ಮಾಹೆ: ಸಾಮಾಜಿಕ ಬದಲಾವಣೆಯಲ್ಲಿ ಯುವಕರ ಪಾತ್ರ ಕುರಿತು 3 ನೇ ರಾಷ್ಟ್ರೀಯ ಸಮಾವೇಶ

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಾಮಾಜಿಕ ಬದಲಾವಣೆಯಲ್ಲಿ ಯುವಕರ ಪಾತ್ರ ಕುರಿತು ತನ್ನ 3 ನೇ ರಾಷ್ಟ್ರೀಯ ಸಮಾವೇಶ ವನ್ನು ಸೆಪ್ಟೆಂಬರ್ 17 ರಂದು ಮಣಿಪಾಲದ ಡಾ ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಲಿದೆ. ಯುವಜನರಲ್ಲಿ ಕೊಡುವಿಕೆಯ ಪರಿಕಲ್ಪನೆಯನ್ನು ಉತ್ತೇಜಿಸುವುದು ಮತ್ತು ಸಾಮಾಜಿಕ ಬದಲಾವಣೆಯನ್ನು ತರುವಲ್ಲಿ ಸಂವೇದನಾಶೀಲರಾಗಲು ಸಹಾಯ ಮಾಡುವುದು ಈ ಸಮ್ಮೇಳನದ ಉದ್ದೇಶವಾಗಿದೆ. ಮಾಹೆ ಮತ್ತು ಮಾಹೆಯೇತರ ಸಂಸ್ಥೆಗಳಿಂದ ಸುಮಾರು 1000 ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಮಣಿಪಾಲ್ ಗ್ಲೋಬಲ್ […]

ಶ್ರೀ ಶಾರದ ಟ್ರೈನಿಂಗ್ ಇನ್ಸ್ಟಿಟ್ಯೂಟಿನಲ್ಲಿ ಶಿಕ್ಷಕರ ದಿನಾಚರಣೆ

ಮಣಿಪಾಲ: ಸೋಮವಾರದಂದು ಮಣಿಪಾಲದ ಶ್ರೀ ಶಾರದ ಟ್ರೈನಿಂಗ್ ಇನ್ಸ್ಟಿಟ್ಯೂಟಿನಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಶಿಕ್ಷಕಿ ಚಂದ್ರಕಲಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಕರ ಪಾತ್ರ ಮುಖ್ಯ ನಮ್ಮ ಬದುಕಿನಲ್ಲಿ ಬಂದ ಪ್ರತಿಯೊಂದು ಶಿಕ್ಷಕರನ್ನು ಸ್ಮರಿಸಬೇಕಾದದ್ದು ನಮ್ಮ ಆದ್ಯ ಕರ್ತವ್ಯ. ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ದುಡಿದರೆ ಯಶಸ್ಸು ಖಂಡಿತ ಸಾಧ್ಯ ಎಂದರು.   ಮುಖ್ಯ ಅತಿಥಿಯಾಗಿ ಡಾ. ವಿಶ್ವನಾಥ್ ಕಾಮತ್‌ರವರು ಮಾತಾನಾಡಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಉದಾಹರಣೆ ನೀಡಿ, ಅವರು ಕ್ಷಿಪಣಿ ಜನಕ, […]

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮಣ್ಣಪಳ್ಳದಲ್ಲಿ ಕ್ರಾಫ್ಟ್ ವಿಲೇಜ್ ಮಾಡುವ ಚಿಂತನೆ: ಜಿಲ್ಲಾಧಿಕಾರಿ

ಉಡುಪಿ: ಮಣಿಪಾಲದ ಮಣ್ಣಪಳ್ಳವನ್ನು ಪ್ರವಾಸೀ ತಾಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಲ್ಲಿ ಕ್ರಾಫ್ಟ್ ವಿಲೇಜ್ ಮಾಡುವ ಬಗ್ಗೆ ಚಿಂತನೆ ಮತ್ತು ಅಗತ್ಯ ರೂಪುರೇಷೆಗಳನ್ನು ಸಿದ್ದಪಡಿಸುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚಿಸಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಣ್ಣಪಳ್ಳದಲ್ಲಿ ವಾರದ ಮಾರುಕಟ್ಟೆ, ಆಹಾರ ಮೇಳ ಮತ್ತು ಕರಕುಶಲ ವಸ್ತುಪ್ರದರ್ಶನ ಮುಂತಾದ ಕಾರ್ಯಕ್ರಮಗಳ ಮೂಲಕ ದೆಹಲಿ ಹಾಟ್ ಮಾದರಿಯಲ್ಲಿ ಕ್ರಾಫ್ಟ್ ವಿಲೇಜ್ ಮಾಡಲು […]

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಶಿಕ್ಷಕರಿಗೆ ಪ್ರಶಸ್ತಿ ಪದಾನ ಸಮಾರಂಭ

ಉಡುಪಿ: ಸೆ.4 ರಂದು ಮಧ್ಯಾಹ್ನ 2.30 ಕ್ಕೆ ರಜತಾದ್ರಿಯ ವಾಜಪೇಯಿ ಸಂಭಾಂಗಣದಲ್ಲಿ 2022-23 ನೇ ಸಾಲಿನ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಒಟ್ಟು 17 ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ವಲಯವಾರು ಪ್ರಶಸ್ತಿ ವಿಜೇತರು: ಕಿರಿಯ ಪ್ರಾಥಮಿಕ ವಿಭಾಗ ಶ್ರೀ ರಾಮ ಶೆಟ್ಟಿ, ಮು.ಶಿ ವಿದ್ಯಾಮಂದಿರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಬ್ರಹ್ಮಾವರ ಶೀಮತಿ ಸುಜಾತಾ ಕೆ, ಸ.ಶಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೆಳಸುಂಕ, […]

ಮಾಹೆ: ವಿದ್ಯಾರ್ಥಿಗಳಿಗಾಗಿ ಜೆಂಡರ್ ಚಾಂಪಿಯನ್ ಕಾರ್ಯಾಗಾರ

ಮಣಿಪಾಲ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಮಾಹೆಯ ವಿದ್ಯಾರ್ಥಿ ವ್ಯವಹಾರಗಳ ವಿಭಾಗವು ವಿವಿಧ ವಿದ್ಯಾರ್ಥಿ ಸಮುದಾಯಕ್ಕೆ ಜೆಂಡರ್ ಚಾಂಪಿಯನ್ ಕಾರ್ಯಾಗಾರವನ್ನು ಆಗಸ್ಟ್ 27 ರಂದು ಬೆಳಿಗ್ಗೆ 9.30 ರಿಂದ ಸಂಜೆ 4.30 ರವರೆಗೆ ಆಯೋಜಿಸಲಾಗಿತ್ತು. ಮಾಹೆಯ ವಿವಿಧ ಸಂಸ್ಥೆಗಳಿಂದ 55 ಅಧ್ಯಾಪಕ ಸಂಯೋಜಕರು ಮತ್ತು ಆಯ್ದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶಾಂತವೀರ ಶಿವಪ್ಪ ಮಾತನಾಡಿ, ಎಲ್ಲಾ ಲಿಂಗಗಳಿಗೂ […]