ಅ.21ರಂದು ಎಂಜಿಎಂ ಮೈದಾನದಲ್ಲಿ ಬಹು ನಿರೀಕ್ಷಿತ “ಉಡುಪಿ ದಾಂಡಿಯ 2023” ಆಯೋಜನೆ
ಉಡುಪಿ: ಉಡುಪಿ ಶ್ರೀಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಇದರ ಮಹಿಳಾ ತಂಡದ ನೇತೃತ್ವದಲ್ಲಿ ಸತತ 6ನೇ ವರ್ಷದ “ಉಡುಪಿ ದಾಂಡಿಯ 2023” ಕಾರ್ಯಕ್ರಮವನ್ನು ಅ.21ರಂದು ಸಂಜೆ 6 ಗಂಟೆಯಿಂದ ಎಂಜಿಎಂ ಮೈದಾನದಲ್ಲಿ ನಡೆಸಲಾಗುವುದು ಎಂದು ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ತಿಳಿಸಿದರು. ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತಿನ ಸಾಂಪ್ರದಾಯಿಕ ಗರ್ಭ ಯಾನೆ ದಾಂಡಿಯಾ ನೃತ್ಯಕ್ಕೆ ಉತ್ತೇಜನ ನೀಡುವ ಸಲುವಾಗಿ ಕಡಿಯಾಳಿ ಗಣೇಶೋತ್ಸವ ಸಮಿತಿಯ […]
ದೊಡ್ಡಣ್ಣಗುಡ್ಡೆ: ಜೋಡಿ ಚಂಡಿಕಾಯಾಗ ಸಂಪನ್ನ; ನಾಳೆ ಲಲಿತಾ ಸಹಸ್ರ ಕದಳೀಯಾಗ
ದೊಡ್ಡಣಗುಡ್ಡೆ: ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ಧರ್ಮದರ್ಶಿ ರಮಾನಂದ ಗುರೂಜಿ ಅವರ ಮಾರ್ಗದರ್ಶನದಲ್ಲಿ ವೇ|ಮೂ| ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಮಂಗಳವಾರ ಜೋಡಿ ಚಂಡಿಕಾಯಾಗ, ದುರ್ಗಾನಮಸ್ಕಾರ ಪೂಜೆ, ಕಲ್ಪೋಕ್ತ ಪೂಜೆ ಸಹಿತ ರಂಗಪೂಜೆಯು ಅನ್ನಪ್ರಸಾದ ವಿತರಣೆಯೊಂದಿಗೆ ನೆರವೇರಿತು. ಮಂಗಳೂರಿನ ಉದ್ಯಮಿ ಶರೂನ್ ಮತ್ತು ಶ್ವೇತಾ ದಂಪತಿ ಹಾಗೂ ಮಣಿಪಾಲ ಎಂಐಟಿಯ ರೀತು ಕೇಯೂರು ಅವರ ಸೇವಾರ್ಥ ಜೋಡಿ ಚಂಡಿಕಾಯಾಗ, ಕ್ಷೇತ್ರದ ವತಿಯಿಂದ ಕುಬೇರ ಲಕ್ಷ್ಮೀ ಸಾನ್ನಿಧ್ಯದಲ್ಲಿ ಮಹಾಲಕ್ಷ್ಮೀ ಸಹಸ್ರನಾಮ ಯಾಗ, ದೊಡ್ಡಣಗುಡ್ಡೆಯ […]
ಮೋಹಿನಿ ಅಲಂಕಾರದಲ್ಲಿ ಮನಮೋಹನ ಕೃಷ್ಣ!!
ಉಡುಪಿ: ನವರಾತ್ರಿಯ ಪ್ರಯುಕ್ತ ಶ್ರೀಕೃಷ್ಣ ದೇವರಿಗೆ ‘ಮೋಹಿನಿ’ ವಿಶೇಷ ಅಲಂಕಾರವನ್ನು ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಸ್ವಾಮೀಜಿಯವರು ನೆರವೇರಿಸಿ, ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ ಮಹಾಪೂಜೆ ನೆರವೇರಿಸಿದರು.
ನವರಾತ್ರಿಯ ಪ್ರಯುಕ್ತ ಶ್ರೀಕೃಷ್ಣನಿಗೆ ರುಕ್ಮಿಣಿ ಅಲಂಕಾರ
ಉಡುಪಿ: ನವರಾತ್ರಿಯ ಪ್ರಯುಕ್ತ ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಸ್ವಾಮೀಜಿಯವರು ಶ್ರೀಕೃಷ್ಣನಿಗೆ ‘ಉಯ್ಯಾಲೆಯಲ್ಲಿ ರುಗ್ಮಿಣೀ’ ವಿಶೇಷ ಅಲಂಕಾರ ಮಾಡಿದರು. ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ ಮಹಾಪೂಜೆ ನೆರವೇರಿಸಿದರು.
ಪ್ರಧಾನಿ ನರೇಂದ್ರ ಮೋದಿ ಬರೆದ ‘ಗಯೇ ತೆನೋ ಗರ್ಬೋ’ ಹಾಡಿನ ವಿಡಿಯೋ ಬಿಡುಗಡೆ
ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ‘ಗಯೇ ತೆನೋ ಗರ್ಬೋ’ ಹಾಡನ್ನು ಗಾಯಕಿ ಧ್ವನಿ ಭಾನುಶಾಲಿ ಮತ್ತು ಸಂಗೀತ ಸಂಯೋಜಕ ತನಿಷ್ಕ್ ಬಾಗ್ಚಿ ಹಾಡಾಗಿ ಪರಿವರ್ತಿಸಿದ್ದಾರೆ. ನಟ ಮತ್ತು ಚಲನಚಿತ್ರ ನಿರ್ಮಾಪಕ ಜಾಕಿ ಭಗ್ನಾನಿ ಮತ್ತು ಜಸ್ಟ್ ಮ್ಯೂಸಿಕ್ ನಿರ್ಮಿಸಿದ ಗಾರ್ಬಾ ವಿಡಿಯೋ ಹಾಡು ನರೇಂದ್ರ ಮೋದಿಯವರು ಬರೆದ ಸಾಹಿತ್ಯಕ್ಕೆ ಜೀವ ತುಂಬಿದೆ. ಹಾಡಿನ ಕ್ಲಿಪ್ ಅನ್ನು ಹಂಚಿಕೊಂಡಿರುವ ಗಾಯಕಿ ಧ್ವನಿ ಭಾನುಶಾಲಿ X ನಲ್ಲಿ, “ಆತ್ಮೀಯ ನರೇಂದ್ರ ಮೋದಿ ಜೀ, ತನಿಷ್ಕ್ ಬಾಗ್ಚಿ ಮತ್ತು […]