ವಿಜಯ್ ಕೊಡವೂರು ಅವರ ಸಾಮಾಜಿಕ ಸೇವಾ ಕಾರ್ಯಗಳು ಶ್ಲಾಘನೀಯ: ಯಶ್ ಪಾಲ್ ಸುವರ್ಣ
ಉಡುಪಿ: ದಿವ್ಯಾಂಗ ರಕ್ಷಣಾ ಸಮಿತಿ ಕೊಡುವೂರು, ಅಪ್ಪು ಅಭಿಮಾನಿಗಳ ಬಳಗ ಉಡುಪಿ ಮತ್ತು ಲಯನ್ಸ್ & ಲಿಯೋ ಕ್ಲಬ್ ಪರ್ಕಳ ಇವರ ಜಂಟಿ ಆಶ್ರಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯ ಕ್ಷಯ ಮುಕ್ತ ಭಾರತದ ಯೋಜನೆ ಅಂಗವಾಗಿ ಕ್ಷಯ ಮುಕ್ತ ಉಡುಪಿ ನಗರಕ್ಕಾಗಿ ಉಡುಪಿ ನಗರದಲ್ಲಿನ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ, ದಿವ್ಯಾಂಗರಿಗೆ ಧನ ಸಹಾಯ, ಗಾಲಿಕುರ್ಚಿ ವಿತರಣೆ, ವಾಕರ್ ವಿತರಣೆ ಕಾರ್ಯಕ್ರಮವು ಉಡುಪಿಯ ಟೌನ್ ಹಾಲ್ ನಲ್ಲಿ ಅ.23 ರಂದು ನಡೆಯಿತು. ಕಾರ್ಯಕ್ರಮವನ್ನು […]
ಕೊಡವೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ತಾಲೂಕು ಮಟ್ಟದ ಸ್ಪರ್ಧೆಗಳು
ಕೊಡವೂರು: ಕೊಡವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಉಡುಪಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಮಹಿಳೆಯರಿಗೆ ರಂಗವಲ್ಲಿ ಸ್ಪರ್ಧೆ ಭಾನುವಾರ ಶ್ರೀ ಶಂಕರ ನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿ ನಗರಸಭಾ ಸದಸ್ಯ ವಿಜಯ್ ಕೊಡವೂರು ಮಾತನಾಡಿ, ಶಾಲಾ ಮಕ್ಕಳಲ್ಲಿ ಹಾಸುಹೊಕ್ಕಿರುವ ಪ್ರತಿಭೆಯ ಅನಾವರಣಕ್ಕೆ ಸ್ಪರ್ಧೆಗಳು ಸಹಕಾರಿ. ಇಲ್ಲಿನ ಮಣ್ಣಿನ ಸಂಸ್ಕೃತಿಯನ್ನು ಉಳಿಸಿ […]
ಕೊಡವೂರು: ಉಚಿತ ಆರೋಗ್ಯ ತಪಾಸಣಾ ಶಿಬಿರ
ಕೊಡವೂರು: ಹಳೆ ವಿದ್ಯಾರ್ಥಿ ಸಂಘ, ಯುವಕ ಸಂಘ (ರಿ.) ಕೊಡವೂರು ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಆ12 ರಂದು ವಿಪ್ರ ಶ್ರೀ ಸಭಾಭವನದಲ್ಲಿ ನಡೆಯಿತು. ನಗರಸಭಾ ಸದಸ್ಯ ವಿಜಯ್ ಕೊಡವೂರು ಮಾತನಾಡಿ, ವಾರ್ಡಿನಲ್ಲಿ ಇದುವರೆಗೆ 380ಕ್ಕೂ ಹೆಚ್ಚಿನ ಜನರಿಗೆ ಕನ್ನಡಕ ವಿತರಣೆ, 18 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ, 28 ಜನರಿಗೆ ಪೊರೆ ತೆಗೆಯುವ ಕಾರ್ಯವು ಸಂಘ – ಸಂಸ್ಥೆಗಳ ಸಹಕಾರದೊಂದಿಗೆ ನಡೆದಿದೆ. ಶಿಬಿರದ ಮೂಲಕ ಆರೋಗ್ಯ ತಪಾಸಣೆ […]
ಕೊಡವೂರು: ಆ. 12ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ಕೊಡವೂರು: ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಯುವಕ ಸಂಘ (ರಿ.) ಕೊಡವೂರು, ಸ್ವಾವಲಂಬಿ ಭಾರತ, ಉಡುಪಿ ನೇತ್ರ ತಪಾಸಣಾ ವಿಭಾಗ ಪ್ರಸಾದ್ ನೇತ್ರಾಲಯ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಸಮುದಾಯ ದಂತ ವೈದ್ಯಕೀಯ ವಿಭಾಗ ಕಸ್ತೂರ್ಬಾ ಮೆಡಿಕಲ್ ಕಾಲೇಜು, ಉಡುಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಪೆ ಉಪ ಕೇಂದ್ರ ಕೊಡವೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ತಂಬಾಕು ನಿಯಂತ್ರಣ ಘಟಕ ಹಾಗೂ ಆಸಾಂಕ್ರಮಿಕ ರೋಗ ನಿಯಂತ್ರಣ ಘಟಕ […]
ಕೊಡವೂರು: ಹಿರಿಯ ನಾಗರಿಕರ ಉಚಿತ ನೇತ್ರ ತಪಾಸಣಾ ಶಿಬಿರ ಸಂಪನ್ನ
ಕೊಡವೂರು: ವಾರ್ಡಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ ಇವರ ಸಹಯೋಗದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತವಾಗಿ ನೇತ್ರ ತಪಾಸಣಾ ಶಿಬಿರ ನಡೆಯಿತು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಒಟ್ಟು 26 ಜನರು ಕಣ್ಣಿನ ಪರೀಕ್ಷೆಯನ್ನು ನಡೆಸಿ, 13 ಜನರಿಗೆ ಶಸ್ತ್ರ ಚಿಕಿತ್ಸೆ ಹಾಗೂ 7 ಜನರಿಗೆ ಕನ್ನಡಕ ವಿತರಣೆಯನ್ನು ಮಾಡಲಾಯಿತು. ನಗರಸಭಾ ಸದಸ್ಯ ವಿಜಯ್ ಕೊಡವೂರು ಮಾತನಾಡಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ ವತಿಯಿಂದ ಉಚಿತವಾಗಿ ನೇತ್ರ ತಪಾಸಣಾ ಶಿಬಿರವನ್ನು ಕೊಡವೂರು […]