ಚಿಪ್ಸಿ ಐಟಿ ಸರ್ವೀಸಸ್ ಪ್ರೈ. ಲಿ ನಲ್ಲಿ ನವರಾತ್ರಿ ಸಂಭ್ರಮ 

ಉಡುಪಿ: ಎಲ್ಲಾ ಹಬ್ಬಗಳನ್ನು ಅತ್ಯಂತ ವಿಜೃಂಭಣೆಯಿಂದ ಮತ್ತು ಉತ್ಸಾಹದಿಂದ ಆಚರಿಸುವುದನ್ನು ನಂಬಿರುವ ಚಿಪ್ಸಿ ಸಂಸ್ಥೆಯ ಎಲ್ಲಾ ಉದ್ಯಮಿಗಳು ಆಯಾ ದಿನದ ವಸ್ತ್ರ ಸಂಹಿತೆ ಬಣ್ಣಗಳನ್ನು ಅನುಸರಿಸುತ್ತಿದ್ದಾರೆ ಮತ್ತು ಹಬ್ಬವನ್ನು ಸಾಂಪ್ರಾಯಿಕವಾಗಿ ಆಚರಿಸುತ್ತಿದ್ದಾರೆ. ಚಿಪ್ಸಿ ಐಟಿ ಸರ್ವೀಸಸ್ ಪ್ರೈ. ಲಿ ಉಡುಪಿಯ ಪ್ರಮುಖ ಸಾಫ್ಟ್‌ವೇರ್ ಕಂಪನಿಯಾಗಿದ್ದು ಇದು ವೆಬ್ ಅಪ್ಲಿಕೇಶನ್, ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ, ಕ್ಲೌಡ್ ಸೇವೆಗಳು, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಇನ್ನೂ ಅನೇಕ ಸಾಫ್ಟ್‌ವೇರ್ ಸೇವೆಗಳನ್ನು ನೀಡುತ್ತಿದೆ. ಹೆಚ್ಚಿನ ವಿವರಗಳಿಗಾಗಿ +91-9962213970 ಅನ್ನು ಸಂಪರ್ಕಿಸಿ.

ಏಣಗುಡ್ಡೆ ವೀರಸ್ತಂಭ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

ಕಟಪಾಡಿ: ಏಣಗುಡ್ಡೆ ವೀರಸ್ತಂಭ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೆ. 26 ಸೋಮವಾರದಿಂದ ಮೊದಲ್ಗೊಂಡು ಅ.04 ಮಂಗಳವಾರ ಪರ್ಯಂತ ಅಗ್ರಹಾರ ವೀರಸ್ತಂಭ ಶ್ರೀ ದುರ್ಗಾಪರಮೇಶ್ವರಿ ದೇವರ ದಿವ್ಯ ಸನ್ನಿಧಿಯಲ್ಲಿನವರಾತ್ರಿ ಮಹೋತ್ಸವ ನಡೆಯಲಿರುವುದು. ಸೆ. 30 ಶುಕ್ರವಾರದಂದು ಜರಗಲಿರುವ ಚಂಡಿಕಾಯಾಗ ಪೂರ್ಣಾಹುತಿ ಗಂಟೆ 11.00ಕ್ಕೆ ಹಾಗೂ ಮಹಾ ಅನ್ನಸಂತರ್ಪಣೆಯು ಮಧ್ಯಾಹ್ನ ಗಂಟೆ 1.00 ಕ್ಕೆ ಜರಗಲಿರುವುದು. ಈ ಪ್ರಸನ್ನ ಸಮಯದಲ್ಲಿ ತಾವು ಸಮಿತ್ರ ಬಾಂಧವರಾಗಿ ಆಗಮಿಸಿ, ತನು- ಮನ- ಧನಗಳಿಂದ ಸಹಕರಿಸಿ, ಶ್ರೀದೇವಿಯ ಶ್ರೀಮುಡಿ ಗಂಧ- ಪ್ರಸಾದವನ್ನು ಸ್ವೀಕರಿಸಿ, ಕೃತಾರ್ಥರಾಗಬೇಕೆಂದು […]

ಶ್ರೀ ಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ

ಮಂದಾರ್ತಿ: ಶ್ರೀ ಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ಸೆ. 26 ಸೋಮವಾರದಿಂದ ಮೊದಲ್ಗೊಂಡು ಅ.05 ಬುಧವಾರ ಪರ್ಯಂತ ದೇವೀ ಸನ್ನಿಧಿಯಲ್ಲಿ ನವರಾತ್ರಿ ವಿಶೇಷ ಪೂಜಾ ಸಮಾರಂಭವು ನಡೆಯಲಿದ್ದು, ಅ.02 ಆದಿತ್ಯವಾರ ಮೂಲಾ ನಕ್ಷತ್ರ ದಿನದಂದು ಚಂಡಿಕಾಯಾಗವು ಜರಗಲಿರುವುದು. ನವರಾತ್ರಿಯ ಈ ಕಾರ್ಯಕ್ರಮಗಳಿಗೆ ತಾವೆಲ್ಲರೂ ಆಗಮಿಸಿ, ತನು- ಮನ- ಧನ- ಧಾನ್ಯಾದಿಗಳಿಂದ ಸಹಕರಿಸಿ, ಶ್ರೀದೇವಿಯ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತೇವೆ. ಸ್ಥಳವಂದಿಗರ ಪರವಾಗಿ, ಎಸ್‌.ಸಿ.ಕೊಟಾರಗಸ್ತಿ ಕಾರ್ಯನಿರ್ವಹಣಾಧಿಕಾರಿ ಹೆಚ್. ಧನಂಜಯ ಶೆಟ್ಟಿ ಅಧ್ಯಕ್ಷರು ಹೆಚ್. ಸುರೇಂದ್ರ ಶೆಟ್ಟಿ- […]

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

ಕಿನ್ನಿಗೋಳಿ: ಇಲ್ಲಿನ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಸೆ.26 ರಿಂದ ಅ.5ರ ವರೆಗೆ ಜರಗಲಿದ್ದು ಪ್ರತೀ ದಿನ ಬೆಳಿಗ್ಗೆ 9:30 ರಿಂದ ಸರಸ್ವತಿ ಸದನದಲ್ಲಿ ಭಜನೆ, ಸಂಜೆ 5:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, 7:30 ರಿಂದ ಯಕ್ಷಗಾನ ಬಯಲಾಟ ಪ್ರದರ್ಶನ ಜರಗಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು ಮತ್ತು ಅನುವಂಶಿಕ ಮೊಕ್ತೇಸರ ಕೆ. ವಾಸುದೇವ ಅಸ್ರಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವರಾತ್ರಿ ಹಬ್ಬದ ಪ್ರಯುಕ್ತ ಬ್ರಹ್ಮಾವರದ ಸತ್ಯನಾಥ ಸ್ಟೋರ್ಸ್ ನಲ್ಲಿ ವಸ್ತ್ರೋತ್ಸವ: ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ಮೇಳ

ಬ್ರಹ್ಮಾವರ: ನವರಾತ್ರಿಯ ಸುಸಂದರ್ಭದಲ್ಲಿ ಸತ್ಯನಾಥ ಸ್ಟೋರ್ಸ್ ವತಿಯಿಂದ ವಸ್ತ್ರೋತ್ಸವವನ್ನು ಸೆ.26ರಿಂದ ಅಕ್ಟೋಬರ್ 6 ರವರೆಗೆ ಆಯೋಜಿಸಲಾಗಿದ್ದು, ಕರಾವಳಿ ಕರ್ನಾಟಕದ ಸದಭಿರುಚಿಯ ನಾರಿಯರಿಗಾಗಿ ಮದುವೆ ಸೀರೆ, ಕಾಟನ್ ಸೀರೆ, ರೇಷ್ಮೆ ಸೀರೆ, ಫ್ಯಾನ್ಸಿ ಸೀರೆ, ಲೆಹಂಗಾ, ಚೂಡಿದಾರ್, ಮಕ್ಕಳ ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ಬಟ್ಟೆಗಳು, ಪುರುಷರ ಬ್ರಾಂಡೆಡ್ ಪ್ಯಾಂಟ್, ಶರ್ಟ್ ಮತ್ತು ಟೀ ಶರ್ಟ್ ಗಳ ವಿಶೇಷ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಕಲ್ಕತ್ತಾ ಫ್ಯಾನ್ಸಿ ಸೀರೆಗಳ ಮೇಲೆ ವಿಶೇಷ ರಿಯಾಯತಿ ಲಭ್ಯವಿದೆ. ಸಂಪರ್ಕಿಸಿ: 9742561049