ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಘಟಾನುಘಟಿಗಳಿಂದ ಶುಭಾಶಯಗಳ ಸುರಿಮಳೆ

ಕನ್ನಡ ಚಿತ್ರರಂಗದ ಮ್ಯಾಡ್ ಮಾನ್ ಖ್ಯಾತಿಯ, ಕೆ.ಜಿ.ಎಫ್ ನಿರ್ದೇಶಕ ಪ್ರಶಾಂತ್ ನೀಲ್ ಇಂದು ತಮ್ಮ ಜನ್ಮ ದಿನವನ್ನು ಆಚರಿಸುತ್ತಿದ್ದು, ಸಲಾರ್ ಚಿತ್ರತಂಡ, ಪ್ರಭಾಸ್ ಹಾಗೂ ಹೊಂಬಾಳೆ ಫಿಲ್ಮ್ಸ್ ಆದಿಯಾಗಿ ಎಲ್ಲರೂ ಶುಭಾಶಯಗಳನ್ನು ಕೋರುತ್ತಿದ್ದಾರೆ.

ಕನ್ನಡ ಚಿತ್ರ ರಂಗದ ದಿಕ್ಕು-ದೆಸೆಯನ್ನು ಬದಲಾಯಿಸಿದ ಕೆ.ಜಿ.ಎಫ್ ಚಿತ್ರದ ಹಿಂದಿನ ಶಕ್ತಿ ಪ್ರಶಾಂತ್ ನೀಲ್. ತಮ್ಮ ಕಲ್ಪನೆಯನ್ನು ಚಿತ್ರಪರದೆಯ ಮೇಲೆ ಅತ್ಯಂತ ಅದ್ದೂರಿಯಿಂದ ತೋರಿಸುವ ನಿರ್ದೇಶಕರಲ್ಲಿ ಪ್ರಶಾಂತ್ ಕೂಡಾ ಒಬ್ಬರು. ಪ್ರಶಾಂತ್ ಇದೀಗ ಪ್ರಭಾಸ್ ಮುಖ್ಯ ಭೂಮಿಕೆಯಲ್ಲಿರುವ ಸಲಾರ್ ಚಿತ್ರದ ನಿರ್ದೇಶನದಲ್ಲಿ ವ್ಯಸ್ತರಾಗಿದ್ದು, ಚಿತ್ರತಂಡದೊಂದಿಗೆ ತಮ್ಮ ಹುಟ್ಟುಹಬ್ಬವನ್ನಾಚರಿಸಿದ್ದಾರೆ.

Image

ಹೊಂಬಾಳೆ ಫಿಲ್ಮ್ಸ್ ಕೂಡಾ ಪ್ರಶಾಂತ್ ನೀಲ್ ಅವರಿಗೆ ಜನ್ಮ ದಿನದ ಶುಭಾಶಯ ಕೋರಿದ್ದು, ಕ್ರಿಯೆ ಮತ್ತು ಸೃಜನಶೀಲತೆಯ ಶಕ್ತಿ ಕೇಂದ್ರವಾಗಿರುವ ಪ್ರಶಾಂತ್ ನೀಲ್ ಅವರಿಗೆ ಜನ್ಮದಿನದ ಶುಭಾಶಯಗಳು! ಸಲಾರ್ ಬಿಡುಗಡೆಗಾಗಿ ನಾವು ಕಾತುರದಿಂದ ಕಾಯುತ್ತಿರುವಾಗ, ನಿಮ್ಮ ನಿರ್ದೇಶನದ ಮ್ಯಾಜಿಕ್ ದೊಡ್ಡ ಪರದೆಯ ಮೇಲೆ ತೆರೆದುಕೊಳ್ಳಲು ನಾವು ಇನ್ನು ಕಾಯಲು ಸಾಧ್ಯವಿಲ್ಲ. ಈ ವರ್ಷವು ಯಶಸ್ಸಿನ ಕ್ಷಣಗಳಿಂದ ತುಂಬಿರಲಿ ಎಂದು ಹಾರೈಸಿದೆ.