ಮಣಿಪಾಲ: ಯುವತಿ ಮೇಲೆ ಅತ್ಯಾಚಾರ, ಇಬ್ಬರ ಬಂಧನ
ಉಡುಪಿ: ಯುವತಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಾರಣಕಟ್ಟೆ ನಿವಾಸಿ ಜಗದೀಶ್ (24), ಪೆರ್ಡೂರು ನಿವಾಸಿ ಗಣೇಶ್ (26) ಗುರುತಿಸಲಾಗಿದೆ. ಇವರು ಮಾ.17 ರಂದು ಯುವತಿಯನ್ನು ಮಣಿಪಾಲ ಲಾಡ್ಜ್ ಒಂದಕ್ಕೆ ಕರೆದೊಯ್ದ ಅತ್ಯಾಚಾರ ಎಸಗಿದ್ದರು. ಬಳಿಕ ಆರೋಪಿಗಳು ಯುವತಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಅಸ್ವಸ್ಥಗೊಂಡಿದ್ದ ಯುವತಿ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದು, ಆಸ್ಪತ್ರೆಯವರು ನೀಡಿದ ಮಾಹಿತಿಯಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಗೆ ನಡೆಸಿದ ಪೊಲೀಸರು ಮಾ.24 ರಂದು […]
ಮಣಿಪಾಲ ಆರ್ ಟಿಒ ಕಚೇರಿಗೆ ಎಸಿಬಿ ದಾಳಿ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರ್ ಟಿಒ ಅಧಿಕಾರಿ ವರ್ಣೇಕರ್

ಉಡುಪಿ: ಬೆಂಕಿಗೆ ಅಹುತಿಯಾದ ಕಾರಿನ ತೆರಿಗೆ ಮರುಪಾವತಿ ಸಂಬಂಧಿಸಿದಂತೆ ಮಾಲೀಕನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಉಡುಪಿ ಉಪ ಸಾರಿಗೆ ಆಯುಕ್ತ ಹಾಗೂ ಜಿಲ್ಲಾ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ. ವರ್ಣೇಕರ್ ಮತ್ತು ಸಹಾಯಕ ಮುನಾಫ್ ರೆಡ್ ಹ್ಯಾಂಡ್ ಆಗಿ ಉಡುಪಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾರೆ. ಕಾರು ಮಾಲೀಕ ಉಡುಪಿಯ ವಿಘ್ನೇಶ್ ಎಂಬುವವರ ದೂರಿನಂತೆ ಇಂದು ಮಧ್ಯಾಹ್ನ ಮಣಿಪಾಲದ ಆರ್ ಟಿಒ ಕಚೇರಿಗೆ ಹಠಾತ್ ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಂಭವಿಸಿದ […]
ವಿಲ್ಲೇಜ್ ಲೈಫ್ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

ಉಡುಪಿ: ತ್ರಿವರ್ಣ ಆರ್ಟ್ ಸೆಂಟರ್ ಆಶ್ರಯದಲ್ಲಿ ಮಣಿಪಾಲ ಮತ್ತು ಕುಂದಾಪುರ ತ್ರಿವರ್ಣ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಮಣಿಪಾಲ ಗೀತಾಮಂದಿರದಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ವಿಲ್ಲೇಜ್ ಲೈಫ್’ ಚಿತ್ರಕಲಾ ಪ್ರದರ್ಶನಕ್ಕೆ ಅಂಬಲಪಾಡಿ ದೇಗುಲದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಶನಿವಾರ ಚಾಲನೆ ನೀಡಿದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ. ಎಚ್. ಶಾಂತಾರಾಮ್ ಮಾತನಾಡಿ, ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆ, ಆಟಗಳನ್ನು ಗುರುತಿಸಿಕೊಳ್ಳಲು ಚಿತ್ರಕಲಾ ಪ್ರದರ್ಶನ ಸಹಕಾರಿಯಾಗಿದೆ. ಗ್ರಾಮಗಳು ನಗರಗಳಾಗಿ ಪರಿವರ್ತನೆಯಾಗುತ್ತಿರುವ ಈ […]
ಸ್ನೇಹಿತರಿಗೆ ವಂಚಿಸಿ ಇನ್ನೋವಾ ಕಾರು ಕಳವು
ಉಡುಪಿ: ಮಣಿಪಾಲದ ವಿಜಯ ರೆಸಿಡೆನ್ಶಿಯ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡಲಾಗಿದ್ದ ಇನ್ನೋವಾ ಕಾರು ಕಳವು ಆಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರಿನ ನಿವಾಸಿ ಬಿ. ಸತೀಶ್ ಕುಮಾರ್ ಎಂಬುವವರು ತಮ್ಮ ಸಹೋದರರಾದ ಪ್ರಕಾಶ್, ಸುಭಾಷ್ ಹಾಗೂ ಗೆಳೆಯರಾದ ಶ್ರಾವಣ್ ಮತ್ತು ಕೆ. ಪ್ರತಾಪ್ ಅವರೊಂದಿಗೆ ಫೆ. 12ರಂದು ಬೆಂಗಳೂರಿನಿಂದ ಹೊರಟು ಹಾಸನ, ಬೇಲೂರಿಗೆ ಹೋಗಿ ನಂತರ ಮಣಿಪಾಲದ ವಿಜಯ ರೆಸಿಡೆನ್ಸಿಗೆ ಬಂದು ರೂಂ ಮಾಡಿದ್ದರು. ಅಂದು ರಾತ್ರಿ ರೂಮ್‌ನ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು […]