ಮುಂಗಾರು ಋತುವಿನ ಎಫೆಕ್ಟು: ಕರಾವಳಿಯಲ್ಲಿ ಮೀನಿನ ದರ ದುಪ್ಪಟ್ಟು!!

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆಯ ಲಕ್ಷಣಗಳು ಕಾಣಿಸಿಕೊಂಡಿರುವುದರಿಂದ ಹಾಗೂ ಎರಡು ತಿಂಗಳುಗಳವರೆಗೆ ಮೀನುಗಾರಿಕೆಗೆ ನಿಷೇಧ ಹೇರಿರುವುದರಿಂದ ನಿರೀಕ್ಷೆಯಂತೆಯೆ ಮೀನಿನ ದರ ದುಪ್ಪಟ್ಟಾಗಿದೆ. ನಗರದ ಕೆಎಫ್‌ಡಿಸಿ ಯಲ್ಲಿ ಒಂದು ಕೆಜಿ ಬೊಳೆಂಜಿರ್ 1,600 ರೂ, ಅಂಜಲ್ ಮೀನು ಪ್ರತಿ ಕೆಜಿಗೆ 1300 ರೂಗೆ ಮಾರಾಟವಾಗಿದೆ. ಕೇವಲ 12 ದಿನಗಳ ಹಿಂದೆ ಈ ಮೀನುಗಳ ದರ ಈಗಿನ ದರದ ಅರ್ಧದಷ್ಟಿತ್ತು. ದೊಡ್ಡ ಸಿಗಡಿ ಕೆಜಿಗೆ 475 ರೂ ಹಾಗೂ ಬೂತಾಯಿ-ಬಂಗುಡೆ ಮೀನುಗಳು ಕ್ರಮವಾಗಿ ಪ್ರತಿ ಕೆಜಿಗೆ 250 ರೂ ಮತ್ತು […]

ಮಂಗಳೂರು: ವಾಮಂಜೂರಿನಲ್ಲಿ ಅಣಬೆ ಕಾರ್ಖಾನೆ ವಿರುದ್ದ ಸಾರ್ವಜನಿಕರಿಂದ ಧರಣಿ

ಮಂಗಳೂರು: ನಗರದ ಹೊರವಲಯದಲ್ಲಿರುವ ವಾಮಂಜೂರು ಬಡಾವಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಣಬೆ ಕಾರ್ಖಾನೆಯಿಂದ ಆರೋಗ್ಯ ಹಾನಿಯಾಗುತ್ತಿರುವ ವಿರುದ್ದ ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದು, ಗುರುವಾರದಂದು ಇಲ್ಲಿನ ವ್ಯಾಪಾರಿಗಳು ಅರ್ಧ ದಿನ ಅಂಗಡಿ ಮುಂಗಟ್ಟು ಬಂದ್ ಮಾಡಿ, ಪ್ರತಿಭಟನೆ ನಡೆಸುತ್ತಿರುವ ನಿವಾಸಿಗಳಿಗೆ ಬೆಂಬಲ ಸೂಚಿಸಿದ್ದಾರೆ. ಅಣಬೆ ಕಾರ್ಖಾನೆಯನ್ನು ಮುಚ್ಚುವಂತೆ ಒತ್ತಾಯಿಸಿ ನಿವಾಸಿಗಳು ಸ್ಥಳೀಯ ಗ್ರಾಮಸ್ಥ ರಿಯಾಜ್ ಅಹಮದ್ ಅವರೊಂದಿಗೆ ಅನಿರ್ದಿಷ್ಟಾವಧಿ ಧರಣಿ ಕುಳಿತಿದ್ದು, ಸುಮಾರು 190 ಮನೆಗಳಿರುವ ಜನವಸತಿ ಪ್ರದೇಶದಲ್ಲಿ ಕಾರ್ಖಾನೆ ಕಾರ್ಯ ನಿರ್ವಹಿಸುತ್ತಿದ್ದು, ಕಾರ್ಖಾನೆಯೊಳಗೆ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತಿದ್ದು, ಅಣಬೆ ಕಟಾವು […]

ಕರಾವಳಿಯಲ್ಲಿ ಮುಂದಿನ ಎರಡು ತಿಂಗಳು ಮೀನುಗಾರಿಕೆ ನಿಷೇಧ: ಏರಲಿದೆ ಮೀನಿನ ದರ?

ಉಡುಪಿ/ಮಂಗಳೂರು: ಮೀನು ಪ್ರಿಯರಿಗೆ ಅಪ್ರಿಯವಾದ ಸುದ್ದಿ ಇದು. ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕಾ ಋತು ಮುಕ್ತಾಯವಾಗಿದ್ದು, ಉಭಯ ಜಿಲ್ಲೆಗಳಲ್ಲಿಯೂ ಜೂ.1ರಿಂದ ಜು.31ರ ವರೆಗೆ ಆಳಸಮುದ್ರ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಮೀನಿನ ಪೂರೈಕೆಯಲ್ಲಿ ವ್ಯತ್ಯಾಸಗಳಾಗುವುದರಿಂದ ಮೀನಿನ ದರ ಗಗನಕ್ಕೇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹೀಗಾದಲ್ಲಿ ಮೀನು ಖರೀದಿಸುವುದು ಕಷ್ಟವಾಗಿದ್ದು, ಮೀನು ಪ್ರಿಯರಿಗೆ ನಿರಾಶೆಯಾಗಲಿದೆ. ಮೀನುಗಾರಿಕಾ ಅವಧಿ ಮುಗಿದಿರುವುದರಿಂದ ಇನ್ನು ಆಗಸ್ಟ್ ತಿಂಗಳವರೆಗೂ ಕಾಯಬೇಕಾಗುತ್ತದೆ. ಆಳ ಸಮುದ್ರದ ಮೀನುಗಾರಿಕೆಗೆ ಜೂನ್ ಮತ್ತು ಜುಲೈ ತಿಂಗಳು ರಜಾ ಅವಧಿಯಾಗಿದ್ದು ಈ ಅವಧಿಯಲ್ಲಿ ಮೀನುಗಾರಿಕೆಯನ್ನು […]

ಮಂಗಳೂರು: ಮೇ-19 ರಂದು ಬಿರ್ಲಾ ಶಕ್ತಿ ಸಿಮೆಂಟ್ ಕಾಂಕ್ರೀಟ್ ಬಿಡುಗಡೆ

ಮಂಗಳೂರು: ಇಲ್ಲಿನ ಕೊಡಿಯಾಲ್ ಬೈಲ್ ನಲ್ಲಿರುವ ದ ಓಶನ್ ಪರ್ಲ್ ಹೋಟೆಲ್ ನಲ್ಲಿ ಮೇ.19 ರಂದು ಸಂಜೆ 7 ಗಂಟೆಗೆ ಬಿರ್ಲಾ ಶಕ್ತಿ ಸಿಮೆಂಟ್ ಕಾಂಕ್ರೀಟ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮಂಗಳೂರು: ಟ್ರಾಫಿಕ್ ಸಮಸ್ಯೆ ನಿವಾರಣೆಗಾಗಿ ರಸ್ತೆಗಿಳಿಯಲಿವೆ ‘ಕೋಬ್ರಾ’ಗಳು; ಮಂಗಳೂರು ನಗರ ಪೊಲೀಸರ ಉಪಕ್ರಮ

ಮಂಗಳೂರು: ಮಂಗಳೂರು ಪೊಲೀಸರು ನಾಲ್ಕು ಕೋಬ್ರಾ ದ್ವಿಚಕ್ರ ಸಂಚಾರ ಗಸ್ತು ವಾಹನಗಳನ್ನು ಪರಿಚಯಿಸಿದರು. ಟ್ರಾಫಿಕ್ ಪೂರ್ವ ಮತ್ತು ಪಶ್ಚಿಮ ಪೊಲೀಸ್ ಠಾಣೆಗಳಿಗೆ ಕ್ರಮವಾಗಿ ಎರಡು ವಾಹನಗಳನ್ನು ಸೇರ್ಪಡೆಗೊಳಿಸಿದರು. ಮಂಗಳವಾರದಂದು ಕೋಬ್ರಾ ವಾಹನಗಳನ್ನು ಬಿಡುಗಡೆಮಾಡಲಾಯಿತು ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಸುದ್ದಿಗಾರರಿಗೆ ತಿಳಿಸಿದರು. ಇವು ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಲಿವೆ. ಈ ವಾಹನಗಳಲ್ಲಿ ಸೈರನ್ ಮತ್ತು ಮೈಕ್ ವ್ಯವಸ್ಥೆ ಇರಲಿದೆ. ಯಾವುದೇ ಟ್ರಾಫಿಕ್ ಸಮಸ್ಯೆ ಅಥವಾ ಅಪಘಾತ ಸಂಭವಿಸಿದಲ್ಲಿ ಈ ವಾಹನಗಳು […]