ಪದುಮನಾಭನಿಗೆ ಪದ್ಮಾವತಿ ಅಲಂಕಾರ

ಉಡುಪಿ: ನವರಾತ್ರಿ ಸಂದರ್ಭದಲ್ಲಿ ದಿನಕ್ಕೊಂದು ಅಲಂಕಾರದಲ್ಲಿ ಕಂಗೊಳಿಸುವ ಜಗದೊಡೆಯ ಪದ್ಮನಾಭನಿಗೆ ಇಂದು ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು “ಪದ್ಮಾವತಿ” ವಿಶೇಷ ಅಲಂಕಾರ ಮಾಡಿದರು. ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.