ಕೊಡವೂರು: ಬೆನ್ನುಮೂಳೆ ಮುರಿತಕ್ಕೊಳಗಾದವರ ಮನೆಗೆ ತೆರಳಿ ತಪಾಸಣೆ
ಕೊಡವೂರು: ಪ್ರಾಥಮಿಕ ಆರೋಗ್ಯ ಉಪಕೇಂದ್ರ ಕೊಡವೂರು ಮತ್ತು ವಾರ್ಡ್ ಅಭಿವೃದ್ದಿ ಸಮಿತಿ ಕೊಡವೂರು ವತಿಯಿಂದ ಬೆನ್ನುಮೂಳೆ ಮುರಿತಕ್ಕೆ ಒಳಗಾದವರಿಗೆ ಮತ್ತು ವಯಸ್ಸಾದವರಿಗೆ ಹಾಗೂ ನಡೆಯಲು ಅಶಕ್ತರಾದವರಿಗೆ ಅವರ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಕೆ ವಿಜಯ್ ಕೊಡವೂರು, ಡಾ. ಸುಬ್ರಮಣ್ಯ ಶಿರ್ವ ಎಂ.ಒ, ಡಾ. ಸ್ವಾತ್ವಿಕ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ, ಸವಿತಾ. ಡಿ, ಪಿ.ಎಚ್.ಸಿ.ಒ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ, ಯುವಕ ಸಂಘ ಕೊಡವೂರು ಅಧ್ಯಕ್ಷ ಪ್ರಭಾತ್ […]
ಕೊಡವೂರು: ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರ ಉದ್ಘಾಟನೆ
ಕೊಡವೂರು: ಇಲ್ಲಿನ ಪರಿಸರದಲ್ಲಿ ಅನೇಕ ಬಡವರು ಮತ್ತು ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲು ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ಆದ್ದರಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹತ್ತಿರದಲ್ಲಿ ಉತ್ತಮವಾದ ಮತ್ತು ಉಚಿತ ಆರೋಗ್ಯ ಸೇವೆ ಪಡೆಯಬೇಕಾದರೆ ನಮ್ಮ ಪರಿಸರದಲ್ಲಿಯೇ ಆರೋಗ್ಯ ಕೇಂದ್ರ ಬೇಕು ಎಂದು ಹಲವಾರು ವರ್ಷಗಳ ಹೋರಾಟ ನಡೆಸಿದ ಬಳಿಕ ಇಂದು ನಮ್ಮ ವಾರ್ಡಿನಲ್ಲಿ ಸರ್ಕಾರಿ ಆರೋಗ್ಯ ಕೇಂದ್ರ ಉದ್ಘಾಟನೆಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಉತ್ತಮವಾದ ಸೇವೆಯೊಂದಿಗೆ ಪ್ರತಿಯೊಬ್ಬರಿಗೂ ಉಚಿತವಾಗಿ […]
ಸಾರ್ವಜನಿಕ ಶೌಚಾಲಯಗಳ ಸ್ವಚ್ಚತಾ ಅಭಿಯಾನದ ಮೂಲಕ ವಿಶಿಷ್ಟ ರೀತಿಯ ಸ್ವಾತಂತ್ರ್ಯೋತ್ಸವ ಆಚರಣೆ
ಉಡುಪಿ: ನಗರಸಭಾ ಸದಸ್ಯ ವಿಜಯ್ ಕೊಡವೂರು ನೇತೃತ್ವದಲ್ಲಿ ಹಿರಿಯ ನಾಗರಿಕರೊಂದಿಗೆ ಸಾರ್ವಜನಿಕ ಕಚೇರಿಗಳ ಶೌಚಾಲಯಗಳನ್ನು ಸ್ವಚ್ಛ ಮಾಡುವ ಮೂಲಕ ಸ್ವಾತಂತ್ರೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಉಡುಪಿ ನಗರ ವ್ಯಾಪ್ತಿಯ ಒಳಗಡೆ ಇರುವ ಸರಕಾರಿ ಶೌಚಾಲಯಗಳು, ಸರಕಾರಿ ಪರಿಸರಗಳು ನಾಚಿಗೆ ತರುವ ರೀತಿಯಲ್ಲಿ ಇರುವುದನ್ನು ಗಮನಿಸಿ ಉಡುಪಿಯ ಎಪಿಎಂಸಿ ಮಾರುಕಟ್ಟೆಯ ಶೌಚಾಲಯವನ್ನು ಸ್ವಚ್ಛ ಪಡಿಸುವ ಕಾರ್ಯವನ್ನು ಹಿರಿಯ ನಾಗರಿಕರೊಂದಿಗೆ ಸೇರಿಕೊಂಡು ನಡೆಸಲಾಯಿತು. ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ನಗರಸಭಾ ಸದಸ್ಯರ ಕಾರ್ಯವನ್ನು ತರಕಾರಿ ಮಾರಾಟ ಮಾಡುವ ವ್ಯಾಪಾರಸ್ಥರು ಶ್ಲಾಘಿಸಿದರು. ಪ್ರತೀ […]
ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ವಿಮೆ ವಿತರಣೆ
ಉಡುಪಿ: ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ವತಿಯಿಂದ ವಿವೇಕಾನಂದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜರಕಾಡು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ವಿಮೆ ವಿತರಣಾ ಕಾರ್ಯಕ್ರಮವು ಜುಲೈ 06 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗುಂಡಿಬೈಲು ನಗರಸಭಾ ಸದಸ್ಯ ಪ್ರಭಾಕರ ಪೂಜಾರಿ, ಪ್ರೀತಿ ತಂಗಪ್ಪನ್ ( ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ), ಪತ್ರಕರ್ತ ಜನಾರ್ಧನ ಕೊಡವೂರು, ಉದಯ್ ನಾಯ್ಕ್ ( ಹಿರಿಯ ಮಾರುಕಟ್ಟೆ ಪ್ರಬಂಧಕರು ಸ್ಟಾರ್ ಹೆಲ್ತ್), ಸಂಚಾಲಕ ಅಜಿತ್ ಕುಮಾರ್ […]
ಕೊಡವೂರು ವಾರ್ಡ್ 20ನೇ ಬೃಹತ್ ಗ್ರಾಮ ಸಭೆ: ಸರ್ಕಾರದ ಯೋಜನೆಗಳ ಮಾಹಿತಿ ನೀಡುವ ಕಾರ್ಯ ಸಂಪನ್ನ
ಉಡುಪಿ: ಕೊಡವೂರು ವಾರ್ಡಿನ 20ನೇ ಗ್ರಾಮ ಸಭೆಯು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆಯಿತು. ಮಲ್ಪೆ ಠಾಣಾಧಿಕಾರಿ ಶಕ್ತಿವೇಳು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮ ಸಭೆಯನ್ನು ಮಾಡುವ ಮೂಲಕ ಜನರ ಕುಂದು ಕೊರತೆಗಳನ್ನು ತಿಳಿದು ಅದಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಬಹುದು. ಅಪರಾಧವಿಲ್ಲದ ಸಮಾಜ ನಿರ್ಮಿಸಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಮತ್ತು ನಾವು ನಮ್ಮ ಮಕ್ಕಳ ಬಗ್ಗೆ ಜವಾಬ್ದಾರಿಯಿಂದ ನಡೆಯಬೇಕು ಎಂದರು. ನಗರಸಭಾ ಸದಸ್ಯ ವಿಜಯ್ ಕೊಡವೂರು ಮಾತಾನಾಡಿ, ಕೇಂದ್ರ ಮತ್ತು […]