ವಾಟ್ಸಾಪ್ (WhatsApp)ಬಳಕೆದಾರರು ಈಗ ನಾಲ್ಕು ಫೋನ್‌ಗಳಲ್ಲಿ ಒಂದು ಖಾತೆಯನ್ನು ಬಳಸಬಹುದು: ಹೇಗೆಂದು ತಿಳಿಯಿರಿ

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಸಿಇಒ ಮಾರ್ಕ್ ಜುಕರ್‌ಬರ್ಗ್, ವಾಟ್ಸಾಪ್ (WhatsApp) ಅಂತಿಮವಾಗಿ ಬಹು-ಸಾಧನ ಲಾಗಿನ್ ಬೆಂಬಲವನ್ನು ಪರಿಚಯಿಸುತ್ತಿದೆ ಎಂದು ಘೋಷಿಸಿದ್ದು, ಇದು ಬಳಕೆದಾರರಿಗೆ ಒಂದೇ ವಾಟ್ಸಾಪ್ ಖಾತೆಯನ್ನು ನಾಲ್ಕು ಬೇರೆ ಬೇರೆ ಫೋನ್‌ಗಳಲ್ಲಿ ಬಳಸಲು ಅನುವು ಮಾಡಿಕೊಡುತ್ತದೆ. ವಾಟ್ಸಾಪ್ ಪ್ರಕಾರ, ಈ ವೈಶಿಷ್ಟ್ಯವನ್ನು ಮುಂಬರುವ ವಾರಗಳಲ್ಲಿ ಎಲ್ಲಾ ಬಳಕೆದಾರರಿಗೆ ಬಿಡುಗಡೆ ಮಾಡಲಾಗುವುದು. ಈ ಹಿಂದೆ, ಬಳಕೆದಾರರು ಒಂದೇ ಫೋನ್ ಮತ್ತು ಬಹು ಕಂಪ್ಯಾನಿಯನ್ ಡೆಸ್ಕ್‌ಟಾಪ್ ಸಾಧನಗಳಲ್ಲಿ ಒಂದು ವಾಟ್ಸಾಪ್ ಖಾತೆ ಬಳಸಲು ಸೀಮಿತರಾಗಿದ್ದರು. ಈ ಹೊಸ ಬಹು-ಸಾಧನ […]

ಮೂರನೇ ಸುತ್ತಿನ ಉದ್ಯೋಗ ಕಡಿತಕ್ಕೆ ಮುಂದಾದ ಸಾಮಾಜಿಕ ದೈತ್ಯ ಸಂಸ್ಥೆ ಮೆಟಾ: 4 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್

ನವದೆಹಲಿ: ಫೇಸ್ ಬುಕ್, ವಾಟ್ಸ್ ಆಪ್, ಇನ್ಸ್ಟಾ ಗ್ರಾಮ್ ನ ಮಾತೃ ಸಂಸ್ಥೆಯಾದ ಮೆಟಾ ಉದ್ಯೋಗಿಗಳು ಏಪ್ರಿಲ್ 19 ರಂದು ವಜಾಗೊಳಿಸುವ ಪ್ರಕ್ರಿಯೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ ಎಂದು ಭಾರತದಲ್ಲಿನ ಸಾಮಾಜಿಕ ಮಾಧ್ಯಮ ದೈತ್ಯದ ಕನಿಷ್ಠ ಇಬ್ಬರು ಸಿಬ್ಬಂದಿಗಳು ಸೂಚಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಮತ್ತು ವೋಕ್ಸ್ ಸೇರಿದಂತೆ ಅಂತರಾಷ್ಟ್ರೀಯ ವರದಿಗಳು ಸೂಚಿಸಿವೆ. ಮೆಟಾ ಸಂಸ್ಥೆಯು ಕನಿಷ್ಟ 4 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಲಿದ್ದು ಮುಂದಿನ ಸುತ್ತಿನ ಉದ್ಯೋಗ ಕಡಿತಗಳು ಇಂದು ಪ್ರಾರಂಭವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಇತ್ತೀಚೆಗೆ ಎರಡು ಹಂತಗಳಲ್ಲಿ […]

ಹೆಚ್ಚುತ್ತಿರುವ ಜಾಗತಿಕ ಆರ್ಥಿಕ ಕುಸಿತ: ತಂತ್ರಜ್ಞಾನ ಕಂಪನಿಗಳಿಂದ ಸಾಲು ಸಾಲು ಉದ್ಯೋಗ ಕಡಿತ

ನವದೆಹಲಿ: 10 ವರ್ಷಗಳ ಕಾಲ ಸ್ಟಾಕ್ ಮಾರುಕಟ್ಟೆಯನ್ನು ಆಳಿದ ತಂತ್ರಜ್ಞಾನ ಕಂಪನಿಗಳು ಹೊಸ ವಾಸ್ತವಕ್ಕೆ ಹೊಂದಿಕೊಳ್ಳುತ್ತಿರುವುದರಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಕಡಿತಗಳು ಹೆಚ್ಚಾಗುತ್ತಿವೆ. ಟ್ವಿಟ್ಟರ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ಅದರ ಹೊಸ ಬಾಸ್ ಎಲೋನ್ ಮಸ್ಕ್ ತನ್ನ ಕಂಪನಿಯ ಅರ್ಧದಷ್ಟು ಉದ್ಯೋಗಿಗಳನ್ನು ಕಂಪನಿಯಿಂದ ಹೊರಕಳಿಸಿದ್ದಾರೆ. ಫೇಸ್‌ಬುಕ್ ಪೋಷಕ ಕಂಪನಿ ಮೆಟಾದ ಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಇದುವರೆಗಿನ ಅತಿ ಹೆಚ್ಚಿನ ವಜಾಗಳನ್ನು ಘೋಷಿಸಿದೆ. ಮೆಟಾ ತನ್ನ 13% ಸಿಬ್ಬಂದಿಯನ್ನು ತೆಗೆದುಹಾಕುತ್ತಿದೆ ಎಂದು ಬುಧವಾರ ಹೇಳಿದ್ದು, […]

ದೀಪಾವಳಿ ವೇಳೆಗೆ ನಾಲ್ಕು ಮೆಟ್ರೋ ನಗರಗಳಲ್ಲಿ 5ಜಿ ಸೇವೆ: ಅಮೇರಿಕಾದ ತಂತ್ರಜ್ಞಾನ ದೈತ್ಯರೊಂದಿಗೆ ರಿಲಯನ್ಸ್ ಜಿಯೋ ಪಾಲುದಾರಿಕೆ

ರಿಲಯನ್ಸ್ ಜಿಯೋ ಭಾರತದ ಪ್ರಮುಖ ಮೆಟ್ರೋ ನಗರಗಳಲ್ಲಿ ದೀಪಾವಳಿಯ ವೇಳೆಗೆ 5ಜಿ ಸೇವೆಗಳನ್ನು ಹೊರತರಲು ಮೆಟಾ, ಗೂಗಲ್, ಮೈಕ್ರೋಸಾಫ್ಟ್ ಮತ್ತು ಇಂಟೆಲ್‌ನಂತಹ ವಿಶ್ವದ ಕೆಲವು ಪ್ರಮುಖ ತಂತ್ರಜ್ಞಾನ ದೈತ್ಯರೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ತಲ್ಲೀನತೆಯ ತಂತ್ರಜ್ಞಾನಕ್ಕಾಗಿ ಕಂಪನಿಯು, ಮಾರ್ಕ್ ಜುಕರ್‌ಬರ್ಗ್ ನೇತೃತ್ವದ ಮೆಟಾ ( ಫೇಸ್‌ಬುಕ್) ಜೊತೆ ಪಾಲುದಾರಿಕೆ ಹೊಂದಿದ್ದರೆ, ಕೈಗೆಟುಕುವ ದರದ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಅಭಿವೃದ್ಧಿಪಡಿಸಲು ಗೂಗಲ್ ನೊಂದಿಗೆ ಸಹಯೋಗ ಹೊಂದಿದೆ. ತನ್ನ ಲಕ್ಷಾಂತರ ಬಳಕೆದಾರರಿಗೆ ಕ್ಲೌಡ್-ಸಕ್ರಿಯಗೊಳಿಸಿದ ಅಪ್ಲಿಕೇಶನ್‌ಗಳು ಮತ್ತು ಪರಿಹಾರಗಳ ರೋಮಾಂಚಕ ಪರಿಸರ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು […]