ಅ.15 ರಿಂದ 24 ರವರೆಗೆ ಕನ್ನರ್ಪಾಡಿ ಜಯದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ
ಕಿನ್ನಿಮೂಲ್ಕಿ: ಶ್ರೀ ಜಯದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ನವರಾತ್ರಿ ಮಹೋತ್ಸವವು ಅ.15 ರವಿವಾರ ಮೊದಲ್ಗೊಂಡು ಅ. 23 ಸೋಮವಾರದ ತನಕ ವೇ| ಮೂ| ಪುತ್ತೂರು ಶ್ರೀಶ ತಂತ್ರಿಗಳವರ ನೇತೃತ್ವದಲ್ಲಿ ವಿಧಿ ವಿಧಾನ ಪೂರ್ವಕ ಶ್ರೀದೇವಿಯ ವಿಶೇಷ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಳದ ಪ್ರಕಟಣೆ ತಿಳಿಸಿದೆ. ಧಾರ್ಮಿಕ ಕಾರ್ಯಕ್ರಮಗಳು ತಾ. 15/10/2023 ರವಿವಾರ ಬೆಳಗ್ಗೆ 7.30ಕ್ಕೆ ಕದಿರು ಕಟ್ಟುವುದು, ಮಧ್ಯಾಹ್ನ ಚಂಡಿಕಾಯಾಗ, ಮಹಾಪೂಜೆ. ಸಾಯಂಕಾಲ 6.00ಕ್ಕೆ ಶ್ರೀ […]
ತೆಂಕಪೇಟೆ ಶಾರದಾ ವಿಸರ್ಜನೆ, ಕೊಂಕಣಿ ಯಕ್ಷಗಾನ ಪ್ರದರ್ಶನ
ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶಾರದಾ ದೇವಿಗೆ ದೇವಳದ ಅರ್ಚಕ ದಯಾಘನ್ ಭಟ್ ಮಹಾ ಮಂಗಳಾರತಿ ಬೆಳಗಿಸಿ ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಗುರುವಾರದಂದು ಸಂಜೆ ಶ್ರೀ ಶಾರದಾ ದೇವಿಯ ಉತ್ಸವವು ದೇವಾಲಯದಿಂದ ಹೊರಟು ಐಡಿಯಲ್ ಸರ್ಕಲ್, ಡಯಾನಾ ಸರ್ಕಲ್, ತ್ರಿವೇಣಿ ಸರ್ಕಲ್, ಚಿತ್ತರಂಜನ್ ಸರ್ಕಲ್, ಕೊಳದಪೇಟೆ ಮೂಲಕ ದೇವಾಲಯಕ್ಕೆ ಬಂದು ದೇವಾಲಯದ ಪದ್ಮ ಸರೋವರದಲ್ಲಿ ಶಾರದಾ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಶೋಭಾಯಾತ್ರೆಯ ಸಮಯ ಉಡುಪಿ ನಗರವನ್ನು ತಳಿರು ತೋರಣ ವಿದ್ಯುತ್ ದೀಪಗಳಿಂದ ಅಲಂಕರಿತಗೊಳಿಸಲಾಗಿತ್ತು. […]
ನೀಲಾವರ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಸಂಪನ್ನ
ಮಂದಾರ್ತಿ: ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಬುಧವಾರ ವಿಜಯದಶಮಿಯಂದು ಸಂಜೆ ಸಾಮೂಹಿಕ ದೀಪ ನಮಸ್ಕಾರ ಪೂಜೆ ಮೂಲಕ ವಿಜೃಂಭಣೆಯಿಂದ ಸಂಪನ್ನಗೊಂಡಿತು. ನವರಾತ್ರಿ ಪರ್ಯಂತ ದಿನಂಪ್ರತಿ ದುರ್ಗಾ ಹೋಮ, ಅನ್ನಸಂತರ್ಪಣೆ ನಡೆಯಿತು. ಶುಕ್ರವಾರ ವಿಜಯದಶಮಿಯಂದು ಚಂಡಿಕಾಯಾಗ, ಮಹಾ ಅನ್ನ ಸಂತರ್ಪಣೆ ಮತ್ತು ಸಂಜೆ ಸಾಮೂಹಿಕ ದೀಪ ನಮಸ್ಕಾರ ಪೂಜೆ ನಡೆಯಿತು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ರಘರಾಮ ಮಧ್ಯಸ್ಥ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ದೇವಳದ ಅರ್ಚಕರಾದ ಕೃಷ್ಣ ಅಡಿಗ, ಚಂದ್ರಶೇಖರ […]
ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಂಭ್ರಮದ ದಾಂಡಿಯಾ ಮಹೋತ್ಸವ
ಉಡುಪಿ: ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ 5ನೇ ವರ್ಷದ ದಾಂಡಿಯಾ ಮಹೋತ್ಸವ ಇಲ್ಲಿನ ಶೆರ್ವಾಣಿ ಮಂಟಪದ ಸಭಾಂಗಣದಲ್ಲಿ ಶನಿವಾರದಂದು ನಡೆಯಿತು. ಕನ್ನಡದ ಪ್ರಖ್ಯಾತ ಚಿತ್ರನಟ ರಮೇಶ ಅರವಿಂದ್ ಅವರು ದಾಂಡಿಯಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ನಗರಸಭಾ ಅಧ್ಯಕ್ಷೆ ಸುಮಿತಾ ನಾಯಕ್, ಕಡಿಯಾಳಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ.ರವಿರಾಜ್ ವಿ.ಆಚಾರ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ […]
ಪದುಮನಾಭನಿಗೆ ಪದ್ಮಾವತಿ ಅಲಂಕಾರ
ಉಡುಪಿ: ನವರಾತ್ರಿ ಸಂದರ್ಭದಲ್ಲಿ ದಿನಕ್ಕೊಂದು ಅಲಂಕಾರದಲ್ಲಿ ಕಂಗೊಳಿಸುವ ಜಗದೊಡೆಯ ಪದ್ಮನಾಭನಿಗೆ ಇಂದು ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು “ಪದ್ಮಾವತಿ” ವಿಶೇಷ ಅಲಂಕಾರ ಮಾಡಿದರು. ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.