ಪುರಂದರ ದಾಸರ ಆರಾಧನೆ ಪ್ರಯುಕ್ತ 600 ಸ್ತ್ರೀಯರಿಂದ ಶತಕಂಠ ಗಾಯನ
ಉಡುಪಿ: ಪುರಂದರದಾಸರ ಆರಾಧನೆ ಪ್ರಯುಕ್ತ ಶುಕ್ರವಾರ ಪರ್ಯಾಯ ಪುತ್ತಿಗೆ ಮಠದಿಂದ ಶತಕಂಠ ಗಾಯನ ಆಯೋಜಿಸಲಾಯಿತು. ಸುಗುಣ ಶ್ರೀ ಭಜನಾ ಮಂಡಳಿಯ ಶಾಂತ ಹೆಬ್ಬಾರ್ ಅವರ ನೇತೃತ್ವದಲ್ಲಿ, ರತ್ನ ಸಂಜೀವ ಕಲಾ ಮಂಡಲ ಸರಳೇ ಬೆಟ್ಟು ಇದರ ಸಂಯುಕ್ತ ಆಶ್ರಯದಲ್ಲಿ ಸುಮಾರು 600 ಸ್ತ್ರೀಯರು 3 ಗಂಟೆಗಳ ಕಾಲ ಶ್ರೀ ಪುರಂದರ ದಾಸರ ಕೀರ್ತನೆಗಳನ್ನು ಹಾಡಿದರು. ಶ್ರೀ ಕೃಷ್ಣ, ಮುಖ್ಯ ಪ್ರಾಣ ದೇವರಿಗೂ ಶ್ರೀ ಪುರಂದರದಾಸರಿಗೂ ವಿಶೇಷ ನಂಟು ಇದ್ದು ಉಡುಪಿ ಶ್ರೀ ಕೃಷ್ಣ ಮತ್ತು ಪ್ರಾಣ ದೇವರನ್ನು […]
ಪುತ್ತಿಗೆ ಮಠ ಕಿರಿಯ ಶ್ರೀಗಳಿಂದ ಶ್ರೀ ಕೃಷ್ಣನಿಗೆ ವಿದ್ಯುಕ್ತ ಪೂಜೆ
ಉಡುಪಿ: ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿಗಳಾದ ಸುಶ್ರೀಂದ್ರತೀರ್ಥರು ಶ್ರೀಕೃಷ್ಣ ಮೂರ್ತಿಯನ್ನು ಸ್ಪರ್ಶಿಸಿ ಪೂಜೆ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ಪುತ್ತಿಗೆ ಮಠದ ಹಿರಿಯ ಶ್ರೀಗಳು ಕಿರಿಯ ಶ್ರೀಗಳಿಗೆ ಶ್ರೀಕೃಷ್ಣನ ಮೂರ್ತಿಯನ್ನು ಮುಟ್ಟಿಸಿ, ಪೂಜಾಧಿಕಾರ ನೀಡಿದ್ದರು ಎನ್ನಲಾಗಿದ್ದು, ಭಾನುವಾರ ಕಿರಿಯ ಯತಿಗಳೇ ಪೂಜೆ ನಡೆಸಿದ್ದಾರೆ. ಆ ಮೂಲಕ ಕಳೆದ ಕೆಲವು ದಿನಗಳಿಂದ ಇದ್ದ ಕೃಷ್ಣ ಪೂಜಾಧಿಕಾರದ ಬಗೆಗಿನ ಸಂದೇಹಗಳಿಗೆ ತೆರೆ ಎಳೆದಿದ್ದಾರೆ.
ಸಿಡ್ನಿಯಲ್ಲಿ ಪುತ್ತಿಗೆ ಮಠದ ವತಿಯಿಂದ ತಲೆ ಎತ್ತಲಿರುವ ಅತಿ ದೊಡ್ಡ ವೆಂಕಟ ಕೃಷ್ಣ ದೇವಸ್ಥಾನದ ಕಾಮಗಾರಿಯ ಭೂಮಿಪೂಜೆ
ಸಿಡ್ನಿ: ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವೆಂಕಟ ಕೃಷ್ಣ ದೇವಸ್ಥಾನವನ್ನು ನಿರ್ಮಿಸಲಿದ್ದು, ದೇವಾಲಯದ ಭೂಮಿ ಪೂಜೆ ಇತ್ತೀಚೆಗೆ ನಡೆಯಿತು. ಮಂಗಳವಾರ ಸಿಡ್ನಿಯಲ್ಲಿ ‘ದಿ ಹ್ಯಾನ್ಸ್ ಇಂಡಿಯಾ’ದೊಂದಿಗೆ ಮಾತನಾಡಿದ ಸ್ವಾಮೀಜಿ ಅವರ ಆಪ್ತ ಕಾರ್ಯದರ್ಶಿ ಪ್ರಸನ್ನಾಚಾರ್ಯ, ಸಿಡ್ನಿಯ ಕೃಷ್ಣ ಭಕ್ತರು ಶ್ರೀ ವೆಂಕಟ ಕೃಷ್ಣ ದೇವಸ್ಥಾನದ ಭೂಮಿಪೂಜೆಯ ಐತಿಹಾಸಿಕ ಘಟನೆಗೆ ಸಾಕ್ಷಿಯಾದರು. ಪ್ರಸ್ತಾವಿತ ದೇವಾಲಯವನ್ನು 4738 ಚದರ ಮೀಟರ್‌ನಲ್ಲಿ ನಿರ್ಮಿಸಲಾಗುವುದು. ಸಿಡ್ನಿ ಮತ್ತು ಆಸ್ಟ್ರೇಲಿಯಾದಲ್ಲಿ ವಾಸಿಸುವ ಎಲ್ಲಾ ಹಿಂದೂಗಳಿಗೆ ದೊಡ್ಡ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಇದು […]
ಪುತ್ತಿಗೆ ಶ್ರೀಗಳ ಸುವರ್ಣ ಚಾತುರ್ಮಾಸ್ಯ ಕಾರ್ಯಕ್ರಮ
ಉಡುಪಿ: ಶುಕ್ರವಾರದಂದು ಮಠದ ಭಕ್ತರಾದ ಬೆಂಗಳೂರಿನ ವೆಂಕಟರಮಣ ಸೋಮಯಾಜಿ ಅವರು ಭಾವೀ ಪರ್ಯಾಯ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಸುಗುಣೇಂದ್ರತೀರ್ಥ ಶ್ರೀ ಪಾದರನ್ನು ಆದರದಿಂದ ಬರಮಾಡಿಕೊಂಡು ವೈಭವೋಪೇತವಾಗಿ ಸಂಸ್ಥಾನಪೂಜೆ ಹಾಗೂ ಭಿಕ್ಷಾವಂದನೆ ಇತ್ಯಾದಿ ಕಾರ್ಯಕ್ರಮಗಳನ್ನು ನೆರವೇರಿಸಿ ಗುರುಗಳ ಹಾಗೂ ಶ್ರೀ ವಿಠಲ ದೇವರ ಅನುಗ್ರಹ ಪಡೆದುಕೊಂಡಾರು. ಈ ಸಂದರ್ಭದಲ್ಲಿ ಕೋಟಿ ಗೀತಾ ಲೇಖನ ಯಜ್ಞ ದೀಕ್ಷಾ ಅಭಿಯಾನ ನಡೆಯಿತು.
ಪುತ್ತಿಗೆ ಶ್ರೀಪಾದರಿಂದ ಚತುರ್ಥ ಪರ್ಯಾಯ ಪ್ರಯುಕ್ತ ಸಂಚಾರ
ಮುಂಬೈ: ಮಹಾರಾಷ್ಟ್ರದ ನಾಶಿಕ್ ನಗರದಲ್ಲಿ ಪುತ್ತಿಗೆ ಮಠ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಚತುರ್ಥ ಪರ್ಯಾಯ ಪ್ರಯುಕ್ತ ಸಂಚಾರ ನಡೆಯಿತು. ಈ ಸಂದರ್ಭದಲ್ಲಿ ಉಭಯ ಶ್ರೀಪಾದರು ನಾಶಿಕ್ ನಗರದ ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಿದರು. ಇಸ್ಕಾನ್ ಭಕ್ತರು ಉಭಯ ಶ್ರೀಪಾದರನ್ನು ವೈಭವದಿಂದ ಬರಮಾಡಿಕೊಂಡು, ಶ್ರೀಪಾದರಿಗೆ ಗೌರವ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಸುಮಾರು ಐದು ನೂರಕ್ಕೂ ಹೆಚ್ಚು ಇಸ್ಕಾನ್ ಭಕ್ತರು ಶ್ರೀಪಾದರಿಂದ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದುಕೊಂಡರು.