ಗಣೇಶ ಚತುರ್ಥಿ ಆಚರಣೆ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೂರ್ವಾಭಾವಿ ಸಭೆ

ಉಡುಪಿ: ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗೌರಿ ಗಣೇಶ ಚತುರ್ಥಿ ಸಂದರ್ಭದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕೂರ್ಮಾ ರಾವ್ ನೇತೃತ್ವದಲ್ಲಿ ಸಭೆ ನಡೆಯಿತು. ಜಿಲ್ಲೆಯಲ್ಲಿ ಆಗಸ್ಟ್ 31 ರಿಂದ ಆರಂಭವಾಗುವ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ವಿಸರ್ಜನೆ ಕಾರ್ಯಕ್ರಮಗಳಿಗೆ ಅಗತ್ಯ ಅನುಮತಿಗಳನ್ನು ನೀಡುವಾಗ ಕಂದಾಯ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಗಳ ನಡುವೆ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ […]
ಮಣಿಪಾಲ: ಲಕ್ಷ್ಮೀಂದ್ರ ನಗರದಲ್ಲಿ ಈಸಿ ಬೈ ನೂತನ ಮಳಿಗೆ ಉದ್ಘಾಟನೆ

ಮಣಿಪಾಲ: ಇಲ್ಲಿನ ಲಕ್ಷ್ಮೀಂದ್ರ ನಗರದಲ್ಲಿ ದುಬೈನ ಲ್ಯಾಂಡ್‍ಮಾರ್ಕ್ ಗ್ರೂಪ್ ನ ಬಟ್ಟೆ ಮಳಿಗೆ ಈಸಿ ಬೈ ನ ನೂತನ ಶಾಖೆ ಶುಭಾರಂಭಗೊಂಡಿದೆ. ಕರ್ನಾಟಕದಲ್ಲಿ ಇದು ಈಸಿ ಬೈ ನ 25ನೇ ಮಳಿಗೆ ಮತ್ತು ದೇಶದಲ್ಲಿ 125 ನೇ ಮಳಿಗೆಯಾಗಿದೆ. ಈ ವಿಶಾಲವಾದ ಮಳಿಗೆಯು 8000 ಚದರಡಿ ವಿಸ್ತೀರ್ಣವನ್ನು ಹೊಂದಿದ್ದು, ಇಡೀ ಕುಟುಂಬ ಬಯಸುವ ಅತ್ಯಾಧುನಿಕ ವಸ್ತ್ರಗಳನ್ನು ಒದಗಿಸುತ್ತದೆ. ಇಲ್ಲಿ ಪುರುಷರ, ಮಹಿಳೆಯರ ಮತ್ತು ಮಕ್ಕಳ ಉಡುಪುಗಳ ಪ್ರತ್ಯೇಕ ವಿಭಾಗಗಳನ್ನು ಹೊಂದಿದ್ದು, ಪ್ರತಿಯೊಬ್ಬರಿಗೂ ಬೇಕಾದ ಅಗತ್ಯ ವಸ್ತುಗಳು ಒಂದೇ […]
ಆಪದ್ಭಾಂದವರಂತಿರುವ ಆಟೋ ರಿಕ್ಷಾ ಚಾಲಕರಿಗೂ ಆರ್ಥಿಕ ರಕ್ಷಣೆಯ ಅಗತ್ಯವಿದೆ: ವಿನಯ್ ಕುಮಾರ್ ಸೊರಕೆ

ಮಣಿಪಾಲ: ಹಗಲು ರಾತ್ರಿ ಎನ್ನದೆ ದುಡಿಯುವ, ಯಾವುದೇ ಸಮಯದ ಆಪತ್ತಿನಲ್ಲಿಯೂ ಸಹಾಯಕ್ಕೆ ಬರುವ ಆಟೋ ರಿಕ್ಷಾ ಚಾಲಕರು ಆಪದ್ಭಾಂದವರಿದ್ದಂತೆ. ಹೊತ್ತಲ್ಲದ ಹೊತ್ತಿನಲ್ಲಿಯೂ ನಮ್ಮ ಸಹಾಯಕ್ಕಾಗುವ ಆಟೋ ರಿಕ್ಷಾ ಚಾಲಕರಿಗೂ ಆರ್ಥಿಕ ರಕ್ಷಣೆ ಬೇಕು. ಈ ನಿಟ್ಟಿನಲ್ಲಿ ಆಟೋ ರಿಕ್ಷಾ ನಿರ್ವಾಹಕರ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯು ಉತ್ತಮ ಕಾರ್ಯಗಳನ್ನು ಮಾಡುತ್ತಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು. ಅವರು ಭಾನುವಾರ ಮಣಿಪಾಲದ ಬಾಳಿಗಾ ಹೋಟೇಲ್ ಬಳಿ ಆಟೋ ನಿರ್ವಾಹಕರ ಸಹಕಾರಿ ಸಂಘದ ನೂತನ ಹವಾನಿಯಂತ್ರಿತ ಸ್ವಂತ […]
ಮಣಿಪಾಲ: ಆಗಸ್ಟ್ 28 ರಂದು ಆಟೋ ನಿರ್ವಾಹಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಕಟ್ಟಡ ಉದ್ಘಾಟನೆ

ಮಣಿಪಾಲ: ಆಟೋ ನಿರ್ವಾಹಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಣಿಪಾಲ ಶಾಖೆಯ ಹವಾನಿಯಂತ್ರಿತ ಸ್ವಂತ ಕಟ್ಟಡದ ಉದ್ಘಾಟನಾ ಸಮಾರಂಭವು ಆಗಸ್ಟ್ 28 ಆದಿತ್ಯವಾರದಂದು ಬೆಳಿಗ್ಗೆ 10.30 ಗಂಟೆಗೆ ಮಣಿಪಾಲ ಅಲೆವೂರು ರಸ್ತೆಯ ಬಾಳಿಗಾ ಹೋಟೆಲ್ ಬಳಿ ನಡೆಯಲಿದ್ದು, ಶಾಸಕ ಕೆ. ರಘುಪತಿ ಭಟ್ ಉದ್ಘಾಟನೆ ನೆರವೇರಿಸಲಿದ್ದಾರೆ. ಆಟೋ ನಿರ್ವಾಹಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷತೆ ವಹಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪೇಂದ್ರ ನಾಯಕ್ […]
ಮಾಹೆ: ಆಗಸ್ಟ್ 26 ಮತ್ತು 27 ರಂದು ಮೆಂಟಲ್ ಹೆಲ್ತ್ ಹ್ಯಾಕಥಾನ್ -2022 ಆಯೋಜನೆ

ಮಣಿಪಾಲ: ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್, ಡೆಡಾಲಸ್ ಹೆಲ್ತ್‌ಕೇರ್ ಸಿಸ್ಟಮ್ಸ್ ಗ್ರೂಪ್‌ನ ಸಹಯೋಗದೊಂದಿಗೆ “ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ನಾವೀನ್ಯತೆ” ವಿಷಯದ ಕುರಿತು ಮೆಂಟಲ್ ಹೆಲ್ತ್ ಹ್ಯಾಕಥಾನ್ ಅನ್ನು ಆಗಸ್ಟ್ 26 ಮತ್ತು 27 ರಂದು ಆಯೋಜಿಸಲಿದೆ. ಭಾವನಾತ್ಮಕತೆ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಯೋಗಕ್ಷೇಮ ಸೇರಿದಂತೆ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಹ್ಯಾಕಥಾನ್ ಅನ್ನು ಕೇಂದ್ರೀಕರಿಸಲಾಗಿದೆ. ಹ್ಯಾಕಥಾನ್ ಮಾನಸಿಕ ಆರೋಗ್ಯ ರಕ್ಷಣೆಯಲ್ಲಿ ನವೀನ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಅಭಿವೃದ್ದಿ ಪಡಿಸಲು ಆಸಕ್ತಿ ಹೊಂದಿರುವ […]