ಬದಲಾಗುತ್ತಿರುವ ಭಾರತಕ್ಕಾಗಿ 5ಜಿ ವೇಗದ ನೆಟ್ ವರ್ಕ್: 5ಜಿ ಸೇವೆ ನೀಡುವ ಆಯ್ದ ದೇಶಗಳ ಗುಂಪಿಗೆ ಭಾರತ ಸೇರ್ಪಡೆ

ನವದೆಹಲಿ: ಭಾರತವು 5ಜಿ ದೂರಸಂಪರ್ಕ ಸೇವೆ ನೀಡುವ ಆಯ್ದ ದೇಶಗಳ ಗುಂಪಿಗೆ ಸೇರಿದೆ. ಶನಿವಾರ ನವದೆಹಲಿಯಲ್ಲಿ ನಡೆದ 6ನೇ ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ 5ಜಿ ಸೇವೆಗಳಿಗೆ ಚಾಲನೆ ನೀಡಿದರು. ಏರ್‌ಟೆಲ್ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ವಾರಣಾಸಿ ಸೇರಿದಂತೆ 8 ನಗರಗಳಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಿದ್ದರೆ, ರಿಲಯನ್ಸ್ ಜಿಯೋ ದೀಪಾವಳಿಯ ವೇಳೆಗೆ ಪ್ರಾರಂಭಿಸಲಿದೆ. ವೊಡಾಫೋನ್ ಐಡಿಯಾ ಕೂಡ ಶೀಘ್ರದಲ್ಲೇ 5ಜಿ ಸೇವೆಯನ್ನು ಪ್ರಾರಂಭಿಸಲಿದೆ. ಇನ್ನು ಮುಂದೆ 4ಜಿ ಗಿಂತ 10 ಪಟ್ಟು ವೇಗದ ಇಂಟರ್ನೆಟ್ ಅನ್ನು ಜನರು ಅನುಭವಿಸಲು ಸಾಧ್ಯವಾಗುತ್ತದೆ. ಟೆಲಿಕಾಂ ಆಪರೇಟರ್ ಗಳು ಡಿಸೆಂಬರ್ 2023 ರ ವೇಳೆಗೆ ಭಾರತದ ಪ್ರತಿ ಮೂಲೆಯಲ್ಲೂ 5ಜಿ ಸೇವೆ ನೀಡುವುದಾಗಿ ಭರವಸೆ ನೀಡುತ್ತಿದ್ದಾರೆ. ಮುಂಬರುವ ವಾರಗಳಲ್ಲಿ ಟೆಲಿಕಾಂ ಕಂಪನಿಗಳು ಮತ್ತು 5ಜಿ ಪ್ಲಾನ್ ಬೆಲೆಗಳನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ.

ವಿಶ್ವದಲ್ಲಿ ಇದುವರೆಗೆ ಚೀನಾ, ಅಮೇರಿಕಾ, ಕೆನಡಾ, ಸ್ಪೇನ್, ದ.ಕೊರಿಯಾ, ಜರ್ಮನಿ, ಸೌದಿ ಅರೇಬಿಯಾ, ಆಷ್ಟೇಲಿಯಾ, ಯು.ಕೆ ಮತ್ತು ಇಟಲಿ ಮುಂತಾದ ದೇಶಗಳು 5ಜಿ ನೆಟ್ ವರ್ಕ್ ಸೇವೆಯನ್ನು ನೀಡುತ್ತಿದ್ದು, ಭಾರತವು ಈ ಸಾಲಿಗೆ ಸೇರ್ಪಡೆಗೊಂಡಿದೆ.