ಗ್ರಾಮ ಮಟ್ಟದಿಂದಲೇ ಕೊರೊನಾ ತೊಲಗಿಸಲು ಪಂಚಾಯತ್ ಸಜ್ಜಾಗಬೇಕು: ಸಚಿವ ಕೋಟ ಕರೆ
ಪುತ್ತೂರು: ಪ್ರತಿ ಗ್ರಾಮ ಮಟ್ಟದಲ್ಲಿ ಕಾರ್ಯಪಡೆಯೊಂದನ್ನು ರಚಿಸಿಕೊಂಡು ಕೊರೊನಾ ಮುಕ್ತವಾಗಿಸಲು ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಒಗಳು ಸಿದ್ದರಾಗಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕಿನ ಆಯ್ದ 30 ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೊತೆಗೆ ಇಂದು ವಿಡಿಯೋ ಸಂವಾದ ನಡೆಸಿದರು. ಪಂಚಾಯತ್ ವ್ಯಾಪ್ತಿಯಲ್ಲಿ ಸಂಘಟಿತವಾಗಿ ಕೆಲಸ ಮಾಡಿದಲ್ಲಿ ಕೊರೊನಾವನ್ನು ಬೇರುಸಮೇತವಾಗಿ ಕಿತ್ತುಹಾಕಲು ಸಾಧ್ಯವಿದೆ ಎಂದರು. ಈ ಹಿನ್ನೆಲೆಯಲ್ಲಿ ಮನೆ ಮನೆ ಸಂದರ್ಶಿಸುವ […]
ಜವಾಬ್ದಾರಿ ನೀಡಿದ ಹುದ್ದೆಗಳಿಗೆ ನ್ಯಾಯ ಸಲ್ಲಿಸುವುದು ಪಕ್ಷದ ಕಾರ್ಯಕರ್ತನ ಆದ್ಯ ಕರ್ತವ್ಯ: ಕೋಟ ಶ್ರೀನಿವಾಸ್ ಪೂಜಾರಿ
ಉಡುಪಿ: ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದ ವರಿಷ್ಠರು ಭರದ ತಯಾರಿ ನಡೆಸಿದ್ದು ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರಲು ಅನೇಕ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪಕ್ಷದಲ್ಲಿರುವ ಎಲ್ಲ ನಿಷ್ಠಾವಂತ ಕಾರ್ಯಕರ್ತರಿಗೆ ಅವರವರ ಅರ್ಹತೆಗೆ ತಕ್ಕಂತೆ ವಿವಿಧ ಸ್ಥರಗಳಲ್ಲಿ ಜವಾಬ್ದಾರಿಗಳನ್ನು ನೀಡಿದ್ದು ಪಕ್ಷದ ಯೋಜನೆಗಳನ್ನು ಶಿರಸಾ ಕಾರ್ಯರೂಪಕ್ಕೆ ತರುವುದು ಅವರ ಕರ್ತವ್ಯವಾಗಿರುತ್ತದೆ ಮತ್ತು ಪಾಲಿಸುವಲ್ಲಿ ತನ್ನ ಕೆಳಸ್ತರದ ಕಾರ್ಯಕರ್ತರಿಗೆ ಪ್ರೇರೇಪಣೆಯಾಗಿ ನಿಲ್ಲುವುದು ಕೂಡ ಅಗತ್ಯವಾಗಿರುತ್ತದೆ ಎಂದು ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಮತ್ತು ಉಡುಪಿ ಚಿಕ್ಕಮಗಳೂರು ಲೋಕಸಭಾ […]
ಹಣೆಗೆ ಕುಂಕುಮ ಹಾಕಿದವರೆಲ್ಲರೂ ಸಿದ್ದರಾಮಯ್ಯರಿಗೆ ಭಯೋತ್ಪಾದಕರಂತೆ ಕಾಣುತ್ತಾರೆ: ಕೋಟ ವ್ಯಂಗ್ಯ
ಉಡುಪಿ: ಹಣೆಗೆ ಕುಂಕುಮ ಹಾಕಿದವರೆಲ್ಲರೂ ಸಿದ್ದರಾಮಯ್ಯ ಅವರಿಗೆ ಭಯೋತ್ಪಾದಕರಂತೆ ಕಾಣುತ್ತಿದ್ದಾರೆ, ಅಂತಹ ಸಿದ್ದರಾಮಯ್ಯ ಅವರ ಹೇಳಿಕೆಗೆಲ್ಲಾ ನಾವು ಪ್ರತಿಕ್ರಿಯೆ ನೀಡಬೇಕಾಗಿಲ್ಲ ಎಂದು ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾವಿ, ನಾಮ ಧರಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಟೀಕೆಗೆ ಉತ್ತರಿಸಿದ ಕೋಟ ಅವರು, ಯೋಗಿ ಆದಿತ್ಯನಾತ್ ಅವರು ಸಿಎಂ ಆಗಿ ಮಾಡಿರುವ ಕೆಲಸವನ್ನು ದೇಶವೇ ಮೆಚ್ಚುತ್ತಿದೆ. ಅಂತಹ ರಾಷ್ಟ್ರಭಕ್ತನ ಅವಹೇಳನ ಮಾಡಿದ್ರೆ […]
ಕುಮಾರಣ್ಣರಿಂದ ಕಾಂಗ್ರೆಸ್‌ಗೆ ಭಿಕ್ಷುಕ ಪಟ್ಟ: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಮುಂದಿನ ಲೋಕಸಭೆ ಚುನಾವಣೆಗೆ ಜೆಡಿಎಸ್–ಕಾಂಗ್ರೆಸ್ ಸೀಟು ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾವು ಭಿಕ್ಷುಕರಲ್ಲ ಎಂದಿದ್ದಾರೆ. ಆದರೆ ಅವರ ಮಾತಿನ ವರಸೆಯನ್ನು ನೋಡಿದರೆ ಪರೋಕ್ಷವಾಗಿ ಕಾಂಗ್ರೆಸ್‌ನ್ನು ಭಿಕ್ಷುಕರೆಂದು ಸಂಭೋದಿಸಿರುವಂತೆ ಕಾಣುತ್ತದೆ. ಸುಮ್ಮನೆ ಕುಮಾರಸ್ವಾಮಿ ಈ ರೀತಿ ಮಾತನಾಡುವವರಲ್ಲ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕುಟುಕಿದರು. ಉಡುಪಿಯಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಶಾಸಕ ಆನಂದ ಸಿಂಗ್ ಹಾಗೂ ಕಂಪ್ಲಿ ಶಾಸಕ ಗಣೇಶ್ ಹೊಡೆದಾಟ ಪ್ರಕರಣ ಅವರ […]
ಫೆ.20: ಜಿಲ್ಲೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರ ಪ್ರವಾಸ
ಉಡುಪಿ: ವಿಧಾನ ಪರಿಷತ್ತಿನ ವಿರೋಧ ಪಕ್ಷದ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಫೆಬ್ರವರಿ 20 ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಬೆಳಗ್ಗೆ 10.30ಕ್ಕೆ ಕೆ.ಎಂ.ಸಿ ಮಣಿಪಾಲದಲ್ಲಿ ಹೋಮ್ ಕೇರ್ ಸರ್ವೀಸಸ್ ಉದ್ಘಾಟನಾ ಕಾರ್ಯಕ್ರಮ, ಮಧ್ಯಾಹ್ನ 12 ಕ್ಕೆ ಕೋಟೇಶ್ವರ ಪದವಿ ಪೂರ್ವ ಕಾಲೇಜಿನ ಸಮಾರಂಭದಲ್ಲಿ ಭಾಗವಹಿಸಿ ನಂತರ ಕಾರವಾರಕ್ಕೆ ತೆರಳುವರು.