ಐಪಿಎಲ್ ಮಿನಿ ಹರಾಜು: 18.5 ಕೋಟಿಗೆ ಪಂಜಾಬ್ ಪಾಲಾದ ಸ್ಯಾಮ್ಯುಯೆಲ್ ಕರ್ರನ್; ಚೆನೈ ತಂಡಕ್ಕೆ ಬೆನ್ ಸ್ಟೋಕ್ಸ್ ಸೇರ್ಪಡೆ

ಕೊಚ್ಚಿ: ಭಾರತದ ಅತಿದೊಡ್ಡ ಕ್ರೀಡಾಕೂಟ ಇಂಡಿಯನ್ ಪ್ರೀಮಿಯರ್ ಲೀಗ್ ಬೇಸಿಗೆಯಲ್ಲಿ ಪ್ರಾರಂಭವಾಗಲಿದ್ದು ಅದಕ್ಕೆ ಪೂರ್ವಭಾವಿಯಾಗಿ ಮಿನಿ ಹರಾಜು ನಡೆಸಲು ಸಂಘಟನಾ ಸಂಸ್ಥೆ ನಿರ್ಧರಿಸಿತ್ತು. ಐಪಿಎಲ್‌ನ 16ನೇ ಆವೃತ್ತಿಗಾಗಿ ಒಟ್ಟು 991 ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ಇಂದು ಎರ್ನಾಕುಲಂ ನಲ್ಲಿ 405 ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆದಿದೆ.

ಎಲ್ಲಾ ಸ್ವರೂಪಗಳಲ್ಲಿಯೂ ಆಡುವ ಇಂಗ್ಲಿಷ್ ಕ್ರಿಕೆಟಿಗ ಸ್ಯಾಮ್ಯುಯೆಲ್ ಮ್ಯಾಥ್ಯೂ ಕರ್ರನ್ ದಾಖಲೆಯ 18.5 ಕೋಟಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. 17.5 ಕೋಟಿ ಮೊತ್ತಕ್ಕೆ ಕ್ಯಾಮರೂನ್ ಗ್ರೀನ್ ಮುಂಬೈ ಇಂಡಿಯನ್ಸ್ ಪಾಲಾಗಿದ್ದರೆ, ಬೆನ್ ಸ್ಟೋಕ್ಸ್ 16.25 ಕೋಟಿ ಮೊತ್ತಕ್ಕೆ ಚೈನ್ನೈ ಸುಪರ್ ಕಿಂಗ್ಸ್ ಪಾಲಾಗಿದ್ದಾರೆ. 16.25 ಕೋಟಿ ಗೆ ಕ್ರಿಸ್ ಮೋರಿಸ್ ರಾಜಸ್ಥಾನ ರಾಯಲ್ಸ್ ಮತ್ತು 16 ಕೋಟಿ ಗೆ ಯುವರಾಜ್ ಸಿಂಗ್ ದಿಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ನಿಕೋಲಸ್ ಪೂರನ್ ಅವರನ್ನು16 ಕೋಟಿ ರೂಗೆ ಖರೀದಿಸಿದೆ.

Image

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಸ್ಯಾಮ್ ಕರ್ರಾನ್ , ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ (17 ಕೋಟಿ) ಅವರನ್ನು ಸೋಲಿಸಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಕ್ರಿಕೆಟಿಗರಾಗಿದ್ದಾರೆ.

Image

ಭಾರತದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಮತ್ತು ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಸನ್‌ರೈಸರ್ಸ್ ಹೈದರಾಬಾದ್‌ಗೆ ಸೇರ್ಪಡೆಗೊಂಡಿದ್ದಾರೆ. ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್, ಬಾಂಗ್ಲಾದೇಶ ಟೆಸ್ಟ್ ನಾಯಕ ಶಕಿಬ್ ಅಲ್ ಹಸನ್ ಮತ್ತು ದಕ್ಷಿಣ ಆಫ್ರಿಕಾದ ರಿಲೀ ರೊಸ್ಸೌವ್ ಮಾರಾಟವಾಗದೆ ಉಳಿದಿದ್ದಾರೆ.

Image