಕಾಗಿ ತಮ್ಮ ಪಂದ್ಯದ ಶುಲ್ಕದ 50% ರಷ್ಟನ್ನು ಕಳೆದುಕೊಂಡರು. […]

ಮಹಿಳಾ ಪ್ರೀಮಿಯರ್ ಲೀಗ್‌ : 3.4 ಕೋಟಿ ರೂ ಗೆ ಆರ್.ಸಿ.ಬಿ ಪಾಲಾದ ಸ್ಮೃತಿ ಮಂಧಾನಾ

ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್‌ನ (WPL) ಉದ್ಘಾಟನಾ ಆವೃತ್ತಿಯ ಹರಾಜಿನಲ್ಲಿ ಮಾರಾಟವಾದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಾರತದ ಉಪನಾಯಕಿ ಮತ್ತು ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಫೆಬ್ರವರಿ 13 ಸೋಮವಾರದಂದು ಇತಿಹಾಸ ಬರೆದಿದ್ದಾರೆ. ಮುಂಬೈನಲ್ಲಿ ನಡೆದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸ್ಮೃತಿ ಅವರನ್ನು ಬರೋಬ್ಬರಿ 3.4 ಕೋಟಿ ರೂ.ಗಳ ಮೊತ್ತಕ್ಕೆ ಖರೀದಿಸಿದೆ. ಏತನ್ಮಧ್ಯೆ,ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್‌ಗೆ 1.8 ಕೋಟಿ ರೂ.ಗೆ ಮಾರಾಟವಾಗಿದ್ದಾರೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಆಶ್ಲೀ […]

ಐಪಿಎಲ್ ಮಿನಿ ಹರಾಜು: 18.5 ಕೋಟಿಗೆ ಪಂಜಾಬ್ ಪಾಲಾದ ಸ್ಯಾಮ್ಯುಯೆಲ್ ಕರ್ರನ್; ಚೆನೈ ತಂಡಕ್ಕೆ ಬೆನ್ ಸ್ಟೋಕ್ಸ್ ಸೇರ್ಪಡೆ

ಕೊಚ್ಚಿ: ಭಾರತದ ಅತಿದೊಡ್ಡ ಕ್ರೀಡಾಕೂಟ ಇಂಡಿಯನ್ ಪ್ರೀಮಿಯರ್ ಲೀಗ್ ಬೇಸಿಗೆಯಲ್ಲಿ ಪ್ರಾರಂಭವಾಗಲಿದ್ದು ಅದಕ್ಕೆ ಪೂರ್ವಭಾವಿಯಾಗಿ ಮಿನಿ ಹರಾಜು ನಡೆಸಲು ಸಂಘಟನಾ ಸಂಸ್ಥೆ ನಿರ್ಧರಿಸಿತ್ತು. ಐಪಿಎಲ್‌ನ 16ನೇ ಆವೃತ್ತಿಗಾಗಿ ಒಟ್ಟು 991 ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ಇಂದು ಎರ್ನಾಕುಲಂ ನಲ್ಲಿ 405 ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆದಿದೆ. ಎಲ್ಲಾ ಸ್ವರೂಪಗಳಲ್ಲಿಯೂ ಆಡುವ ಇಂಗ್ಲಿಷ್ ಕ್ರಿಕೆಟಿಗ ಸ್ಯಾಮ್ಯುಯೆಲ್ ಮ್ಯಾಥ್ಯೂ ಕರ್ರನ್ ದಾಖಲೆಯ 18.5 ಕೋಟಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. 17.5 ಕೋಟಿ ಮೊತ್ತಕ್ಕೆ ಕ್ಯಾಮರೂನ್ ಗ್ರೀನ್ ಮುಂಬೈ ಇಂಡಿಯನ್ಸ್ […]

ಕೋಹ್ಲಿ ಅಭಿಮಾನಿಯಿಂದ ರೋಹಿತ್ ಶರ್ಮಾ ಬೆಂಬಲಿಗನ ಹತ್ಯೆ: ಟ್ವಿಟರ್ ನಲ್ಲಿ ಅರೆಸ್ಟ್ ಕೊಹ್ಲಿ ಟ್ರೆಂಡ್

ಚೆನ್ನೈ: ಐಪಿಲ್ ಕ್ರಿಕೆಟ್ ನ ಹುಚ್ಚು ಅಭಿಮಾನವು ಯುವಕನೊಬ್ಬನ ಹತ್ಯೆಯಲ್ಲಿ ದುರಂತ ಅಂತ್ಯ ಕಂಡಿದೆ. ತಮಿಳುನಾಡಿನಲ್ಲಿ ರೋಹಿತ್ ಶರ್ಮಾ ಬೆಂಬಲಿಗನನ್ನು ವಿರಾಟ್ ಅಭಿಮಾನಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಘಟನೆಯಲ್ಲಿ 24 ವರ್ಷದ ಪಿ ವಿಘ್ನೇಶ್ ಅನ್ನು ಎಸ್ ಧರ್ಮರಾಜ್ ಎನ್ನುವವನು ಕೊಲೆಮಾಡಿದ್ದಾನೆ. ಈ ಇಬ್ಬರೂ ಅರಿಯಲೂರು ಜಿಲ್ಲೆಯ ಪೊಯ್ಯೂರು ಗ್ರಾಮದವರು. ವಿಘೇಶ್ ಮುಂಬೈ ಇಂಡಿಯನ್ ಅಭಿಮಾನಿಯಾಗಿದ್ದರೆ, ಧರ್ಮರಾಜ್ ಆರ್.ಸಿ.ಬಿಯ ಕಟ್ಟರ್ ಅಭಿಮಾನಿ. ಈ ಇಬ್ಬರೂ ಕೂಡಾ ಮದ್ಯ ಸೇವಿಸಿದ್ದರು. ಆರಂಭಿಕ ತನಿಖೆಯ ಪ್ರಕಾರ, ಇಂಡಿಯನ್ ಪ್ರೀಮಿಯರ್ […]

ಮರಳಿ ಗೂಡು ಸೇರಲಿದೆ ಆರ್‌ಸಿಬಿ ಹಕ್ಕಿ: 2023 ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮರಳುತ್ತೇನೆಂದ ಎಬಿ ಡಿವಿಲಿಯರ್ಸ್!

ಬೆಂಗಳೂರು: ಮಿಸ್ಟರ್ 360 ಡಿಗ್ರಿ ಎಂದು ಪರಿಗಣಿಸಲಾಗುವ, ಕ್ರಿಕೆಟ್ ಜಗತ್ತಿನ ಬಹು ಬೇಡಿಕೆಯ ಆಟಗಾರ, ಆರ್‌ಸಿಬಿಯ ಹಕ್ಕಿ ಎಬಿ ಡಿವಿಲಿಯರ್ಸ್ ಮರಳಿ ಗೂಡು ಸೇರಲಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಕೆಲವು ತಿಂಗಳ ನಂತರ, ಎಬಿ ಡಿವಿಲಿಯರ್ಸ್ ತಮ್ಮ ಐಪಿಎಲ್ ಫ್ರಾಂಚೈಸಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮರಳುವುದಾಗಿ ಹೇಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿ ಮುಂದಿನ ವರ್ಷ ಐಪಿಎಲ್‌ಗೆ “ಖಂಡಿತವಾಗಿ” ಮರಳಲಿದ್ದೇನೆ ಎಂದು ಅವರು ಹೇಳಿದ್ದಾರೆ. “ವಿರಾಟ್ ಅದನ್ನು ಖಚಿತಪಡಿಸಿದ್ದು ಕೇಳಿ ನನಗೆ ಖುಷಿಯಾಗಿದೆ. ನಿಜ ಹೇಳಬೇಕೆಂದರೆ, […]