ವಿಶ್ರಾಂತಿ ಪಡೆಯಲು ಸಮಯವಿಲ್ಲ, 2024 ಕ್ಕೆ ಸಿದ್ಧರಾಗಿ: ಯೋಗಿ ಸಂಪುಟ ಭೇಟಿಯಾದ ಪ್ರಧಾನಿಯಿಂದ ‘ಬುಲ್ಡೋಜರ್ ಅಭಿಯಾನಕ್ಕೆ’ ಶ್ಲಾಘನೆ

ಉತ್ತರ ಪ್ರದೇಶ: ಸೋಮವಾರ ಸಂಜೆ ಲಕ್ನೋನಲ್ಲಿ ಯೋಗಿ ಆದಿತ್ಯನಾಥ್ ಸಂಪುಟದೊಂದಿಗೆ ಚಿಂತನ-ಮಂಥನ ಸಭೆ ನಡೆಸಿದ ಪ್ರಧಾನಿ ಮೋದಿ, ಉತ್ತಮ ಆಡಳಿತದಿಂದ ಮಾತ್ರ ಅಧಿಕಾರದ ಹಾದಿ ಸುಗಮವಾಗುತ್ತದೆ ಎಂದು ಕಿವಿಮಾತು ಹೇಳಿದ್ದಾರೆ. ಯೋಗಿ ಸಂಪುಟದ ಸಚಿವರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ಸಚಿವರು ಸಾರ್ವಜನಿಕರ ಸೇವೆಗೆ ಮುಡುಪಾಗಿರಬೇಕು. ವಿಶ್ರಾಂತಿಗೆ ಸಮಯ ಉಳಿದಿಲ್ಲ, 2024 ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಎಲ್ಲರೂ ಸಿದ್ಧತೆಗಳನ್ನು ಪ್ರಾರಂಭಿಸಬೇಕು ಎಂದಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ. ಅಪರಾಧಿಗಳ ವಿರುದ್ಧ ಯೋಗಿ ಆದಿತ್ಯನಾಥ್ ಸರ್ಕಾರದ […]

ಔಷಧಿಗಳಿಗಾಗಿ ಭಾರತಕ್ಕೆ ಮನವಿ ಮಾಡಿದ ಶ್ರೀಲಂಕಾ ಕ್ರಿಕೆಟಿಗ ಸನತ್ ಜಯಸೂರ್ಯ

ದೆಹಲಿ: ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಶ್ರೀಲಂಕಾದ ಭಾರತೀಯ ಹೈಕಮಿಷನರ್ ಗೋಪಾಲ್ ಬಾಗ್ಲೇ ಅವರನ್ನು ಭೇಟಿಯಾಗಿ ದ್ವೀಪ ರಾಷ್ಟ್ರಕ್ಕೆ ಅಗತ್ಯವಾದ ಔಷಧಿಗಳನ್ನು ಪೂರೈಸಲು ಭಾರತದ ಸಹಾಯವನ್ನು ಕೇಳಿದ್ದಾರೆ. ಗುರುವಾರ (ಏಪ್ರಿಲ್ 28) ಭಾರತೀಯ ಹೈಕಮಿಷನರ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಸನತ್ ಅವರು ಮನವಿ ಮಾಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಶ್ರೀಲಂಕಾದ ನ್ಯೂಸ್‌ವೈರ್ ವರದಿ ಮಾಡಿದೆ. ಈ ಸಂದರ್ಭದಲ್ಲಿ ಔಷಧಿಗಳು ಸೇರಿದಂತೆ ಅಗತ್ಯ ಸಾಮಗ್ರಿಗಳ ರೂಪದಲ್ಲಿ ಭಾರತದ ಬೆಂಬಲವನ್ನು ಅವರು ಶ್ಲಾಘಿಸಿದ್ದಾರೆ. “ಹೈ ಕಮಿಷನರ್ ಅವರು ಕ್ರಿಕೆಟ್ […]

ಉಗ್ರರ ಸೆದೆಬಡಿಯಲು ಸೈನ್ಯಕ್ಕೆ ಸಂಪೂರ್ಣ ಸ್ವಾತಂತ್ರ… ಮೊದಲ ಬಾರಿಗೆ ಸ್ವಾತಂತ್ರ್ಯ ನೀಡಿದ ಮೋದಿ ಸರ್ಕಾರ….!

ನವದೆಹಲಿ: ಉಗ್ರರ  ಅಟ್ಟಹಾಸಕ್ಕೆ ಬಲಿಯಾದ ಯೋದರನ್ನು ನೆನೆದು ಇಡೀ ದೇಶವೇ ಕಣ್ಣೀರು ಹಾಕಿದ್ದು, ಯಾವ ರೀತಿ‌ ಪ್ರತಿಕಾರ ನೀಡಬಹುದು ಎಂದು ಇಡೀ ದೇಶ ಎದುರು ನೋಡುತ್ತಿದೆ. ಈ ಮಧ್ಯೆ ದೇಶದ ಜನತೆಗೆ ಮೋದಿ ಸಂದೇಶ ರವಾನಿಸಿದ್ದು, ಪಾಕಿಸ್ತಾನದ ವಿರುದ್ದ ಪ್ರತಿಕಾರ ತೀರಿಸಲು ಭಾರತೀಯ ಸೈನ್ಯಕ್ಕೆ ಪೂರ್ಣ ಸ್ವತಂತ್ರ ನೀಡಿದ್ದಾರೆ. ಪಾಪಿ ಪಾಕಿಸ್ತಾನವನ್ನು ಒಬ್ಬಂಟಿ ಮಾಡಲು ಕೇಂದ್ರ ಸರಕಾರ ವಿವಿಧ ತಂತ್ರ ರೂಪಿಸುತ್ತಿದೆ. ಹೇಡಿ ಉಗ್ರ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದು ನಿಮ್ಮ ಕೊನೆಗಾಲ ಸನ್ನಿಹಿತವಾಗಿದೆ ಎಂದು ಮೋದಿ ತಿಳಿಸಿದ್ದಾರೆ. ದುಷ್ಕೃತ್ಯದ […]