ಪರಶುರಾಮ ಥೀಂ ಪಾರ್ಕ್ ತಳ ಭಾಗದಲ್ಲಿ ಅಗ್ನಿ ಅವಘಡ: ಥೀಂ ಪಾರ್ಕ್ ಸುರಕ್ಷಿತ
ಕಾರ್ಕಳ: ಪರಶುರಾಮ ಥೀಂ ಪಾರ್ಕ್ ನ ಬೈಲೂರು ಸಮೀಪದ ಉಮಿಕ್ಕಳ ಗುಡ್ಡದಲ್ಲಿ ರವಿವಾರ ಬೆಂಕಿ ಅವಘಡ ಸಂಭವಿಸಿರುವುದಾಗಿ ವರದಿಯಾಗಿದೆ. ಗುಡ್ಡದ ತಳದಲ್ಲಿ ಅಪರಾಹ್ನ 3ರ ವೇಳೆಗೆ ಕಾಣಿಸಿಕೊಂಡ ಬೆಂಕಿ ಗಿಡ ಮರ ಬಳ್ಳಿಗೆ ಹತ್ತಿಕೊಂಡು ಗಾಳಿಗೆ ತೀವ್ರಗತಿಯಲ್ಲಿ ವ್ಯಾಪಿಸಿತ್ತು. ಸ್ಥಳೀಯರ ಮಾಹಿತಿಯಂತೆ ಅಗ್ನಿಶಾಮಕ ದಳದವರು ಧಾವಿಸಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾದರು. ಆದರೆ ಬೆಂಕಿ ಹಬ್ಬಿಕೊಂಡ ಸ್ಥಳ ಬೆಟ್ಟದ ಕೆಳಗಿನ ಪ್ರದೇಶವಾಗಿದ್ದು ಅಲ್ಲಿಗೆ ತೆರಳಲು ಸಾಧ್ಯವಾಗಲಿಲ್ಲ. ಇನ್ನೊಂದೆಡೆ ಬೃಹತ್ ಪ್ರಮಾಣದ ಮುಳ್ಳು ಅಡ್ಡಿಯಾಗಿದ್ದು, ಬಳಿಕ ಅಗ್ನಿಶಾಮಕ ದಳದ […]
ಪರಶುರಾಮ ಪ್ರತಿಮೆ ವಿಚಾರದಲ್ಲಿ ಅಪಪ್ರಚಾರ ಮಾಡುವ ಬದಲು ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿಸಲಿ: ಕುಯಿಲಾಡಿ ಸುರೇಶ್ ನಾಯಕ್ ಸವಾಲು
ಉಡುಪಿ: ಪರಶುರಾಮನ ಪ್ರತಿಮೆ ವಿಚಾರದಲ್ಲಿ ಆಧಾರ ರಹಿತ ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್ಸಿಗೆ ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡಿಸಲು ಯಾಕೆ ಮನಸ್ಸು ಮಾಡುತ್ತಿಲ್ಲ. ಜನತೆಯ ಗಮನವನ್ನು ಬೇರೆಡೆಗೆ ಕೇಂದ್ರೀಕರಿಸಲು ಕಾಂಗ್ರೆಸಿಗರು ಹಾದಿ ಬೀದಿಗಳಲ್ಲಿ ಬೊಬ್ಬೆ ಹೊಡೆಯುವ ಬದಲು ಅಗತ್ಯ ವಿಚಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಲು ಒತ್ತು ನೀಡುವುದು ಉತ್ತಮ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ ನೇತೃತ್ವದ ಸರಕಾರ ಆಡಳಿತ ನಡೆಸುತ್ತಿದೆ. ತನಿಖಾ ಸಂಸ್ಥೆಗಳು, ಅಧಿಕಾರಿಗಳು, ಸರ್ಕಾರಿ ಸಂಸ್ಥೆಗಳು […]
ಕಾರ್ಕಳದ ಪ್ರವಾಸೋದ್ಯಮಕ್ಕೆ ಮುನಿಯಾಲು ಉದಯ ಶೆಟ್ಟಿ ಬಣದಿಂದ ಧಕ್ಕೆ: ಮಹಾವೀರ ಹೆಗ್ಡೆ
ಕಾರ್ಕಳ: ಕಾರ್ಕಳ ಕ್ಷೇತ್ರದ ಹಿತ ಕಾಪಾಡುತ್ತೇನೆ ಎಂದು ಚುನಾವಣೆ ಸಂದರ್ಭ ಹೇಳಿದ್ದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಇದೀಗ ಕಾರ್ಕಳಕ್ಕೆ ಅಗೌರವ ತರುವ ಮತ್ತು ಪ್ರವಾಸೋದ್ಯಮಕ್ಕೆ ಧಕ್ಕೆಯನ್ನುಂಟುಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ನಿಮ್ಮ ಟೀಕೆ, ನಡವಳಿಕೆಯಿಂದ ನಿಮ್ಮ ಗೌರವ ಹೆಚ್ಚಾಯಿತೇ? ವ್ಯಾಪಾರಿಗಳಿಗೆ, ಉದ್ಯೋಗಿಗಳಿಗೆ ತೊಂದರೆ ಕೊಡುವುದು ಇತರರಿಗೆ ಹಿಂಸಿಸುವುದು ನಿಮ್ಮ ಪ್ರವೃತ್ತಿಯಾಗಿದೆ ಇದುವೇ ನಿಮ್ಮ ರಾಜಕಾರಣವೇ? ಚುನಾವಣೆ ಬಳಿಕ ಕಾರ್ಕಳದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು. ಅಭಿವೃದ್ಧಿಯನ್ನು ಅಣಕವಾಡುವುದು ಅಭಿವೃದ್ಧಿಯ ವೇಗಕ್ಕೆ ತೆಡೆಯೊಡ್ಡುವುದೇ ನಿಮ್ಮ ಸಾಧನೆ. ಮೌಲ್ಯಯುತ ರಾಜಕಾರಣ, […]
ಪರಶುರಾಮ ಥೀಂ ಪಾರ್ಕ್ ಪ್ರವೇಶಕ್ಕೆ ತಾತ್ಕಾಲಿಕ ತಡೆ
ಕಾರ್ಕಳ: ತಾಲೂಕಿನ ಯರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಶುರಾಮ ಥೀಂ ಪಾರ್ಕಿನ ಕಾಮಗಾರಿಯನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ ಅ.9 ರಿಂದ ನವೆಂಬರ್ ಅಂತ್ಯದವರೆಗೆ ಕಾಲಾವಕಾಶ ಬೇಕಾಗಿರುವುದರಿಂದ ಅಲ್ಲಿಯವರೆಗೆ ಥೀಂ ಪಾರ್ಕ್ ಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಕಾರ್ಕಳ ತಾಲೂಕು ತಹಸೀಲ್ದಾರ್ ಅವರ ಪ್ರಕಟಣೆ ತಿಳಿಸಿದೆ.
ಪರಶುರಾಮರ ನಕಲಿ ಮೂರ್ತಿ ಪ್ರತಿಷ್ಠಾಪನೆ ಹಿಂದೂ ಧರ್ಮಕ್ಕೆ ಬಗೆದ ದ್ರೋಹ: ಸುಭಾಸ್ ಚಂದ್ರ ಹೆಗ್ಡೆ
ಕಾರ್ಕಳ: ಕರಾವಳಿಯ ಸೃಷ್ಟಿಯ ಕಾರಣಕರ್ತ ಎಂದು ನಾವೆಲ್ಲರೂ ಧಾರ್ಮಿಕ ನಂಬಿಕೆ ಇರಿಸಿ ಕೊಂಡಿದ್ದ ಪರಶುರಾಮರ ಚರಿತ್ರೆಗೆ ಭೈರವ ಅರಸರ ಊರಲ್ಲಿ ಮಸಿ ಬಳಿಯಲು ಹೊರಟಿರುವ ಕಾರ್ಕಳದ ರಾಜಕೀಯ ನಾಯಕರ ರಾಜಕೀಯ ಶೈಲಿಯು ಧರ್ಮವನ್ನೇ ಅಧಪತನ ಮಾಡಲು ಹೊರಟಿರುವುದು ತೀರಾ ಖಂಡನೀಯ ವಿಚಾರ ಎಂದು ಸುಭಾಸ್ ಚಂದ್ರ ಹೆಗ್ಡೆ ಹೇಳಿದ್ದಾರೆ. ಕಾರ್ಕಳದಲ್ಲಿ ಕಂಚಿನ ಪರಶುರಾಮ ಮೂರ್ತಿಯ ನಿರ್ಮಾಣ ಆಗುವ ಸಂದರ್ಭದಲ್ಲಿ ಎಲ್ಲರೂ ಸಂತಸ ಪಟ್ಟಿದ್ದರು. ಧರ್ಮದ ವಿಚಾರ ಬಂದಾಗ ಕರಾವಳಿಯಲ್ಲಿ ಎಲ್ಲಾ ಹಿಂದೂಗಳು ಕೂಡ ಒಟ್ಟಾಗುತ್ತಾರೆ. ಈ ಹಿಂದೂ […]