ಡಿ.9 ರಿಂದ 11ರವರೆಗೆ ಅರೆಹೊಳೆ ಪ್ರತಿಷ್ಠಾನದ ವತಿಯಿಂದ ನಾಟಕೋತ್ಸವ ಆಯೋಜನೆ

ಮಂಗಳೂರು: ಕಳೆದ ಏಳು ವರ್ಷಗಳಿಂದ ರಾಜ್ಯ ಮಟ್ಟದ ಕನ್ನಡ ನಾಟಕೋತ್ಸವವನ್ನು ಆಚರಿಸುತ್ತಿರುವ ಅರೆಹೊಳೆ ಪ್ರತಿಷ್ಠಾನವು ಈ ವರ್ಷ ಎಂಟನೆಯ ನಾಟಕೋತ್ಸವವನ್ನು ಡಿಸೆಂಬರ್ 9 ರಿಂದ 11ರತನಕ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಲ್ ಸಿ ಆರ್ ಐ ಸಭಾಂಗಣದಲ್ಲಿ ಆಯೋಜಿಸಿದೆ. ನಾಟಕೋತ್ಸವದ ಮೊದಲ ದಿನ ಡಿ.09 ರಂದು ಉಡುಪಿ ಉದ್ಯಾವರದ ಗಲಾಟೆ ತಂಡದ ಕೀರ್ತನ ಉದ್ಯಾವರ ಅವರ ಏಕವ್ಯಕ್ತಿ ನಾಟಕ ಯತ್ರ ನಾರ್ಯಸ್ತು ಪೂಜ್ಯಂತೇ ಪ್ರದರ್ಶನಗೊಳ್ಳಲಿದೆ. ಈ ನಾಟಕದ ಕಥೆ ಸುಧಾ ಅಡುಕಳ ಅವರದ್ದಾಗಿದ್ದು ರಂಗ ರೂಪ […]
ಮಂಗಳೂರಿನ ಸಾಂಪ್ರದಾಯಿಕ ಪಾಕವಿಧಾನಗಳ ಸಂಗ್ರಹ ‘ಕುಕಿಂಗ್ ವಿತ್ ಲವ್’ ಪುಸ್ತಕ ಬಿಡುಗಡೆ

ಮಂಗಳೂರು: ಮಂಗಳೂರಿನ ಸಾಂಪ್ರದಾಯಿಕ ಪಾಕವಿಧಾನಗಳ ಸಂಗ್ರಹ “ಕುಕಿಂಗ್ ವಿತ್ ಲವ್” ಪುಸ್ತಕ ಡಿ.೪ ರಂದು ಫರ್ಂಡೇಲ್ ಕಂಕನಾಡಿಯಲ್ಲಿ ಬಿಡುಗಡೆಗೊಂಡಿತು. ಪುಸ್ತಕದ ಲೇಖಕಿ, ಶ್ರೀಮತಿ ನಯನಾ ಫೆರ್ನಾಂಡಿಸ್, ಶ್ರದ್ಧಾವಂತ ತಾಯಿ ಮತ್ತು ಹೆಂಡತಿಯಾಗಿ ಮಾನವ ಮತ್ತು ಪ್ರಾಣಿಗಳ ಯೋಗಕ್ಷೇಮವನ್ನು ವಿಚಾರಿಸುವವರಾಗಿ, ಹಲವಾರು ಲಾಭೋದ್ದೇಶವಿಲ್ಲದ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. “ಕುಕಿಂಗ್ ವಿತ್ ಲವ್” ಎಂಬುದು ಕೇವಲ ಅಡುಗೆ ಪುಸ್ತಕವಲ್ಲ, ಆದರೆ ನಯನಾ ಅವರ ತಂದೆ ತಯಾರಿಸಿದ ಮತ್ತು ಮರುನಿರ್ಮಿಸಿದ ಮಂಗಳೂರಿನ ಪಾಕವಿಧಾನಗಳ ಮೂಲಕ ಒಂದು […]
ಕೊಂಕಣ ರೈಲ್ವೆ ವತಿಯಿಂದ ಮಂಗಳೂರು-ಮುಂಬೈ ನಡುವೆ ಚಳಿಗಾಲದ ಸಾಪ್ತಾಹಿಕ ವಿಶೇಷ ರೈಲುಗಳ ವೇಳಾಪಟ್ಟಿ ಇಲ್ಲಿದೆ

ಮಂಗಳೂರು: ಕೊಂಕಣ ರೈಲ್ವೆಯು ಕೇಂದ್ರ ರೈಲ್ವೆಯ ಸಹಯೋಗದೊಂದಿಗೆ ಮುಂಬೈ ಮತ್ತು ಮಂಗಳೂರು ನಡುವೆ ಚಳಿಗಾಲದಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ತೆರವುಗೊಳಿಸಲು ವಿಶೇಷ ರೈಲುಗಳನ್ನು ನಿರ್ವಹಿಸಲಿದೆ. ಡಿಸೆಂಬರ್ 9 ರಿಂದ ಜನವರಿ 6 ರವರೆಗೆ ಪ್ರತಿ ಶುಕ್ರವಾರ: ರೈಲು ನಂ. 01453 ಲೋಕಮಾನ್ಯ ತಿಲಕ್ (ಟರ್ಮಿನಲ್) – ಮಂಗಳೂರು ಜಂಕ್ಷನ್ ವಿಶೇಷ (ಸಾಪ್ತಾಹಿಕ), ಲೋಕಮಾನ್ಯ ತಿಲಕ್ (ಟಿ) ನಿಂದ ರಾತ್ರಿ 10.15 ಕ್ಕೆ ಹೊರಡಲಿದೆ. ರೈಲು ಮರುದಿನ ಸಂಜೆ 5.05ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಡಿಸೆಂಬರ್ 10 ರಿಂದ ಜನವರಿ […]
ನಮ್ಮ ಕುಡ್ಲಕ್ಕೆ ಬಂದವು ಎರಡೆರಡು ಐಷಾರಾಮಿ ಕ್ರೂಸರ್ಗಳು: ಕರಾವಳಿಯಲ್ಲಿ ಮತ್ತೆ ಗರಿಗೆದರಿದ ಪ್ರವಾಸೋದ್ಯಮ ಚಟುವಟಿಕೆ

ಮಂಗಳೂರು: ಬರೋಬ್ಬರಿ ಎರಡು ವರ್ಷಗಳ ವಿರಾಮದ ಬಳಿಕ ಕುಡ್ಲದ ಕರಾವಳಿಯ ಎನ್. ಎಂ.ಪಿ.ಟಿ ಬಂದರಿನಲ್ಲಿ ಎರಡೆರಡು ಐಷಾರಾಮಿ ಕ್ರೂಸರ್ ಗಳು ತಂಗಿ ಪ್ರವಾಸೋದ್ಯಮ ಚಟುವಟಿಕೆ ಪುನಃ ಗರಿಗೆದರಿದ ಸೂಚನೆ ನೀಡಿದವು. ನ.28 ರಂದು ಪ್ರಸಕ್ತ ಕ್ರೂಸ್ ಋತುವಿನ ಮೊದಲ ಕ್ರೂಸ್ ಹಡಗು “ಎಮ್.ಎಸ್ ಯುರೋಪ 2” ಬರ್ತ್ ನಂ. 4 ರಲ್ಲಿ ತಂಗಿತ್ತು. ಮಾಲ್ಟಾ (ಯುರೋಪ್) ಧ್ವಜದ ಅಡಿಯಲ್ಲಿ ನೌಕಾಯಾನ ಮಾಡುತ್ತಿದ್ದ ಎಂಎಸ್ ಯುರೋಪಾ 2, ಒಟ್ಟು 271 ಪ್ರಯಾಣಿಕರು ಮತ್ತು 373 ಸಿಬ್ಬಂದಿಗಳನ್ನು ಹೊಂದಿತ್ತು. 224.38 […]
ಹೊಸ ಪಡಿತರ ಚೀಟಿ ಅರ್ಜಿ ವಿಲೇವಾರಿಗೆ ಸರ್ಕಾರದ ಅಂಗೀಕಾರ ಮುದ್ರೆ

ಮಂಗಳೂರು/ಉಡುಪಿ: ಆದ್ಯತಾ ಪಡಿತರ ಚೀಟಿಗೆ ಹೊಸದಾಗಿ ಅರ್ಜಿ ಸಲ್ಲಿಸಿರುವವರಿಗೆ ಸಮಾಧಾನ ತರುವ ವಿಚಾರವೊಂದು ಬಂದಿದೆ. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದು, ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಸರ್ಕಾರವು ಅಂಗೀಕಾರ ಮುದ್ರೆಯೊತ್ತಿದೆ. ರಾಜ್ಯದಲ್ಲಿ ಸುಮಾರು 1.55 ಲಕ್ಷ ಅರ್ಹ ಅರ್ಜಿಗಳಿದ್ದು, ಇದರಲ್ಲಿ ದ.ಕ ಜಿಲ್ಲೆಯಲ್ಲಿ 3356 ಮತ್ತು ಉಡುಪಿ ಜಿಲ್ಲೆಯಲ್ಲಿ 4367 ಅರ್ಜಿಗಳು ಅರ್ಹತೆ ಪಡೆದಿವೆ. ಪಡಿತರಕ್ಕಾಗಿ ಅರ್ಜಿ ಗುಜರಾಯಿಸಿದವರಿಗೆ ಶ್ರೀಘ್ರದಲ್ಲೆ ರೇಷನ್ ಕಾರ್ಡ್ ದೊರೆಯಲಿದೆ. ಅವಳಿ ಜಿಲ್ಲೆಗಳಲ್ಲಿ ಅರ್ಜಿ ಹಾಕಿದವರ ವಾಸಸ್ಥಳ ಪರಿಶೀಲನಾ ಕಾರ್ಯ ಪೂರ್ಣಗೊಂಡಿದ್ದು, ಅರ್ಹ […]