ಮಧ್ಯಪ್ರದೇಶ ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ: 10 ಕ್ಕೂ ಹೆಚ್ಚು ಸಾವು, 50 ಜನರಿಗೆ ಗಾಯ, ಮನೆ-ವಾಹನಗಳಿಗೆ ಹಾನಿ

ಭೋಪಾಲ್: ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಬೈರಾಗಢ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 10 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50 ಜನರು ಗಾಯಗೊಂಡಿದ್ದಾರೆ. ಸ್ಫೋಟವು ಸಮೀಪದ ಅರವತ್ತು ಮನೆಗಳು ಹಾನಿಗೀಡಾಗಿವೆ. ಮೂರು ಡಜನ್‌ಗಿಂತಲೂ ಹೆಚ್ಚು ಪ್ರಯಾಣಿಕರು ಸ್ಫೋಟದಿಂದ ಪ್ರಭಾವಿತರಾಗಿದ್ದಾರೆ. ಕಾರ್ಖಾನೆಯಲ್ಲಿ ನಿರಂತರ ಸ್ಫೋಟಗಳು ಸಂಭವಿಸಿದ ಕಾರಣ 100 ಕ್ಕೂ ಹೆಚ್ಚು ಮನೆಗಳನ್ನು ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. ಸ್ಫೋಟದಿಂದಾಗಿ ಗಮನಾರ್ಹ ಸಂಖ್ಯೆಯ ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ […]

ನಾಲ್ಕು ಮುದ್ದು ಮರಿಗಳಿಗೆ ಜನ್ಮವಿತ್ತ ನಮೀಬಿಯಾ ಚಿರತೆ ಜ್ವಾಲಾ; ಮೂರು ಮರಿಗಳ ತಾಯಿಯಾದ ಆಶಾ

ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ ಚಿರತೆ ‘ಜ್ವಾಲಾ’ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಜನವರಿ 24 ರಂದು ಸ್ಪಷ್ಟ ಪಡಿಸಿದ್ದಾರೆ. ಮಂಗಳವಾರದಂದು ಚಿರತೆಯು ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು ಸಚಿವರು ಹೇಳಿದ್ದರು. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿರುವ ಮುಂಚೂಣಿ ವನ್ಯಜೀವಿ ಯೋಧರು ‘ಜ್ವಾಲಾ’ ಚಿರತೆಯ ಅತಿ ಹತ್ತಿರ ಹೋಗಿ ನೋಡಿದಾಗ ನಾಲ್ಕು ಮರಿಗಳಿರುವುದು ಕಂಡುಬಂದಿದೆ ಎಂದು ಅವರು ಎಕ್ಸ್ ನಲ್ಲಿ ತಿಳಿಸಿದ್ದಾರೆ. ಅರಣ್ಯ ಅಧಿಕಾರಿಗಳ ಪ್ರಕಾರ, […]

ಮಧ್ಯಪ್ರದೇಶದಲ್ಲಿ ಎರಡು ಗೂಡ್ಸ್ ರೈಲುಗಳ ನಡುವೆ ಅಪಘಾತ: ಮೂವರಿಗೆ ಗಾಯ

ಬಿಲಾಸ್ ಪುರ: ಸಿಗ್ನಲ್ ಓವರ್‌ಶೂಟ್‌ನಿಂದಾಗಿ ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಬುಧವಾರ ಎರಡು ಸರಕು ರೈಲುಗಳ ನಡುವೆ ಅಪಘಾತ ನಡೆದಿದ್ದು, ರೈಲುಗಳು ಹಳಿತಪ್ಪಿ ಬಿಲಾಸ್‌ಪುರ-ಕಟ್ನಿ ರೈಲು ಮಾರ್ಗದಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿವೆ ಎಂದು ಬಿಲಾಸ್‌ಪುರ ರೈಲ್ವೆ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಗ್ಗೆ 6.50ರ ಸುಮಾರಿಗೆ ಸಿಂಗ್‌ಪುರ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಸಿಗ್ನಲ್ ಓವರ್‌ಶೂಟ್‌ನಿಂದ ರೈಲು ಹಳಿ ತಪ್ಪಿದೆ ಎಂದು ಹೆಚ್ಚಿನ ವಿವರಗಳನ್ನು ನೀಡದೆ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಪಘಾತ ನಡೆದ ಗೂಡ್ಸ್ ರೈಲುಗಳ ಕೆಲವು ವ್ಯಾಗನ್‌ಗಳು […]

ಒಂದು ತಿಂಗಳಲ್ಲಿ 3,419 ಕೋಟಿ ವಿದ್ಯುತ್ ಬಿಲ್: ಮಧ್ಯಪ್ರದೇಶ ವಿದ್ಯುತ್ ನೌಕರನ ಅವಾಂತರಕ್ಕೆ ತಲೆ ತಿರುಗಿ ಆಸ್ಪತ್ರೆ ಸೇರಿದ ಮನೆ ಹಿರಿಸದಸ್ಯ

ಭೋಪಾಲ್: ಒಂದೇ ತಿಂಗಳಲ್ಲಿ 3,419 ಕೋಟಿ ರೂಪಾಯಿ ವಿದ್ಯುತ್ ಖರ್ಚು! ಈ ವಿದ್ಯುತ್ ಬಿಲ್ ನೋಡಿ ಮನೆಯ ಮಾಲೀಕರಿಗೆ ತಲೆ ತಿರುಗಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನ ಶಿವ ವಿಹಾರ್ ಕಾಲೋನಿ ನಿವಾಸಿ ಪ್ರಿಯಾಂಕಾ ಗುಪ್ತಾ ಮನೆಗೆ ಜುಲೈನಲ್ಲಿ 3,419 ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ ಬಂದಾಗ ಮನೆ ಮಂದಿಯೆಲ್ಲಾ ಆಘಾತಕ್ಕೊಳಗಾಗಿ ಮನೆಯ ಹಿರಿಯ ಸದಸ್ಯ, ಪ್ರಿಯಾಂಕಾರವರ ಮಾವ ಅಸ್ವಸ್ಥರಾಗಿ ಆಸ್ಪತ್ರೆ ಸೇರಬೇಕಾಗಿ ಬಂದಿದೆ. ತನ್ನ ತಂದೆ ವಿದ್ಯುತ್ ಬಿಲ್ ನೋಡಿ […]