ಮಳಲಿ ಮಸೀದಿಯ ಜಾಗದಲ್ಲಿ ಶಿವನ ಸಾನಿಧ್ಯ! ತಾಂಬೂಲ ಪ್ರಶ್ನೆಯಲ್ಲಿ ಗೋಚರವಾಯಿತು ಸತ್ಯ?
ಮಂಗಳೂರು: ಮಳಲಿಯ ಜುಮಾ ಮಸೀದಿಯ ಜಾಗದಲ್ಲಿ ದೈವ ಸಾನಿಧ್ಯ ಇರುವುದು ಸ್ಪಷ್ಟವಾಗಿದೆ. ತಾಂಬೂಲ ಪ್ರಶ್ನೆಯಲ್ಲಿ ಗುರುಮಠ ಶಿವನ ಸಾನಿಧ್ಯವಿರೋದು ಗೋಚರವಾಗಿದೆ ಎಂದು ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಹೇಳಿದ್ದಾರೆ. ಮಂಗಳೂರಿನ ಮಳಲಿ ಮಸೀದಿ ವಿವಾದ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದು, ಮಸೀದಿ ಸ್ಥಳದಲ್ಲಿ ದೈವಸ್ಥಾನ ಇತ್ತೋ ಇಲ್ಲವೋ ಎಂಬುದರ ಬಗ್ಗೆ ಪಶ್ನೆ ಇಡಲಾಗಿದೆ. “ಪೂರ್ವಜರು ದೈವಾರಾಧನೆ ಮಾಡುತ್ತಿದ್ದ ಸ್ಥಳ ಇದಾಗಿದ್ದು, ಯಾವುದೋ ಕಾರಣಕ್ಕೆ ಇಲ್ಲಿಂದ ಅವರು ಹೋಗಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಅಷ್ಟಮಂಗಲ ಪ್ರಶ್ನಾ ಚಿಂತನೆ ಮೂಲಕ […]
ಜ್ಞಾನವಾಪಿ ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆ? ಮುಗಿಯುವುದೆ ಶತಮಾನಗಳಿಂದ ಕಾಯುತ್ತಿರುವ ನಂದಿಯ ಪ್ರತೀಕ್ಷೆ?
ಉತ್ತರಪ್ರದೇಶ: ವಾರಣಾಸಿಯ ಜ್ಞಾನವಾಪಿ ಮಸೀದಿಯ ವಿಡಿಯೋ ಸಮೀಕ್ಷೆಯ ಕೊನೆಯ ದಿನ, ಬಾವಿಯೊಳಗೆ ಶಿವಲಿಂಗ ಕಂಡುಬಂದಿದೆ ಎಂದು ವಕೀಲ ವಿಷ್ಣು ಜೈನ್ ಪ್ರತಿಪಾದಿಸಿದ್ದಾರೆ. ಶಿವಲಿಂಗವು 12 ಅಡಿ 8 ಇಂಚು ವ್ಯಾಸವನ್ನು ಹೊಂದಿದೆ ಎನ್ನಲಾಗಿದೆ. ಆಜ್ ತಕ್/ಇಂಡಿಯಾ ಟುಡೇ ಟಿವಿ ಜೊತೆ ಫೋನ್ ಮೂಲಕ ಶಿವಲಿಂಗದ ಬಗ್ಗೆ ಮಾತನಾಡಿದ ಜೈನ್, ಅದರ ರಕ್ಷಣೆಗಾಗಿ ನಾಗರಿಕ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದಾರೆ. ಇದಾದ ಕೆಲವೇ ಗಂಟೆಗಲ್ಲಿ ನಾಗರಿಕ ನ್ಯಾಯಾಲಯವು ವಿವಾದಿತ ಪ್ರದೇಶವನ್ನು ಸೀಲ್ ಮಾಡಿ ಜನರ ಪ್ರವೇಶವನ್ನು ನಿಷೇಧಿಸಲು ಆದೇಶ […]
ಮಸೀದಿಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ: ಮುತಾಲಿಕ್
ಬೆಂಗಳೂರು: ಮುಂಜಾನೆ 5 ಗಂಟೆಯಿಂದಲೇ ಮಸೀದಿಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳು ಗಲಾಟೆ ಸೃಷ್ಟಿಸುತ್ತಿದ್ದು, ಅವುಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ, ಹಾಗಾಗಿ ಅವರನ್ನು ಓಲೈಸುವ ಅಗತ್ಯವಿಲ್ಲ ಎಂದಿದ್ದಾರೆ. “ನಾವು ಮಸೀದಿಗಳಲ್ಲಿ ಪ್ರಾರ್ಥನೆಗಳನ್ನು ವಿರೋಧಿಸುವುದಿಲ್ಲ, ಆದರೆ ಅಜಾನ್ ರೂಪದಲ್ಲಿ ಧ್ವನಿವರ್ಧಕಗಳ ಶಬ್ದವನ್ನು ವಿರೋಧಿಸುತ್ತೇವೆ. ಇದು ಸಂಕಟವಾಗಿ ಪರಿಣಮಿಸಿ ಜನರ ಮೇಲೆ ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿಗಳು, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರು ಮತ್ತು ಆಸ್ಪತ್ರೆಗಳಲ್ಲಿನ […]