ಹಾಸ್ಟೆಲ್ ನಿಂದ ತಪ್ಪಿಸಿಕೊಂಡ ಮೂವರು ವಿದ್ಯಾರ್ಥಿನಿಯರು: ಹುಡುಗಿಯರಿಗಾಗಿ ಶೋಧಿಸುತ್ತಿರುವ ಪೊಲೀಸರು

ಸಾಂದರ್ಭಿಕ ಚಿತ್ರ

ಮಂಗಳೂರು: ಬುಧವಾರದಂದು ಇಲ್ಲಿನ ಖಾಸಗಿ ಕಾಲೇಜಿನ ಹಾಸ್ಟೆಲ್ ನಿಂದ ಮೂರು ಪದವಿ ಪೂರ್ವ ವಿದ್ಯಾರ್ಥಿನಿಯರು ತಪ್ಪಿಸಿಕೊಂಡಿದ್ದು, ವಿದ್ಯಾರ್ಥಿನಿಯರನ್ನು ಶೋಧಿಸಲು ಪೊಲೀಸರು ಇತರ ಜಿಲ್ಲೆಗಳ ಠಾಣೆಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಾಸ್ಟೆಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ ಎನ್ನಲಾಗಿದೆ.

ಮೂವರು ವಿದ್ಯಾರ್ಥಿನಿಯರಲ್ಲಿ ಇಬ್ಬರು ಬೆಂಗಳೂರಿನವರಾಗಿದ್ದು, ಒಬ್ಬಾಕೆ ಚಿತ್ರದುರ್ಗದವಳಾಗಿದ್ದಳು. ತನಿಖೆ ನಡೆಸುತ್ತಿರುವ ಪೊಲೀಸರು, ಮೂವರು ವಿದ್ಯಾರ್ಥಿನಿಯರಿಂದ ಯೋಜಿಸಲಾದ ಪೂರ್ವ ಯೋಜಿತ ಕೃತ್ಯ ಇದಾಗಿದೆ ಎನ್ನುವ ಅನುಮಾನ ವ್ಯಕ್ತ ಪಡಿಸಿದ್ದಾರೆ. ವಿದ್ಯಾರ್ಥಿನಿಯರು ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ಕಿಟಕಿಯ ಸರಳುಗಳನ್ನು ಗರಗಸದಿಂದ ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

girls.jpg
ಸಿಸಿಟಿವಿ ದೃಶ್ಯ

ಹಾಸ್ಟೆಲಿನಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಇದರ ದೃಶ್ಯಾವಳಿಗಳಲ್ಲಿ ವಿದ್ಯಾರ್ಥಿನಿಯರು ಬ್ಯಾಗ್ ಸಮೇತ ಕಂಪೌಡ್ ಗೋಡೆ ಹಾರಿ ಪರಾರಿಯಾಗಿರುವುದು ಕಂಡು ಬಂದಿದೆ. ವಿದ್ಯಾರ್ಥಿನಿಯರು ತಮಿಳುನಾಡು ಅಥವಾ ಆಂಧ್ರಪ್ರದೇಶದೆಡೆ ಹೋಗಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿದ್ಯಾರ್ಥಿನಿಯವರ ಕುಟುಂಬಕರಿಗೆ ವಿಷಯ ತಿಳಿಸಲಾಗಿದೆ, ಇತರ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿನಿಯರ ಬಳಿ ಬಹುಶಃ ಮೊಬೈಲ್ ಫೋನ್ ಇಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.