ಹೊಂಬಾಳೆ ಫಿಲಂಮ್ಸ್ ನ ಪ್ರಭಾಸ್-ಪ್ರಶಾಂತ್ ನೀಲ್-ಪೃಥ್ವಿರಾಜ್ ಕಾಂಬಿನೇಷನ್ ನ ಬಹು ನಿರೀಕ್ಷಿತ ಚಿತ್ರ ‘ಸಲಾರ್’ ಟೀಸರ್ ರಿಲೀಸ್
ಪ್ರಭಾಸ್ ನಟನೆ, ಹೊಂಬಾಳೆ ನಿರ್ಮಾಣ, ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರವನ್ನು 2020 ರಲ್ಲಿ ಘೋಷಿಸಲಾಯಿತಾದರೂ ಕೋವಿಡ್ ನಿಂದಾಗಿ ಚಿತ್ರ ನಿರ್ಮಾಣದ ಕೆಲಸವು ಹಿನ್ನಡೆಯನ್ನು ಅನುಭವಿಸಿತು. ಎರಡು ವರ್ಷಗಳ ಬಳಿಕ ಇದೀಗ ಮೊದಲನೆ ಬಾರಿಗೆ ಸಲಾರ್ ನ ಟೀಸರ್ ಅನ್ನು ಜುಲೈ 6 ರಂದು ಬೆಳಿಗ್ಗೆ 5.12 ಕ್ಕೆ ರಿಲೀಸ್ ಮಾಡಲಾಗಿದೆ. ಇತರ ಚಲನಚಿತ್ರ ನಿರ್ಮಾಪಕರು ಮಧ್ಯರಾತ್ರಿಯಲ್ಲಿ ಟೀಸರ್‌ಗಳನ್ನು ಬಿಡುಗಡೆ ಮಾಡಿದರೆ, ಸಲಾರ್ ನಿರ್ಮಾಪಕರು ವಿಚಿತ್ರ ಸಮಯವನ್ನು ಆರಿಸಿಕೊಂಡರು. ಟೀಸರ್ ಅನ್ನು ಜುಲೈ 6 ರಂದು ಬೆಳಿಗ್ಗೆ […]
ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಘಟಾನುಘಟಿಗಳಿಂದ ಶುಭಾಶಯಗಳ ಸುರಿಮಳೆ
ಕನ್ನಡ ಚಿತ್ರರಂಗದ ಮ್ಯಾಡ್ ಮಾನ್ ಖ್ಯಾತಿಯ, ಕೆ.ಜಿ.ಎಫ್ ನಿರ್ದೇಶಕ ಪ್ರಶಾಂತ್ ನೀಲ್ ಇಂದು ತಮ್ಮ ಜನ್ಮ ದಿನವನ್ನು ಆಚರಿಸುತ್ತಿದ್ದು, ಸಲಾರ್ ಚಿತ್ರತಂಡ, ಪ್ರಭಾಸ್ ಹಾಗೂ ಹೊಂಬಾಳೆ ಫಿಲ್ಮ್ಸ್ ಆದಿಯಾಗಿ ಎಲ್ಲರೂ ಶುಭಾಶಯಗಳನ್ನು ಕೋರುತ್ತಿದ್ದಾರೆ. ಕನ್ನಡ ಚಿತ್ರ ರಂಗದ ದಿಕ್ಕು-ದೆಸೆಯನ್ನು ಬದಲಾಯಿಸಿದ ಕೆ.ಜಿ.ಎಫ್ ಚಿತ್ರದ ಹಿಂದಿನ ಶಕ್ತಿ ಪ್ರಶಾಂತ್ ನೀಲ್. ತಮ್ಮ ಕಲ್ಪನೆಯನ್ನು ಚಿತ್ರಪರದೆಯ ಮೇಲೆ ಅತ್ಯಂತ ಅದ್ದೂರಿಯಿಂದ ತೋರಿಸುವ ನಿರ್ದೇಶಕರಲ್ಲಿ ಪ್ರಶಾಂತ್ ಕೂಡಾ ಒಬ್ಬರು. ಪ್ರಶಾಂತ್ ಇದೀಗ ಪ್ರಭಾಸ್ ಮುಖ್ಯ ಭೂಮಿಕೆಯಲ್ಲಿರುವ ಸಲಾರ್ ಚಿತ್ರದ ನಿರ್ದೇಶನದಲ್ಲಿ ವ್ಯಸ್ತರಾಗಿದ್ದು, […]
ಮೇ 29 ರಂದು ಆದಿಪುರುಷ್ ಚಿತ್ರದ “ರಾಮ್ ಸಿಯಾ ರಾಮ್” ದೇಶಾದ್ಯಂತ ಎಲ್ಲಾ ವೇದಿಕೆಗಳಲ್ಲಿ ಬಿಡುಗಡೆ
ಭಾರತದ ಐತಿಹಾಸಿಕ ಚರಿತ್ರೆ ರಾಮಾಯಣ ಆಧಾರಿತ ಎನ್ನಲಾದ ಆದಿಪುರುಷ್ ಚಿತ್ರವು ದಾಖಲೆ ಬರೆಯಲಿದ್ದು, ಚಿತ್ರದ ರಾಮ್ ಸಿಯಾ ರಾಮ್ ಹಾಡು ಮೇ 29 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಾದ್ಯಂತ 70+ ಮಾರುಕಟ್ಟೆಗಳನ್ನು ವ್ಯಾಪಿಸಿರುವ ವಿವಿಧ ವೇದಿಕೆಗಳಾದ ಚಲನಚಿತ್ರ ಚಾನೆಲ್‌ಗಳು, ಜಿಇಸಿ ಗಳು, ರೇಡಿಯೋ ಸ್ಟೇಷನ್, ರಾಷ್ಟ್ರೀಯ ಸುದ್ದಿ ವಾಹಿನಿಗಳು, ಹೊರಾಂಗಣ ಜಾಹೀರಾತು ಫಲಕಗಳು, ಸಂಗೀತ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು, ಟಿಕೆಟಿಂಗ್ ಪಾಲುದಾರರು, ಚಲನಚಿತ್ರ ಥಿಯೇಟರ್‌ಗಳು, ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಎಲ್ಲಾ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ […]
ದಾಖಲೆ ಬೆಲೆಗೆ ಮಾರಾಟವಾಯ್ತು ಬಾಕ್ಸ್ ಆಫೀಸ್ ಬಾಹುಬಲಿ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ವಿದೇಶೀ ಹಕ್ಕು!
ಭಾರತೀಯ ಚಿತ್ರರಂಗದ ಬಾಹುಬಲಿ ಎಂದೇ ಖ್ಯಾತನಾಮ ಪ್ರಭಾಸ್, ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುವ ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಹಾಗೂ ಕೆ.ಜಿ.ಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೋಡಿಯ “ಸಲಾರ್” ಚಿತ್ರವು ಬಿಡುಗಡೆಗೂ ಮುನ್ನವೇ ಸದ್ದುಮಾಡುತ್ತಿರುವ ವರದಿಗಳಾಗಿವೆ. ವರದಿಗಳನ್ನು ನಂಬುವುದಾದರೆ, ಸಲಾರ್‌ನ ವಿದೇಶಿ ಹಕ್ಕುಗಳು 90 ರಿಂದ100 ಕೋಟಿ ರೂ.ಗೆ ಮಾರಾಟವಾಗಿದೆ. ಈ ಅಂಕೆಯೊಂದಿಗೆ, ಪ್ರಭಾಸ್ ಅಭಿನಯದ ಸಲಾರ್ ಚಿತ್ರವು ಅತಿ ಹೆಚ್ಚು ವಿದೇಶಿ ಹಕ್ಕುಗಳ ಒಪ್ಪಂದ ಹೊಂದಿದ ತೆಲುಗು ಚಲನಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. https://twitter.com/box0fficeindia/status/1642119837295194112?ref_src=twsrc%5Etfw%7Ctwcamp%5Etweetembed%7Ctwterm%5E1642119837295194112%7Ctwgr%5E91090cc57ea5e82f0daabbf964368ca74396f145%7Ctwcon%5Es1_&ref_url=https%3A%2F%2Fwww.indiatvnews.com%2Fentertainment%2Fregional-cinema%2Fprabhas-starrer-salaar-scripts-history-with-highest-overseas-rights-heres-what-we-know-latest-entertainment-news-2023-04-01-859614 ಪ್ರಭಾಸ್ ಅವರ […]
ಕಾಂತಾರ ದೈವನರ್ತಕ ನವೀನ್ ಬೊಂದೆಲ್ ಗೆ ಸಲಾರ್ ಚಿತ್ರದಲ್ಲಿ ನಟಿಸುವ ಅವಕಾಶ
ಕಾಂತಾರ ಸಿನಿಮಾದಲ್ಲಿ ದೈವನರ್ತಕನಾಗಿ ನಟಿಸಿದ್ದ ನವೀನ್ ಬೊಂದೆಲ್ ಅವರಿಗೆ ಸಲಾರ್ ಸಿನಿಮಾದಲ್ಲಿ ನಟಿಸಲು ಅವಕಾಶ ದೊರಕಿದೆ ಎಂದು ವರದಿಯಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಟನೆಯ ಹೊಂಬಾಳೆ ಫಿಲಂಸ್ ನ ಸಲಾರ್ ಚಿತ್ರದ ಒಂದು ಪಾತ್ರದಲ್ಲಿ ನಟಿಸಲು ನವೀನ್ ಅವರಿಗೆ ಅವಕಾಶ ದೊರೆತಿದೆ. ನವೀನ್ ಬೊಂದೆಲ್ ಒಬ್ಬ ನಟ ಮತ್ತು ನಿರ್ದೇಶಕ. ಕಾಂತಾರ ಚಿತ್ರದಲ್ಲಿ ಕಾಣಿಸಿಳ್ಳುವುದಕ್ಕೂ ಮುನ್ನ ಅವರು ಹಲವಾರು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಬಸ್ ಕಂಡಕ್ಟರ್ ಆಗಿಯೂ ಕೆಲಸ ಮಾಡಿದ್ದಾರೆ. ಮಂಗಳೂರಿನ ಕೆನರಾ ಹೈಸ್ಕೂಲ್ ಮತ್ತು […]