ನಾಲ್ಕು ಮುದ್ದು ಮರಿಗಳಿಗೆ ಜನ್ಮವಿತ್ತ ನಮೀಬಿಯಾ ಚಿರತೆ ಜ್ವಾಲಾ; ಮೂರು ಮರಿಗಳ ತಾಯಿಯಾದ ಆಶಾ
ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ ಚಿರತೆ ‘ಜ್ವಾಲಾ’ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಜನವರಿ 24 ರಂದು ಸ್ಪಷ್ಟ ಪಡಿಸಿದ್ದಾರೆ. ಮಂಗಳವಾರದಂದು ಚಿರತೆಯು ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು ಸಚಿವರು ಹೇಳಿದ್ದರು. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿರುವ ಮುಂಚೂಣಿ ವನ್ಯಜೀವಿ ಯೋಧರು ‘ಜ್ವಾಲಾ’ ಚಿರತೆಯ ಅತಿ ಹತ್ತಿರ ಹೋಗಿ ನೋಡಿದಾಗ ನಾಲ್ಕು ಮರಿಗಳಿರುವುದು ಕಂಡುಬಂದಿದೆ ಎಂದು ಅವರು ಎಕ್ಸ್ ನಲ್ಲಿ ತಿಳಿಸಿದ್ದಾರೆ. ಅರಣ್ಯ ಅಧಿಕಾರಿಗಳ ಪ್ರಕಾರ, […]
ನಾಲ್ಕು ಆರೋಗ್ಯಕರ ಚಿರತೆ ಮರಿಗಳಿಗೆ ಜನ್ಮವಿತ್ತ ನಮೀಬಿಯಾದಿಂದ ಬಂದ ಚಿರತೆ ಸೀಯಾಯ
ಭೋಪಾಲ್: ಭಾರತದ ಚಿರತೆಯ ಆಮದುಗಳ ತವರು ಮಧ್ಯಪ್ರದೇಶದಲ್ಲಿರುವ ಕುನೊ ರಾಷ್ಟ್ರೀಯ ಉದ್ಯಾನವನವು ಪ್ರಾಜೆಕ್ಟ್ ಚೀತಾದ ಭಾಗವಾಗಿ ತನ್ನ ಮೊದಲ ಮರಿ ಚಿರತೆಗಳನ್ನು ಸ್ವಾಗತಿಸಿದೆ. ಚಿರತೆಗಳ ಸಂರಕ್ಷಣೆ ಮತ್ತು ಮರುಪರಿಚಯ ಯೋಜನೆಯಲ್ಲಿ ತೊಡಗಿರುವ ಅಧಿಕಾರಿಗಳು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಚಿರತೆ ಮರಿಗಳ ಜನನವು ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳು ತಮ್ಮ ಹೊಸ ಪರಿಸರಕ್ಕೆ ಉತ್ತಮವಾಗಿ ಹೊಂದಿಕೊಳ್ಳುವ ಸಕಾರಾತ್ಮಕ ಸಂಕೇತವಾಗಿದೆ ಎಂದಿದ್ದಾರೆ. ಚಿರತೆಗಳ ಸ್ಥಳೀಯ ಅಳಿವಿನ ಏಳು ದಶಕಗಳ ನಂತರ, ಭಾರತವು ಸೆಪ್ಟೆಂಬರ್ 2022 ರಲ್ಲಿ ತನ್ನ ಮಧ್ಯಪ್ರದೇಶದ ಕಾಡಿನಲ್ಲಿ […]
ಆಫ್ರಿಕಾದಿಂದ ಭಾರತದಕ್ಕೆ ಬಂದ ಚಿರತೆಗಳಿಂದ ಮೊದಲನೆ ಬೇಟೆ
ಭೋಪಾಲ್: ನಮೀಬಿಯಾದಿಂದ ಭಾರತಕ್ಕೆ ಬಂದ 51 ದಿನಗಳ ನಂತರ, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದೊಳಗೆ ವಿಶೇಷ ಬೇಟೆಯ ಆವರಣದಲ್ಲಿ ಬಿಡುಗಡೆಯಾದ ಎರಡು ದಿನಗಳ ಬಳಿಕ ಎರಡು ಚಿರತೆಗಳು ನವೆಂಬರ್ 6-7 ರ ಮಧ್ಯರಾತ್ರಿಯಲ್ಲಿ ತಮ್ಮ ಮೊದಲ ಬೇಟೆಯನ್ನು ಮಾಡುವ ಮೂಲಕ ಇತಿಹಾಸವನ್ನು ನಿರ್ಮಿಸಿದವು. ಶಿಯೋಪುರದ ಕುನೋ ರಾಷ್ಟ್ರೀಯ ಉದ್ಯಾನವನದ ದೊಡ್ಡ ಆವರಣಕ್ಕೆ ಬಿಡುಗಡೆಯಾದ 24 ಗಂಟೆಗಳಲ್ಲಿ ಎರಡು ಚಿರತೆಗಳು ತಮ್ಮ ಮೊದಲ ಬೇಟೆಯನ್ನು ಮಾಡಿವೆ ಎಂದು ಡಿಎಫ್‌ಒ ಪ್ರಕಾಶ್ ಕುಮಾರ್ ವರ್ಮಾ ಹೇಳಿದ್ದಾರೆ. WATCH | Two […]
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳ ಬಿಡುಗಡೆ: ಚಿರತೆಗಳನ್ನು ನೋಡಲು ಇನ್ನೂ ಸ್ವಲ್ಪ ಕಾಯಬೇಕು ಎಂದ ಪ್ರಧಾನಿ
ನಮೀಬಿಯಾದಿಂದ ಸ್ಥಳಾಂತರಗೊಳಿಸಲಾದ 8 ಚಿರತೆಗಳನ್ನು ಶನಿವಾರದಂದು ಪ್ರಧಾನಿ ಮೋದಿ, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆಗೊಳಿಸಿದರು. ಆ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿ, ಪ್ರಕೃತಿ ಮತ್ತು ಪರಿಸರವನ್ನು ರಕ್ಷಿಸಿದಾಗ ನಮ್ಮ ಭವಿಷ್ಯವೂ ಸುಭದ್ರವಾಗುತ್ತದೆ. ಬೆಳವಣಿಗೆ ಮತ್ತು ಸಮೃದ್ಧಿಯ ಮಾರ್ಗಗಳು ಸಹ ತೆರೆದುಕೊಳ್ಳುತ್ತವೆ. ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳು ಮತ್ತೆ ಓಡಾಡುವಾಗ ಹುಲ್ಲುಗಾವಲು ಪರಿಸರ ವ್ಯವಸ್ಥೆ ಮತ್ತೆ ಪುನಃಸ್ಥಾಪಿತವಾಗುತ್ತದೆ. ಜೈವಿಕ ವೈವಿಧ್ಯತೆ ಮತ್ತಷ್ಟು ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಇಲ್ಲಿ ಪರಿಸರ ಪ್ರವಾಸೋದ್ಯಮವೂ ಹೆಚ್ಚಾಗಲಿದೆ, ಇಲ್ಲಿ ಅಭಿವೃದ್ಧಿಯ ಹೊಸ ಸಾಧ್ಯತೆಗಳು ಹುಟ್ಟಿಕೊಳ್ಳುತ್ತವೆ, […]