ಉಗ್ರರ ಸೆದೆಬಡಿಯಲು ಸೈನ್ಯಕ್ಕೆ ಸಂಪೂರ್ಣ ಸ್ವಾತಂತ್ರ… ಮೊದಲ ಬಾರಿಗೆ ಸ್ವಾತಂತ್ರ್ಯ ನೀಡಿದ ಮೋದಿ ಸರ್ಕಾರ….!

ನವದೆಹಲಿ: ಉಗ್ರರ  ಅಟ್ಟಹಾಸಕ್ಕೆ ಬಲಿಯಾದ ಯೋದರನ್ನು ನೆನೆದು ಇಡೀ ದೇಶವೇ ಕಣ್ಣೀರು ಹಾಕಿದ್ದು, ಯಾವ ರೀತಿ‌ ಪ್ರತಿಕಾರ ನೀಡಬಹುದು ಎಂದು ಇಡೀ ದೇಶ ಎದುರು ನೋಡುತ್ತಿದೆ. ಈ ಮಧ್ಯೆ ದೇಶದ ಜನತೆಗೆ ಮೋದಿ ಸಂದೇಶ ರವಾನಿಸಿದ್ದು, ಪಾಕಿಸ್ತಾನದ ವಿರುದ್ದ ಪ್ರತಿಕಾರ ತೀರಿಸಲು ಭಾರತೀಯ ಸೈನ್ಯಕ್ಕೆ ಪೂರ್ಣ ಸ್ವತಂತ್ರ ನೀಡಿದ್ದಾರೆ.
ಪಾಪಿ ಪಾಕಿಸ್ತಾನವನ್ನು ಒಬ್ಬಂಟಿ ಮಾಡಲು ಕೇಂದ್ರ ಸರಕಾರ ವಿವಿಧ ತಂತ್ರ ರೂಪಿಸುತ್ತಿದೆ. ಹೇಡಿ ಉಗ್ರ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದು ನಿಮ್ಮ ಕೊನೆಗಾಲ ಸನ್ನಿಹಿತವಾಗಿದೆ ಎಂದು ಮೋದಿ ತಿಳಿಸಿದ್ದಾರೆ.
ದುಷ್ಕೃತ್ಯದ ಹಿಂದಿನ ಎಲ್ಲಾ ಶಕ್ತಿಗಳನ್ನು ಧಮನ ಮಾಡುತ್ತೇವೆ. ಜತೆಗೆ
ಪಾಕಿಸ್ತಾನದ ಸಂಬಂಧಕ್ಕೆ ನಾಂಧಿ ಹಾಡಲಾಗುತ್ತಿದ್ದು, ಇನ್ನೂ ಆ ಪಾಪಿ ದೇಶದ ಅವನತಿಗೆ ಕ್ಷಣಗಣನೆ ಶುರುವಾಗಲಿದೆ. ಅದಕ್ಕಾಗಿ ವಿಶ್ವದ ಎಲ್ಲಾ ಮಾನವತಾವಾದಿ ದೇಶಗಳು ಒಗ್ಗೂಡಬೇಕು ಎಂದು ಮೋದಿ‌ ಕರೆ ನೀಡಿದ್ದಾರೆ.