ಉಡುಪಿ: ಮಲ್ಪೆ ಸೀವಾಕ್ ಸಮೀಪದ ಸಮುದ್ರದಲ್ಲಿ ಫೆ. 1ರಂದು ಬೃಹತ್ ಗಾತ್ರದ ಮೀನೊಂದು ಗಾಳಕ್ಕೆ ಸಿಕ್ಕಿರುವ ಬಗ್ಗೆ ವರದಿಯಾಗಿದೆ.
ಮುಂಜಾವಿನ 4 ಗಂಟೆಯ ವೇಳೆಗೆ ಮಲ್ಪೆಯ ತನ್ವೀರ್ ಎಂಬವರ ಗಾಳಕ್ಕೆ ಈ ಕುಲೇಜ್ ಎಂಬ ಮೀನು ದೊರೆತಿದೆ. ಸುಮಾರು 4 ಅಡಿ ಉದ್ದದ ಈ ಮೀನು 16 ಕೆಜಿ ತೂಕ ಇರುವುದಾಗಿ ತನ್ವೀರ್ ತಿಳಿಸಿದ್ದಾರೆ.