ಕೊಡವೂರು: ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ

ಕೊಡವೂರು: ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಕೊಡವೂರು ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ವಿವೇಕಾನಂದರ ಜನ್ಮ ಜಯಂತಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಸದಸ್ಯ ವಿಜಯ ಕೊಡವೂರು, ದೇಶ ಮತ್ತು ಧರ್ಮ ರಕ್ಷಣೆಗಾಗಿ ಜೀವನವನ್ನು ಮುಡುಪಾಗಿಟ್ಟ ಸ್ವಾಮಿ ವಿವೇಕಾನಂದರು ನಡೆದ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ಹಾಗಾಗಬೇಕಾದರೆ ಅವರ ಜೀವನ ಚರಿತ್ರೆಯನ್ನು ನಾವು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಮಹಾನುಭಾವರ ಜಯಂತಿ ಆಚರಣೆಗಳು ಕೇವಲ ಅವರ ಭಾವಚಿತ್ರಕ್ಕೆ ಹೂ ಅರ್ಪಣೆ ಮಾಡಿ ದೀಪವನ್ನು ಬೆಳಗಿಸುವುದಕ್ಕೆ ಸೀಮಿತವಾಗಿರದೆ, ಅವರ […]

ಕೊಡವೂರು: ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ಕಲಾವಿದ ಗಗನ್ ಜೆ ಸುವರ್ಣ ಇವರಿಗೆ ಗೌರವಾರ್ಪಣೆ

ಕೊಡವೂರು: ಜ್ಞಾನೇಂದ್ರ ಸುವರ್ಣ ಹಾಗೂ ವಾಣಿ ದಂಪತಿಗಳ ಪುತ್ರನಾದ ಗಗನ್ ಜೆ ಸುವರ್ಣ ಇವರು ಸ್ಟ್ರಿಂಗ್ ಆರ್ಟ್ (ನೂಲು ಕಲೆ)ನಲ್ಲಿ ವಿಶಿಷ್ಟ ಸಾಧನೆ ಮಾಡಿದ್ದು, ಇವರನ್ನು ಕೊಡವೂರಿನ ನಾಗರಿಕರ ಪರವಾಗಿ ಗೌರವಿಸುವ ಕಾರ್ಯ ನಡೆಯಿತು. ಗಗನ್ ಇವರು ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಾ ಇದ್ದು, ಸುಮಾರು 200 ಸಣ್ಣ ಕಬ್ಬಿಣದ ಮೊಳೆಗಳನ್ನು ಹಾಗೂ 2,500 ನೂಲಿನ ಉಂಡೆಗಳನ್ನು ಉಪಯೋಗಿಸಿ ಕಾಂತಾರ ಸಿನಿಮಾದ ಪುಟ್ಟ ಪ್ರತಿಕೃತಿಯನ್ನು ರಚಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ […]

ಕೊಡವೂರು: ಕೃಷಿ ಹಾಗೂ ಮಹಿಳಾ ಸಮಿತಿ ಸಹಯೋಗದಲ್ಲಿ ಮಲ್ಲಿಗೆ ಕೃಷಿ ತರಬೇತಿ ಕಾರ್ಯಾಗಾರ

ಉಡುಪಿ: ಕೊಡವೂರು ನಗರಸಭಾ ಸದಸ್ಯ ವಿಜಯ ಕೊಡವೂರು, ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹಾಗೂ ಸ್ವಉದ್ಯೋಗಕ್ಕೆ ಅನುಕೂಲವಾಗುವಂತೆ ನ.26ರಂದು ಕೊಡವೂರಿನ ಅಣ್ಣಪ್ಪ ಶೆಟ್ಟಿ ಜುಮಾದಿನಗರ ಇವರ ಮನೆಯಲ್ಲಿ ಮಲ್ಲಿಗೆ ಕೃಷಿ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಿದ್ದರು ಕಾರ್ಯಕ್ರಮದಲ್ಲಿ ಉಡುಪಿ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಹಾಗೂ ಹಿರಿಯಡ್ಕ ಕಾಮಧೇನು ನರ್ಸರಿಯ ದಯಾನಂದ್ ಗಾಣಿಗ ಇವರು ಮಲ್ಲಿಗೆ ಬೆಳೆಯುವ ವಿಧಾನ , ಮಾರುಕಟ್ಟೆಯ ಅವಕಾಶಗಳು, ಆರ್ಥಿಕ ಸಹಾಯ ಮುಂತಾದ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ 23 ಜನ […]

ರಸ್ತೆ ಕಾಮಗಾರಿ ವಿಳಂಬ: ಗುತ್ತಿಗೆದಾರರ ಮನೆಗೆ ಭೇಟಿ ನೀಡಿದ ವಿಜಯ್ ಕೊಡವೂರು; ಕಾಮಗಾರಿ ಪ್ರಾರಂಭ

ಮಲ್ಪೆ: ಜನರ ಸಮಸ್ಯೆಗೆ ಸ್ಪಂದಿಸದೆ ವಿಳಂಬ ನೀತಿ ಅನುಸರಿಸುತ್ತಿದ್ದ ರಸ್ತೆ ಗುತ್ತಿಗೆದಾರರ ಮನೆಗೆ ವಿಜಯ್ ಕೊಡವೂರು ನೇತೃತ್ವದಲ್ಲಿ ಗ್ರಾಮಸ್ಥರೊಂದಿಗೆ ಭೇಟಿ ನೀಡಲಾಯಿತು. ಮೂರನೇ ಹಂತದ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ ಆಶೀರ್ವಾದ್ – ಉದ್ದಿನ ಹಿತ್ಲು – ತೊಟ್ಟಂ (3.5 ಕಿ ಮೀ)ನ ಮಾರ್ಗವು ಸುಮಾರು 305 ಲಕ್ಷ ರೂಪಾಯಿಗಳ ಅಂದಾಜು ಅನುದಾನದಲ್ಲಿ ನಿರ್ಮಾಣವಾಗಲಿರುವ ಕಾಂಕ್ರೀಟ್ ರಸ್ತೆಯ ಟೆಂಡರ್ ಅವಧಿಯು 09-08-2021 ರಿಂದ 09-07-2022 ರವರೆಗಿದ್ದು, ಮುಂದಿನ 5 ವರ್ಷಗಳ ನಿರ್ವಹಣೆಯ ಜವಬ್ದಾರಿಯೂ ಗುತ್ತಿಗೆದಾರರಾಗಿರುತ್ತದೆ. ಗುತ್ತಿಗೆದಾರರು ಮಳೆಗಾಲದ ನೆಪ […]

ಶ್ರೀ ರಾಮಚಂದ್ರ ದಿಗ್ವಿಜಯ ಯಾತ್ರೆ: ಪೂರ್ವಭಾವಿ ಸಭೆ 

  ಕೊಡವೂರು:   ನವಂಬರ್ 7 ರಂದು ಅಯೋಧ್ಯ ಪ್ರಭು ಶ್ರೀ ರಾಮಚಂದ್ರ ದೇವರ ದಿಗ್ವಿಜಯ ರಥಯಾತ್ರೆಯನ್ನು ಉಡುಪಿ ಜಿಲ್ಲೆಗೆ ಸ್ವಾಗತಿಸುವ ನಿಟ್ಟಿನಲ್ಲಿ   ಭಾನುವಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಈ ಸಂದರ್ಬದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷರಾದ ಆನಂದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಜಯ್ ಕೊಡವೂರು, ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ಮೆಂಡನ್, ಅಯೋಧ್ಯ ಕರಸೇವಯಲ್ಲಿ ಭಾಗವಹಿಸಿದ ವಿನಾಯಕ್ ರಾವ್ ಕನ್ಯಾಡಿ, ಜಯಂತ್ ಪಡುಕೆರೆ ಮತ್ತಿತರರು ಉಪಸ್ಥಿತರಿದ್ದರು