ಕೊಡವೂರು: ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ

ಕೊಡವೂರು: ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಕೊಡವೂರು ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ವಿವೇಕಾನಂದರ ಜನ್ಮ ಜಯಂತಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಸದಸ್ಯ ವಿಜಯ ಕೊಡವೂರು, ದೇಶ ಮತ್ತು ಧರ್ಮ ರಕ್ಷಣೆಗಾಗಿ ಜೀವನವನ್ನು ಮುಡುಪಾಗಿಟ್ಟ ಸ್ವಾಮಿ ವಿವೇಕಾನಂದರು ನಡೆದ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ಹಾಗಾಗಬೇಕಾದರೆ ಅವರ ಜೀವನ ಚರಿತ್ರೆಯನ್ನು ನಾವು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಮಹಾನುಭಾವರ ಜಯಂತಿ ಆಚರಣೆಗಳು ಕೇವಲ ಅವರ ಭಾವಚಿತ್ರಕ್ಕೆ ಹೂ ಅರ್ಪಣೆ ಮಾಡಿ ದೀಪವನ್ನು ಬೆಳಗಿಸುವುದಕ್ಕೆ ಸೀಮಿತವಾಗಿರದೆ, ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ದಿನನಿತ್ಯ ಅವರು ನಡೆದ ದಾರಿಯಲ್ಲಿ ನಡೆದು ದೇಶವನ್ನು ರಕ್ಷಣೆ ಮಾಡುವಂತಹ ಕಾರ್ಯ ಮಾಡಬೇಕು ಎಂದರು.

ಇದೇ ವೇಳೆ ಭಾರತೀಯ ಸೇವಾದಳದ ವತಿಯಿಂದ ನಡೆದ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿ ಎಲ್ಲರಿಗೂ ಶುಭ ಹಾರೈಸಿದ ಅವರು, ಪ್ರತಿಯೊಬ್ಬರೂ ದೇಶ ಮತ್ತು ಧರ್ಮದ ರಕ್ಷಣೆ ಮಾಡುವಂತ ಅವಶ್ಯಕತೆ ಇದೆ. ದೇಶ ರಕ್ಷಣೆ ಕೇವಲ ಯಾವುದೋ ಒಂದು ಪಕ್ಷ, ಮಿಲಿಟರಿ, ಪೊಲೀಸ್ ಮುಂತಾದವರ ಕರ್ತವ್ಯ ಎನ್ನುವ ಭಾವನೆ ಬದಲಾಗಿ ನಮ್ಮೆಲ್ಲರಲ್ಲೂ ದೇಶರಕ್ಷಣೆಯ ಹೊಣೆಗಾರಿಗೆ ಬರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಬಳಿಕ ಕೊಡವೂರು ಶಾಲಾ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಶಾಲೆಯ ಮುಖ್ಯೋಪಾಧ್ಯರು ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.