ಮೂರನೇ ಸುತ್ತಿನ ಉದ್ಯೋಗ ಕಡಿತಕ್ಕೆ ಮುಂದಾದ ಸಾಮಾಜಿಕ ದೈತ್ಯ ಸಂಸ್ಥೆ ಮೆಟಾ: 4 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್

ನವದೆಹಲಿ: ಫೇಸ್ ಬುಕ್, ವಾಟ್ಸ್ ಆಪ್, ಇನ್ಸ್ಟಾ ಗ್ರಾಮ್ ನ ಮಾತೃ ಸಂಸ್ಥೆಯಾದ ಮೆಟಾ ಉದ್ಯೋಗಿಗಳು ಏಪ್ರಿಲ್ 19 ರಂದು ವಜಾಗೊಳಿಸುವ ಪ್ರಕ್ರಿಯೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ ಎಂದು ಭಾರತದಲ್ಲಿನ ಸಾಮಾಜಿಕ ಮಾಧ್ಯಮ ದೈತ್ಯದ ಕನಿಷ್ಠ ಇಬ್ಬರು ಸಿಬ್ಬಂದಿಗಳು ಸೂಚಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಮತ್ತು ವೋಕ್ಸ್ ಸೇರಿದಂತೆ ಅಂತರಾಷ್ಟ್ರೀಯ ವರದಿಗಳು ಸೂಚಿಸಿವೆ. ಮೆಟಾ ಸಂಸ್ಥೆಯು ಕನಿಷ್ಟ 4 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಲಿದ್ದು ಮುಂದಿನ ಸುತ್ತಿನ ಉದ್ಯೋಗ ಕಡಿತಗಳು ಇಂದು ಪ್ರಾರಂಭವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.

ಇತ್ತೀಚೆಗೆ ಎರಡು ಹಂತಗಳಲ್ಲಿ 21,000 ಉದ್ಯೋಗಿಗಳನ್ನು ವಜಾಗೊಳಿಸಿದ ಮೆಟಾ ಇದೀಗ ಮೂರನೇ ಸುತ್ತಿನ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಇದರ ಹೊರತಾಗಿ, ವಾಲ್ಟ್ ಡಿಸ್ನಿ ಮುಂದಿನ ವಾರ “ಸಾವಿರಾರು ಉದ್ಯೋಗಗಳನ್ನು” ಕಡಿತಗೊಳಿಸಲು ಯೋಜಿಸುತ್ತಿದೆ. ಅದರ ಮನರಂಜನಾ ವಿಭಾಗದಲ್ಲಿ ಸುಮಾರು 15 ಪ್ರತಿಶತ ಸಿಬ್ಬಂದಿಗಳಿಕೆ ಪಿಂಕ್ ಸ್ಲಿಪ್ ನೀಡುವ ಅನುಮಾನವಿದ್ದು ಇದು ಕಂಪನಿಯ ಎರಡನೇ ಸುತ್ತಿನ ವಜಾಗೊಳಿಸುವಿಕೆಯಾಗಿದೆ. ಇದು ಈ ವರ್ಷದ ಮಾರ್ಚ್‌ನಲ್ಲಿ ಸುಮಾರು 7,000 ಉದ್ಯೋಗಿಗಳನ್ನು ವಾಲ್ಟ್ ಡಿಸ್ನಿ ವಜಾಗೊಳಿಸಿದೆ.

ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಬುಧವಾರದಂದು ಘೋಷಿಸಲಿರುವ ಉದ್ಯೋಗ ಕಡಿತಗಳ ಕುರಿತು ಮೆಟಾ ಈಗಾಗಲೇ ಮ್ಯಾನೇಜರ್‌ಗಳಿಗೆ ಮೆಮೊ ಮೂಲಕ ಸೂಚಿಸಿದೆ. ವಜಾಗೊಳಿಸುವಿಕೆಯಲ್ಲಿ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ರಿಯಾಲಿಟಿ ಲ್ಯಾಬ್‌ಗಳು ಪರಿಣಾಮ ಬೀರಲಿದೆ. ವಜಾಗೊಳಿಸುವಿಕೆಯು ಆರ್ಥಿಕ ಅನಿಶ್ಚಿತತೆಯ ನಡುವೆ ವೆಚ್ಚವನ್ನು ಕಡಿತಗೊಳಿಸುವ ಕಂಪನಿಗಳ ಯೋಜನೆಯ ಭಾಗವಾಗಿದೆ.

layoffs.fyi ನಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಈ ವರ್ಷ ಇಲ್ಲಿಯವರೆಗೆ, 594 ಟೆಕ್ ಕಂಪನಿಗಳು 1,71,308 ಉದ್ಯೋಗಿಗಳನ್ನು ವಜಾಗೊಳಿಸಿವೆ. 2022 ರಲ್ಲಿ 1,052 ಟೆಕ್ ಕಂಪನಿಗಳು1,61,411 ಉದ್ಯೋಗಿಗಳನ್ನು ವಜಾಗೊಳಿಸಿವೆ.