ಬದಲಾಗುತ್ತಿರುವ ಭಾರತಕ್ಕಾಗಿ 5ಜಿ ವೇಗದ ನೆಟ್ ವರ್ಕ್: 5ಜಿ ಸೇವೆ ನೀಡುವ ಆಯ್ದ ದೇಶಗಳ ಗುಂಪಿಗೆ ಭಾರತ ಸೇರ್ಪಡೆ

ನವದೆಹಲಿ: ಭಾರತವು 5ಜಿ ದೂರಸಂಪರ್ಕ ಸೇವೆ ನೀಡುವ ಆಯ್ದ ದೇಶಗಳ ಗುಂಪಿಗೆ ಸೇರಿದೆ. ಶನಿವಾರ ನವದೆಹಲಿಯಲ್ಲಿ ನಡೆದ 6ನೇ ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ 5ಜಿ ಸೇವೆಗಳಿಗೆ ಚಾಲನೆ ನೀಡಿದರು. ಏರ್‌ಟೆಲ್ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ವಾರಣಾಸಿ ಸೇರಿದಂತೆ 8 ನಗರಗಳಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಿದ್ದರೆ, ರಿಲಯನ್ಸ್ ಜಿಯೋ ದೀಪಾವಳಿಯ ವೇಳೆಗೆ ಪ್ರಾರಂಭಿಸಲಿದೆ. ವೊಡಾಫೋನ್ ಐಡಿಯಾ ಕೂಡ ಶೀಘ್ರದಲ್ಲೇ 5ಜಿ ಸೇವೆಯನ್ನು ಪ್ರಾರಂಭಿಸಲಿದೆ. ಇನ್ನು ಮುಂದೆ 4ಜಿ […]

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಮೂರು ತಿಂಗಳು ವಿಸ್ತರಣೆ

ನವದೆಹಲಿ: ಕೇಂದ್ರ ಸಚಿವ ಸಂಪುಟವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಈ ವರ್ಷದ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಿದೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ 44 ಸಾವಿರದ 762 ಕೋಟಿ ರೂಪಾಯಿ ಯೋಜನೆಗಾಗಿ ವೆಚ್ಚವಾಗಲಿದೆ. ಈ ಯೋಜನೆಯಡಿ ಈವರೆಗೆ ಸುಮಾರು ಮೂರು ಲಕ್ಷದ 45 ಸಾವಿರ ಕೋಟಿ ರೂಪಾಯಿಗಳನ್ನು ಸರ್ಕಾರ ಖರ್ಚು ಮಾಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು […]

ಚಂಡೀಗಢ ವಿಮಾನ ನಿಲ್ದಾಣ ಇನ್ನು ಮುಂದೆ ಶಹೀದ್ ಭಗತ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ನವದೆಹಲಿ: ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ಕ್ರಾಂತಿಕಾರಿಗಳಲ್ಲಿ ಒಬ್ಬರಾದ ಶಹೀದ್ ಭಗತ್ ಸಿಂಗ್ ಅವರ ಹೆಸರನ್ನು ಪಂಜಾಬ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರದಂದು ಘೋಷಿಸಿದ್ದು, ಭಗತ್ ಸಿಂಗ್ ಜನ್ಮದಿನವಾದ ಸೆಪ್ಟೆಂಬರ್ 28 ರಿಂದ ಚಂಡಿಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಶಹೀದ್-ಎ-ಆಜಮ್-ಭಗತ್ ಸಿಂಗ್ ಅವರ ಹೆಸರಿನಿಂದ ಕರೆಯಲ್ಪಡಲಿದೆ. ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಶಹೀದ್ ಭಗತ್ ಸಿಂಗ್ ನಿಲ್ದಾಣದ ನಾಮಕರಣ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಕಳೆದ ಏಳು ವರ್ಷಗಳಿಂದ ಪಂಜಾಬ್ ಮತ್ತು […]

ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ ಎಲ್ಲಾ ದಾಖಲೆಗಳನ್ನು ಮುರಿಯಿರಿ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಕರೆ

ನವದೆಹಲಿ: ಈ ಬಾರಿ ಹಬ್ಬಗಳಲ್ಲಿ ಖಾದಿ, ಕೈಮಗ್ಗ ಅಥವಾ ಕರಕುಶಲ ಉತ್ಪನ್ನಗಳ ಖರೀದಿಸಿ, ಹಬ್ಬದ ಖರೀದಿಯ ಎಲ್ಲಾ ದಾಖಲೆಗಳನ್ನು ಮುರಿಯಿರಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕರೆ ನೀಡಿದ್ದಾರೆ. ದೇಶದಲ್ಲಿ ಸಾಲು ಸಾಲು ಹಬ್ಬಗಳು ಬರಲಿದ್ದು, ದಸರಾ, ಧನ್ ತೇರಸ್ ಮತ್ತು ದೀಪಾವಳಿ ಹಬ್ಬಗಳಲ್ಲಿ, ವೋಕಲ್ ಫಾರ್ ಲೋಕಲ್ ಅಭಿಯಾನದ ಭಾಗವಾಗಿ, ಸ್ಥಳೀಯ ಉತ್ಪನ್ನಗಳನ್ನು ಅತಿ ಹೆಚ್ಚು ಖರೀದಿಸುವ ಮೂಲಕ ಸ್ಥಳೀಯ ಉತ್ಪನ್ನಗಳ ತಯಾರಕರು ಮತ್ತು ಅದರ ಮಾರಾಟಗಾರರು ಕೂಡಾ ಹಬ್ಬದ […]

ಉಜ್ಜಯಿನಿ ಮಹಾಕಾಲೇಶ್ವರ ಮಂದಿರ ಕಾರಿಡಾರ್ ಅಭಿವೃದ್ದಿ ಯೋಜನೆಯ ಮೊದಲನೆ ಹಂತ ಪೂರ್ಣ: ಮಂತ್ರಮುಗ್ದಗೊಳಿಸುವ ಮಂದಿರದ ಮೊದಲ ನೋಟ

ಭೋಪಾಲ್: ಉಜ್ಜಯಿನಿಯಲ್ಲಿ 750 ಕೋಟಿ ರೂಪಾಯಿ ವೆಚ್ಚದ ಮಹಾಕಾಲೇಶ್ವರ ದೇವಸ್ಥಾನ ಕಾರಿಡಾರ್ ಅಭಿವೃದ್ಧಿ ಯೋಜನೆಯ ಮೊದಲ ಹಂತವನ್ನು ಅಕ್ಟೋಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೋಮವಾರ ತಿಳಿಸಿದ್ದಾರೆ. ಸಂಪೂರ್ಣ ಕಾಮಗಾರಿಯನ್ನು ಪರಿಶೀಲಿಸಿದ ಚೌಹಾಣ್, ಮೊದಲ ಹಂತವನ್ನು 316 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮಹಾಕಾಲೇಶ್ವರ ಕಾರಿಡಾರ್‌ನ ಮೊದಲ ಹಂತದ ಭಾಗವಾಗಿ ಅಭಿವೃದ್ಧಿ ಪಡಿಸಿದ ಮೂಲಸೌಕರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 11 ರಂದು ದೇಶಕ್ಕೆ […]