ಭತ್ತದ ಮೋಟೆ ಹೊತ್ತಿದ್ದ ಲಾರಿ ಕಾರಿನ ಮೇಲೆ ಪಲ್ಟಿ: ಪ್ರಯಾಣಿಕರು ಪವಾಡ ಸದೃಶ ಪಾರು

ಪರ್ಕಳ: ಇಲ್ಲಿನ ರಸ್ತೆ ಅವ್ಯವಸ್ಥೆಯಿಂದಾಗಿ ಕೆಳಪರ್ಕಳದಲ್ಲಿ ಭತ್ತದ ಮೂಟೆಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಪ್ರವಾಸಿ ಕಾರುಗಳ ಮೇಲೆ ಪಲ್ಟಿಯಾಗಿದೆ. ಇದರಲ್ಲಿ ಒಂದು ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಲಾರಿಯಲ್ಲಿದ್ದ ಭತ್ತದ ಮೂಟೆಗಳು ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಪ್ರಯಾಣಿಕರು ಕೆಲಹೊತ್ತು ಪರದಾಡಿದರು. ಕಾರಿನಲ್ಲಿದ್ದವರು ಪವಾಡಸದೃಶರಾಗಿ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಇಲ್ಲಿನ ಮಣಿಪಾಲ- ಪರ್ಕಳ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಬೇರೆ ಜಿಲ್ಲೆ ಅಥವಾ ರಾಜ್ಯಗಳಿಂದ ಆಗಮಿಸುವ ವಾಹನ ಚಾಲಕರು ಉಡುಪಿಯಿಂದ ಕಾರ್ಕಳಕ್ಕೆ ತೆರಳುವಾಗ ಗೊಂದಲಕ್ಕೆ […]

ಪರ್ಕಳ: ಗೋಪಾಲ್ ಟವರ್ಸ್ ನ ಕ್ಷೇಮ ಪಾಲಿ ಕ್ಲಿನಿಕ್ ನಲ್ಲಿ ಪ್ರಸೂತಿ ತಜ್ಞೆ ಡಾ. ಅಕ್ಷತಾ ರಾವ್ ಲಭ್ಯ

ಪರ್ಕಳ: ಇಲ್ಲಿನ ಗೋಪಾಲ್ ಟವರ್ಸ್ ನಲ್ಲಿ ಇನ್ವೇಸಿವ್ ಶಸ್ತ್ರಚಿಕಿತ್ಸೆಯಲ್ಲಿ ಫೆಲೋಶಿಪ್ ಪಡೆದಿರುವ ಸ್ತೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ಅಕ್ಷತಾ ರಾವ್ ಲಭ್ಯರಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 6360947206 ಗೆ ಕರೆ ಮಾಡಿ. Dr.akshay rao ಸಂಜೆ ಪ್ರತಿದಿನ 5:30 ನಂತರ ಕ್ಷೇಮ ಕ್ಲಿನಿಕ್ ನಲ್ಲಿ ಲಭ್ಯವಿದ್ದಾರೆ.

ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ: 1.85 ಕೋಟಿ ಲಾಭ; ಶೇ. 12 ಡಿವಿಡೆಂಡ್ ಘೋಷಣೆ

ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ 21 ನೇ ವಾರ್ಷಿಕ ಮಹಾಸಭೆಯು ಆಗಸ್ಟ್ 21 ರವಿವಾರ, ಶ್ರೀ ನರಸಿಂಹ ಸಭಾಭವನ ನರಸಿಂಗೆಯಲ್ಲಿ ಸೊಸೈಟಿಯ ಅಧ್ಯಕ್ಷರಾದ ಅಶೋಕ್ ಕಾಮತ್ ಕೊಡಂಗೆ ಇವರ ಅಧ್ಯಕ್ಷತೆಯಲ್ಲಿ ಜರಗಿತು. 2021-22 ರ ಸಾಲಿನ ಅಂತ್ಯಕ್ಕೆ ಸಂಸ್ಥೆಯು ಪಾಲು ಬಂಡವಾಳ ರೂ 1.50 ಕೋಟಿ, ನಿಧಿಗಳು ರೂ.8.24 ಕೋಟಿ, ಠೇವಣಿ ರೂ 85.78 ಕೋಟಿ, ಸಾಲಗಳು ರೂ 66.93 ಕೋಟಿ, ಒಟ್ಟು 318 ಕೋಟಿ ವ್ಯವಹಾರ ನಡೆಸಿ, ರೂ.1.85 ಕೋಟಿ […]

ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 21ನೇ ಮಹಾಸಭೆಯ ಪ್ರಯುಕ್ತ ಭಕ್ತಿ ಸಿಂಚನ ಕಾರ್ಯಕ್ರಮ

ಉಡುಪಿ: ಪರ್ಕಳದ ಶ್ರೀ ದುರ್ಗಾ ಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 21 ನೇ ಮಹಾಸಭೆಯ ಪ್ರಯುಕ್ತ ಭಕ್ತಿ ಸಿಂಚನ ಕಾರ್ಯಕ್ರಮವು ಮಣಿಪಾಲದ ನರಸಿಂಗೆಯ ನರಸಿಂಹ ಸಭಾಭವನದಲ್ಲಿ ಅಗಸ್ಟ್ 21 ರಂದು ಅಪರಾಹ್ನ 2 ಘಂಟೆಯಿಂದ ನಡೆಯಲಿದೆ. ಕಲರ್ಸ್ ಕನ್ನಡದ ‘ಕನ್ನಡ ಕೋಗಿಲೆ’ ಖ್ಯಾತಿಯ ಗುಲ್ಬರ್ಗಾದ ಅನಂತರಾಜ್ ಮಿಸ್ತ್ರೀ, ಹಾಗೂ ಶ್ರೀಮತಿ ದಿವ್ಯಾ ಗಿರಿಧರ್ ಬಳಗದವರಿಂದ ಭಕ್ತಿ ಸಿಂಚನ ಕಾರ್ಯಕ್ರಮ ನಡೆಯಲಿದೆ ಎಂದು ಕಛೇರಿ ಪ್ರಕಟಣೆ ತಿಳಿಸಿದೆ.

ಪರ್ಕಳ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಸರಿಪಡಿಸಲು ಹದಿನೈದು ದಿನ ಗಡುವು: ಡಾ.ಪಿ.ವಿ.ಭಂಡಾರಿ ನೇತೃತ್ವದಲ್ಲಿ ಪ್ರತಿಭಟನೆ

ಪರ್ಕಳ: ಭಾನುವಾರದಂದು ಪರ್ಕಳದ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಮನೋವೈದ್ಯ ಡಾ.ಪಿ.ವಿ.ಭಂಡಾರಿ ನೇತೃತ್ವದಲ್ಲಿ ಧರಣಿ ನಡೆಯಿತು. ಪರ್ಕಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಮಾನ‌ ಮನಸ್ಕರು ಮತ್ತು ಪರ್ಕಳ ನಿವಾಸಿಗಳು ಪಾಲ್ಗೊಂಡರು.   ಧರಣಿಯ ನೇತೃತ್ವ ವಹಿಸಿದ ಡಾ.ಪಿ.ವಿ.ಭಂಡಾರಿ ಮಾತನಾಡಿ ಶಾಸಕರು, ಸಂಸದರು ಮತ್ತು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇತ್ತೀಚೆಗೆ ಅಧ್ಯಯನಕ್ಕಾಗಿ ಶಾಸಕರೆಲ್ಲ ಲೇಹ್ ಲಡಾಕ್ ಗೆ ಹೋಗಿದ್ದಾರೆ. ಅಲ್ಲಿಗೆ ಹೋಗುವ ಅವಶ್ಯಕತೆ ಇಲ್ಲ, ನಮ್ಮ ಪರ್ಕಳ ರಸ್ತೆಗೆ ಬಂದರೆ ಸಾಕು, ನಿಮಗೆ ಇಲ್ಲಿಯೇ ಲೇಹ್ ಲಡಾಕ್ ನ […]