ಬೊರಿವಲಿ ಪಶ್ಚಿಮ: ಶ್ರೀ ಕ್ಷೇತ್ರ ಜಯರಾಜನಗರದ ಶ್ರೀಮಹಿಷಮರ್ಧಿನಿ ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವ
ಬೊರಿವಲಿ: ಉತ್ತರ ಮುಂಬಯಿ ಬೊರಿವಲಿ ಪಶ್ಚಿಮ ಪರಿಸರದ ಶ್ರೀ ಕ್ಷೇತ್ರ ಜಯರಾಜನಗರದ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ಜರುಗುತ್ತಿರುವ ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಜೂ. 1ರಂದು ಬೆಳಿಗ್ಗೆ ಶ್ರೀದೇವಿಯ ಸನ್ನಿಧಾನದಲ್ಲಿ ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿಯವರ ನೇತೃತ್ವದಲ್ಲಿ ಅಷ್ಟ ಬಂಧ ಬ್ರಹ್ಮಕಲಶ ಹಾಗೂ ಧಾರ್ಮಿಕ ಕಾರ್ಯಕ್ರಮವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅದ್ದೂರಿಯಿಂದ ಜರುಗಿತು. ಪೂಜಾ ವಿಧಿ ನೆರವೇರಿಸಿ ಕಲಶವುಗಳನ್ನು ಮೆರವಣಿಗೆ ಬಿರುದಾವಳಿಗಳ ಮೂಲಕ ಶ್ರೀ ಮಹಿಷಮರ್ಧಿನಿ ಆದಿ ಗಣಪತಿ ಮತ್ತು ಆಂಜನೇಯ ದೇವರಿಗೆ ಅಭಿಷೇಕ ಸಮರ್ಪಿಸಲಾಯಿತು. ಬಳಿಕ […]
26/11 ದಾಳಿಯ ಮುಖ್ಯ ಆರೋಪಿ ತಹವ್ವುರ್ ರಾಣಾ ಹಸ್ತಾಂತರಕ್ಕೆ ಯುಎಸ್ ಕೋರ್ಟ್ ಅಸ್ತು
ನವದೆಹಲಿ: 2008 ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿರುವ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಮೇರಿಕಾ ಸರ್ಕಾರದ ಮೂಲಕ ಭಾರತ ಸರ್ಕಾರವು ಸಲ್ಲಿಸಿದ್ದ ಮನವಿಗೆ ಅಮೇರಿಕಾದ ನ್ಯಾಯಾಲಯವು ಒಪ್ಪಿಗೆ ನೀಡಿದೆ. ಹಸ್ತಾಂತರದ ದೃಷ್ಟಿಯಿಂದ ಜೂನ್ 10, 2020 ರಂದು, 62 ವರ್ಷದ ರಾಣಾನನ್ನು ತಾತ್ಕಾಲಿಕವಾಗಿ ಬಂಧಿಸುವಂತೆ ಭಾರತವು ದೂರು ಸಲ್ಲಿಸಿತು. ಬೈಡೆನ್ ಆಡಳಿತವು ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ಬೆಂಬಲಿಸಿ ಅನುಮೋದಿಸಿತು. “ನ್ಯಾಯಾಲಯವು ವಿನಂತಿಯನ್ನು ಬೆಂಬಲಿಸಿ ಮತ್ತು ವಿರೋಧವಾಗಿ ಸಲ್ಲಿಸಿದ ಎಲ್ಲಾ ದಾಖಲೆಗಳನ್ನು […]
ಮುಂಬೈನಿಂದ ಗೋವಾ ತಲುಪಲು ಕೇವಲ 7 ಗಂಟೆ ಸಾಕು: ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯೋಗ ಯಶಸ್ವಿ
ಮುಂಬೈ: ಗೋವಾ- ಮುಂಬೈ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಜೂನ್‌ನಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ವರದಿಗಳಾಗಿವೆ. ಸೆಮಿ ಹೈಸ್ಪೀಡ್ ರೈಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಮತ್ತು ಮಡಗಾಂವ್ ನಡುವೆ ಚಲಿಸುತ್ತದೆ ಮತ್ತು ತೇಜಸ್ ಎಕ್ಸ್‌ಪ್ರೆಸ್‌ಗೆ ಹೋಲಿಸಿದರೆ ಮುಂಬೈ ಮತ್ತು ಗೋವಾ ನಡುವಿನ ಪ್ರಯಾಣದ ಸಮಯವನ್ನು ಕನಿಷ್ಠ 45 ನಿಮಿಷಗಳಷ್ಟು ಕಡಿಮೆ ಮಾಡುತ್ತದೆ. ಮುಂಬೈ-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮಾರ್ಗದ ಪ್ರಯೋಗಗಳನ್ನು ಮಂಗಳವಾರ ಯಶಸ್ವಿಯಾಗಿ ನಡೆಸಲಾಯಿತು. ರೈಲು ಏಳು ಗಂಟೆಗಳಿಗಿಂತ ಸ್ವಲ್ಪವೇ ಹೆಚ್ಚು […]
ಮಹಿಳಾ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತದ ರೋಮಾಂಚಕ ಕದನ: ಸೂಪರ್ ಓವರ್ ನ ಅದ್ಭುತ ಪ್ರದರ್ಶನದಿಂದ ಪಂದ್ಯ ಭಾರತದ ತೆಕ್ಕೆಗೆ
ಮುಂಬೈ: ಇಲ್ಲಿನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಡುವೆ ಟಿ20 ಪಂದ್ಯ ನಡೆದಿದ್ದು, ಇದು ಅತ್ಯುತ್ತಮ ಟಿ20 ಪಂದ್ಯ ಎಂದು ಬಣ್ಣಿಸಲಾಗುತ್ತಿದೆ. ಐದು ಪಂದ್ಯಗಳ ಸರಣಿಯ ಎರಡನೇ ಮಹಿಳಾ ಟಿ20 ಪಂದ್ಯದಲ್ಲಿ 30,000 ಕ್ಕೂ ಹೆಚ್ಚು ಪ್ರೇಕ್ಷಕರ ಸಮ್ಮುಖದಲ್ಲಿ ಆಡಿದ ಈ ಆಟವು ಟೈನಲ್ಲಿ ಕೊನೆಗೊಂಡಿತ್ತು. ಇದಾದ ಬಳಿಕ ಸೂಪರ್ ಓವರ್ ಎಸೆಯಲಾಯಿತು. ಟೀಮ್ ಇಂಡಿಯಾದ ಮಹಿಳಾ ಘಟಕವು ಮೊದಲ ಬಾರಿಗೆ ಸೂಪರ್ ಓವರ್ ಆಡುತ್ತಿತ್ತು […]
ಕೊಂಕಣ ರೈಲ್ವೆ ವತಿಯಿಂದ ಮಂಗಳೂರು-ಮುಂಬೈ ನಡುವೆ ಚಳಿಗಾಲದ ಸಾಪ್ತಾಹಿಕ ವಿಶೇಷ ರೈಲುಗಳ ವೇಳಾಪಟ್ಟಿ ಇಲ್ಲಿದೆ
ಮಂಗಳೂರು: ಕೊಂಕಣ ರೈಲ್ವೆಯು ಕೇಂದ್ರ ರೈಲ್ವೆಯ ಸಹಯೋಗದೊಂದಿಗೆ ಮುಂಬೈ ಮತ್ತು ಮಂಗಳೂರು ನಡುವೆ ಚಳಿಗಾಲದಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ತೆರವುಗೊಳಿಸಲು ವಿಶೇಷ ರೈಲುಗಳನ್ನು ನಿರ್ವಹಿಸಲಿದೆ. ಡಿಸೆಂಬರ್ 9 ರಿಂದ ಜನವರಿ 6 ರವರೆಗೆ ಪ್ರತಿ ಶುಕ್ರವಾರ: ರೈಲು ನಂ. 01453 ಲೋಕಮಾನ್ಯ ತಿಲಕ್ (ಟರ್ಮಿನಲ್) – ಮಂಗಳೂರು ಜಂಕ್ಷನ್ ವಿಶೇಷ (ಸಾಪ್ತಾಹಿಕ), ಲೋಕಮಾನ್ಯ ತಿಲಕ್ (ಟಿ) ನಿಂದ ರಾತ್ರಿ 10.15 ಕ್ಕೆ ಹೊರಡಲಿದೆ. ರೈಲು ಮರುದಿನ ಸಂಜೆ 5.05ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಡಿಸೆಂಬರ್ 10 ರಿಂದ ಜನವರಿ […]