ಕೊಡವೂರು: ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರ ಉದ್ಘಾಟನೆ

ಕೊಡವೂರು: ಇಲ್ಲಿನ ಪರಿಸರದಲ್ಲಿ ಅನೇಕ ಬಡವರು ಮತ್ತು ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲು ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ.
ಆದ್ದರಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹತ್ತಿರದಲ್ಲಿ ಉತ್ತಮವಾದ ಮತ್ತು ಉಚಿತ ಆರೋಗ್ಯ ಸೇವೆ ಪಡೆಯಬೇಕಾದರೆ ನಮ್ಮ ಪರಿಸರದಲ್ಲಿಯೇ ಆರೋಗ್ಯ ಕೇಂದ್ರ ಬೇಕು ಎಂದು ಹಲವಾರು ವರ್ಷಗಳ ಹೋರಾಟ ನಡೆಸಿದ ಬಳಿಕ ಇಂದು ನಮ್ಮ ವಾರ್ಡಿನಲ್ಲಿ ಸರ್ಕಾರಿ ಆರೋಗ್ಯ ಕೇಂದ್ರ ಉದ್ಘಾಟನೆಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಉತ್ತಮವಾದ ಸೇವೆಯೊಂದಿಗೆ ಪ್ರತಿಯೊಬ್ಬರಿಗೂ ಉಚಿತವಾಗಿ ಸರಕಾರದ ಎಲ್ಲಾ ಸವಲತ್ತುಗಳನ್ನು ಪ್ರತಿ ಮನೆಗೆ ತಲುಪಿಸುವ ಜವಾಬ್ದಾರಿ ನನ್ನದು ಎಂದು ನಗರ ಸಭಾ ಸದಸ್ಯ ವಿಜಯ್ ಕೊಡವೂರು ತಿಳಿಸಿದರು.

ಇನ್ನು ಮುಂದಿನ ದಿನಗಳಲ್ಲಿ ಬೆನ್ನು ಮೂಳೆ ಮುರಿತಕ್ಕೆ ಒಳಗಾದವರಿಗೆ, ದಿವ್ಯಾಂಗರಿಗೆ, ಮನೆಯಿಂದ ಹೊರ ಬರಲು ಸಾಧ್ಯವಿಲ್ಲದವರಿಗೆ ಅವರ ಮನೆಗೆ ತೆರಳಿ ಅವರ ಆರೋಗ್ಯ ತಪಾಸಣೆಯನ್ನು ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಿ. ಎ. ಬ್ಯಾಂಕ್ ಅಧ್ಯಕ್ಷ ನಾರಾಯಣ್ ಬಲ್ಲಾಳ್, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ಜನಾರ್ಧನ ಕೊಡವೂರು, ಪ್ರಭಾತ್ ಕೊಡವೂರು, ಶ್ರೀ ಶಂಕರನಾರಾಯಣ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಶ್ರೀಮತಿ ಚಂದ್ರಾವತಿ ಸುರೇಶ್ ಕಾನಂಗಿ, ಶೇಕರ್ ಮೊಗವೀರ, ಕೃಷ್ಣ ಅಮೀನ್ ಮೂಡುಬೆಟ್ಟು,ಯಶೋಧಾ ರಾಜೇಂದ್ರ ಬಾಚನಬೈಲು, ಮತ್ತಿತರರು ಹಾಜರಿದ್ದರು.