ಮಣಿಪಾಲ: ಕಿಡ್ ಝೀ ಮಕ್ಕಳಿಂದ ‘ಹಸಿರು ಉಡುಪಿ ಸ್ವಚ್ಛ ಉಡುಪಿ’ ರ‍್ಯಾಲಿ

ಮಣಿಪಾಲ: ‘ಹಸಿರು ಉಡುಪಿ ಸ್ವಚ್ಛ ಉಡುಪಿ’ ಉದ್ದೇಶದೊಂದಿಗೆ ಆಗಸ್ಟ್ 23 ಮಂಗಳವಾರದಂದು ಕಿಡ್ ಝೀ ಮಣಿಪಾಲ ಶಾಲೆಯ ಮಕ್ಕಳು ರ‍್ಯಾಲಿಯೊಂದನ್ನು ಏರ್ಪಡಿಸಿದ್ದರು. ಶಾಲಾ ಮಕ್ಕಳು ಸಿಂಡಿಕೇಟ್ ವೃತ್ತದಿಂದ ಮಣಿಪಾಲ ಪೋಲೀಸ್ ಸ್ಟೇಷನ್ ವರೆಗೆ ಮೆರವಣಿಗೆ ನಡೆಸಿದರು. ರ‍್ಯಾಲಿಯು ಭೂಮಿ ಉಳಿಸಿ ಮತ್ತು ಪ್ಲಾಸ್ಟಿಕ್ ಬ್ಯಾನ್ ಮಾಡಿ ಎನ್ನುವ ಘೋಷಣೆಯನ್ನೂ ಹೊಂದಿತ್ತು. ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸಂಚಾರಿ ವ್ಯವಸ್ಥೆಯನ್ನು ಸುಗಮಗೊಳಿಸಲು ಮಣಿಪಾಲ ಎಸ್.ಎಚ್.ಒ ಮಂಜುನಾಥ್, ಪಿ.ಎಸ್.ಐ ಮತ್ತು ಸಿಬ್ಬಂದಿಗಳು ಸಹಕರಿಸಿದರು. ಶಾಲಾ ಮಕ್ಕಳಿಗೂ ಪೊಲೀಸ್ ಇಲಾಖೆಯ ಕಾರ್ಯಗಳನ್ನು […]

ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಓರಿಯಂಟೇಶನ್ ಡೇ ಕಾರ್ಯಕ್ರಮ

ಮಣಿಪಾಲ: ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಗೀತ ಅಕಾಡೆಮಿಯನ್ನು ಪ್ರಾರಂಭಿಸುವ ಹಂತದಲ್ಲಿದೆ ಎಂದು ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಹೇಳಿದರು. ಅವರು ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ತನ್ನ ಹೊಸ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಓರಿಯಂಟೇಶನ್ ಡೇ-2022 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕಲಾ ಅಧ್ಯಯನ ವಿಶ್ವವಿದ್ಯಾಲಯದ ಅಂತಸತ್ವವಾಗಿದ್ದು, ಅದಿಲ್ಲದೆ ಶೈಕ್ಷಣಿಕ ಜೀವನವು ತುಂಬಾ ಯಾಂತ್ರಿಕವಾಗುತ್ತದೆ ಎಂದರು. ಮಣಿಪಾಲ ಸಂಸ್ಥೆಗಳ ಪ್ರಾರಂಭದ ಹಂತದಲ್ಲಿ ಅಂತರ ಶಿಕ್ಷಣ ಶಾಖೀಯತೆ ಉದಯವಾಗಿತ್ತು […]

ಕಸ್ತೂರ್ಬಾ ಆಸ್ಪತ್ರೆ ಹೊರರೋಗಿ ಚಿಕಿತ್ಸೆ ವಿಭಾಗಕ್ಕೆ ರಜೆ

ಮಣಿಪಾಲ: ಆಗಸ್ಟ್ 19, 20, 21 ಮತ್ತು 31 ರಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಡಾ. ಟಿ.ಎಂ.ಎ.ಪೈ ಆಸ್ಪತ್ರೆ, ಮತ್ತು ಕಾರ್ಕಳದ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಗಳ ಹೊರರೋಗಿ ವಿಭಾಗಕ್ಕೆ ರಜೆ ಇರುತ್ತದೆ. ಆದಾಗ್ಯೂ, ಅಪಘಾತ ಮತ್ತು ತುರ್ತುಚಿಕಿತ್ಸಾ ವಿಭಾಗವು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ವೈದ್ಯಕೀಯ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

ತುಳುನಾಡಿನ ಸಂಸ್ಕೃತಿ ಅಧ್ಯಯನ ಆನ್‌ಲೈನ್‌ ಕೋರ್ಸ್‌ ಉದ್ಘಾಟನೆ: ಇಂದು ಸಂಜೆ ಮಾಹೆಯ ಅಂಗಣದಲ್ಲಿ ಹುಲಿವೇಷ ಕುಣಿತ

ಮಣಿಪಾಲ: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ನ ಸೆಂಟರ್‌ ಫಾರ್‌ ಇಂಟರ್‌ಕಲ್ಚರಲ್‌ ಸ್ಟಡೀಸ್‌ ಆ್ಯಂಡ್‌ ಡಯಲಾಗ್‌  ಘಟಕವು ‘ಡಿಸರ್ನಿಂಗ್‌ ಇಂಡಿಯ: ಲಿವಿಂಗ್‌ ಕಲ್ಚರ್ಸ್‌ ಆಫ್‌ ತುಳುನಾಡು’ ಎಂಬ ಶೀರ್ಷಿಕೆಯಲ್ಲಿ ಆನ್‌ಲೈನ್‌ ಕೋರ್ಸ್‌ ಅನ್ನು ಆರಂಭಿಸುತ್ತಿದ್ದು ಇದರ ಉದ್ಘಾಟನೆ ಆಗಸ್ಟ್‌ 18 ಗುರುವಾರ ಸಂಜೆ 4:30 ಗಂಟೆಗೆ ಮಣಿಪಾಲದ ಮಾಹೆ ಮುಖ್ಯ ಕಚೇರಿಯ ಅಂಗಣದಲ್ಲಿ ನಡೆಯಲಿದೆ. ಮಣಿಪಾಲ್‌ ಶಿಕ್ಷಣ ಮತ್ತು ವೈದ್ಯಕೀಯ ಬಳಗದ ಸಂಸ್ಥೆಗಳ ಅಧ್ಯಕ್ಷ ಡಾ. ರಂಜನ್‌ ಪೈ, ಮಾಹೆಯ ಸಹಕುಲಾಧಿಪತಿ ಡಾ. ಎಚ್‌. ಎಸ್‌. ಬಲ್ಲಾಳ್‌, ಕುಲಪತಿ […]

ಮಣಿಪಾಲ: ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದಲ್ಲಿ ಮಹಿಳೆಯರಿಗಾಗಿ ವಿವಿಧ ಕೋರ್ಸ್ ಗಳ ಉಚಿತ ತರಬೇತಿಗಳು

ಮಣಿಪಾಲ: ಇಲ್ಲಿನ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ, ಸ್ಕಿಲ್ ಇಂಡಿಯಾ ತರಬೇತಿ ಕೇಂದ್ರದಲ್ಲಿ ಯುವತಿಯರು ಮತ್ತು ಮಹಿಳೆಯರಿಗಾಗಿ ಫ್ಯಾಶನ್ ಡಿಸೈನಿಂಗ್, ಮಹಿಳೆಯ ಉಡುಪುಗಳ ವಿನ್ಯಾಸ, ಎಂಬ್ರಾಯಡರಿ ಮತ್ತು ಟೈಲರಿಂಗ್ ಕೋರ್ಸ್ ಗಳ ತರಬೇತಿಗಳನ್ನು 3 ತಿಂಗಳುಗಳ ಕಾಲ ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಆಸಕ್ತರು ಕೂಡಲೇ ಸಂಪರ್ಕಿಸಿ ವಿಳಾಸ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ, ರೂಮನ್ ಟೆಕ್ನಾಲಜೀಸ್ ಪ್ರೈ.ಲಿ, 3 ನೇ ಮಹಡಿ, ರಿಲಾಯನ್ಸ್ ಟ್ರೆಂಡ್ ನ ಮೇಲೆ, ಲಕ್ಷ್ಮೀಂದ್ರನಗರ, ಮಣಿಪಾಲ ದೂರವಾಣಿ 9535040711, ವಾಟ್ಸಾಪ್ 9591229792 ಸಮಯ […]