ಮಾ.3: ಮಲ್ಪೆ ಕಡಲ ಕಿನಾರೆಯಲ್ಲಿ ಪಾಂಚಜನ್ಯ ಸಮಾವೇಶ
ಉಡುಪಿ: ನಮೋ ಭಾರತ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ‘ಪಾಂಚಜನ್ಯ’ ಬೃಹತ್ ಸಮಾವೇಶ ಮಲ್ಪೆ ಕಡಲ ತೀರದಲ್ಲಿ ಇಂದು ನಡೆಯಲಿದೆ ಎಂದು ನಮೋಭಾರತ್ ಉಡುಪಿ ಸಂಚಾಲಕ ಶಶಾಂಕ್ ಶಿವತ್ತಾಯ ಹೇಳಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಸುಮಾರು 20 ಸಾವಿರ ಜನರು ಬರುವ ನಿರೀಕ್ಷೆ ಇದೆ. ಸಮಾವೇಶದ ಅಂಗವಾಗಿ ಸಂಜೆ 4ಗಂಟೆಗೆ ವಡಾಬಾಂಡೇಶ್ವರದವರೆಗೆ ಮೋದಿ ಅಭಿಮಾನಿಗಳಿಂದ ವಾಹನ ಜಾಥಾ ಜರುಗಲಿದೆ. ಬಳಿಕ ಸ್ವರಭಾರತಿ ದೇಶಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಗಂಟೆಗೆ […]
ಮಲ್ಪೆ ಬೀಚ್ ಗೆ ಬಾಂಬ್ ಬೆದರಿಕೆ: ವಿಡಿಯೋ ವೈರಲ್
ಉಡುಪಿ: ಮಲ್ಪೆ ಕಡಲ ಕಿನಾರೆಯನ್ನು ಸ್ಪೋಟಿಸುವುದಾಗಿ ಯುವಕನೋರ್ವ ಬೆದರಿಕೆವೊಡ್ಡಿರುವ ವೀಡಿಯೋ ತುಣಕುವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಲ್ಪೆಯ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. 1 ನಿಮಿಷ 24 ಸೆಕೆಂಡ್‍ನ ಈ ವೀಡಿಯೋದಲ್ಲಿ ಮುಖಕ್ಕೆ ಬಟ್ಟೆಕಟ್ಟಿಕೊಂಡಿರುವ ಯುವಕನೊಬ್ಬ ಹಿಂದಿ ಭಾಷೆಯಲ್ಲಿ ಬೆದರಿಕೆ ಹಾಕಿದ್ದಾನೆ. ವೀಡಿಯೋದ ಆರಂಭದಲ್ಲಿ ಪಾಕಿಸ್ತಾನದ ಪರವಾಗಿ ಜೈಕಾರ ಘೋಷಣೆ ಕೂಗುವ ಆತ, ನಮ್ಮ ಮುಂದಿನ ಟಾರ್ಗೆಟ್ ಮಲ್ಪೆ ಬೀಚ್ ಅಲ್ಲಿನ ಜನರು ಬಹಳ ಕೆಟ್ಟವರು. ಅಲ್ಲಿ ಬಹಳ ದೊಡ್ಡ ಪ್ರಮಾಣದ ಬಾಂಬ್ ಸ್ಪೋಟಿಸುತ್ತೇವೆ, ಎಲ್ಲವನ್ನು ಸರ್ವನಾಶ ಮಾಡುತ್ತೇವೆ. ಬೀಚ್ […]
ಮೀನುಗಾರರ ನಿಯೋಗದಿಂದ ಕೇಂದ್ರ ರಕ್ಷಣಾ ಸಚಿವರ ಭೇಟಿ: ನಾಪತ್ತೆಯಾಗಿರುವ ಮೀನುಗಾರರ ರಕ್ಷಣೆಗೆ ಆಗ್ರಹ
ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಹಾಗೂ 7 ಮಂದಿ ಮೀನುಗಾರರ ನಾಪತ್ತೆ ಪ್ರಕರಣದ ಶೀಘ್ರ ತನಿಖೆ ನಡೆಸಿ ಮೀನುಗಾರರನ್ನು ರಕ್ಷಿಸುವಂತೆ ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಮೀನುಗಾರರ ನಿಯೋಗ ಬೆಂಗಳೂರು ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಕೇಂದ್ರ ರಕ್ಷಣಾ ಸಚಿವ ನಿರ್ಮಲ ಸೀತಾರಾಮ್ ಅವರನ್ನು ಇಂದು ಭೇಟಿಯಾಗಿ ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಸಚಿವೆ ನಿರ್ಮಲ ಸೀತಾರಾಮ್, ಆದಷ್ಟು ಬೇಗ ಮಲ್ಪೆಗೆ ಆಗಮಿಸಿ ಈ ಬಗ್ಗೆ ಸೂಕ್ತ ರೀತಿಯಲ್ಲಿ ಅವಲೋಕನ […]
ಮೀನುಗಾರರ ಪತ್ತೆ ಕಾರ್ಯದಲ್ಲಿ ತೊಡಗಿಕೊಳ್ಳಿ, ಕರ್ನಾಟಕದ ನೆರೆ ರಾಜ್ಯಗಳಿಗೆ ಕೇಂದ್ರದ ಸೂಚನೆ
ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ಕಣ್ಮರೆಯಾಗಿರುವ ಏಳು ಮಂದಿ ಮೀನುಗಾರರ ರಕ್ಷಣಾ ಕಾರ್ಯಾಚರಣೆಯಲ್ಲಿ ಕರ್ನಾಟಕದ ನೆರೆ ರಾಜ್ಯಗಳು ಕೂಡ ತೊಡಗಿಸಿಕೊಳ್ಳಬೇಕೆಂದು ಕೇಂದ್ರದ ಗೃಹ ಸಚಿವಾಲಯ ಸೂಚನೆ ನೀಡಿದೆ. ನಾಪತ್ತೆಯಾಗಿರುವ ಮೀನುಗಾರರ ಪತ್ತೆ ಕಾರ್ಯ ಸೂಕ್ತ ರೀತಿಯಲ್ಲಿ ಸಹಕಾರ ನೀಡುವಂತೆ ಉಡುಪಿ ಶಾಸಕ ಕೆ. ರಘುಪತಿ ಭಟ್ ನೇತೃತ್ವದಲ್ಲಿ ಮೀನುಗಾರರ ಮುಖಂಡರು ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರುವ ಕೇಂದ್ರ ಗೃಹ ಸಚಿವಾಲಯವು ತನ್ನ ಅಧೀನದಲ್ಲಿ ಬರುವ […]
ಗಾಳಕ್ಕೆ ಸಿಕ್ಕಿತು 16 ಕೆ.ಜಿ. ತೂಗುವ ಮೀನು..!
ಉಡುಪಿ: ಮಲ್ಪೆ ಸೀವಾಕ್ ಸಮೀಪದ ಸಮುದ್ರದಲ್ಲಿ ಫೆ. 1ರಂದು ಬೃಹತ್ ಗಾತ್ರದ ಮೀನೊಂದು ಗಾಳಕ್ಕೆ ಸಿಕ್ಕಿರುವ ಬಗ್ಗೆ ವರದಿಯಾಗಿದೆ. ಮುಂಜಾವಿನ 4 ಗಂಟೆಯ ವೇಳೆಗೆ ಮಲ್ಪೆಯ ತನ್ವೀರ್ ಎಂಬವರ ಗಾಳಕ್ಕೆ ಈ ಕುಲೇಜ್ ಎಂಬ ಮೀನು ದೊರೆತಿದೆ. ಸುಮಾರು 4 ಅಡಿ ಉದ್ದದ ಈ ಮೀನು 16 ಕೆಜಿ ತೂಕ ಇರುವುದಾಗಿ ತನ್ವೀರ್ ತಿಳಿಸಿದ್ದಾರೆ.