ಕೊಡವೂರು: ಚಿಕ್ಕ ಮಕ್ಕಳಿಂದ ಚೊಕ್ಕ ಗ್ರಾಮ ಅಭಿಯಾನ

ಕೊಡವೂರು: ಕೊಡವೂರು ವಾರ್ಡ್ ಅನ್ನು ಸುಂದರವಾಗಿಸುವ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ರಾಮನ ವಿಗ್ರಹ ಪ್ರತಿಷ್ಠೆಯ ನಿಮಿತ್ತ ಗೋಡೆಯಲ್ಲಿ ರಾಮ ಹಾಗೂ ರಾಮಾಯಣಕ್ಕೆ ಸಂಬಂಧ ಪಟ್ಟ ಚಿತ್ರಗಳನ್ನು ಬಿಡಿಸಲಾಗಿತ್ತು. ಇದೀಗ ಕೊಡವೂರಿನ ಕಲಾಕಾರರನ್ನು ಗುರುತಿಸಿ ಹಾಗೂ ಚಿಕ್ಕ ಚಿಕ್ಕ ಮಕ್ಕಳನ್ನು ಕರೆದು ಉಳಿದ ಗೋಡೆಳ ಮೇಲೆ ಚಿತ್ರ ಬಿಡಿಸಲು ಅವಕಾಶವನ್ನು ನೀಡುತ್ತಿದೆ. ಕೊಡವೂರು ಗ್ರಾಮದ ಪುಟಾಣಿ ಮಕ್ಕಳು ಚೊಕ್ಕ ಗ್ರಾಮದ ಸಂಕಲ್ಪವನ್ನು ತೊಟ್ಟಿದ್ದಾರೆ. ಈ ಕಾರ್ಯಕ್ರಮಕ್ಕೆ ಉಡುಪಿಯ ಖ್ಯಾತ ಚಿತ್ರ ಕಲಾವಿದರಾದ ಚಂದ್ರ ಚಿತ್ರ ಕಡೆಕಾರ್ ಸಹಕಾರ ನೀಡಿದ್ದು, ಇವರ […]

ಕೊಡವೂರು: ಉಜ್ವಲ ಯೋಜನೆ ಮಾಹಿತಿ ಕಾರ್ಯಗಾರ

ಕೊಡವೂರು: ಕೊಡವೂರು ವಾರ್ಡಿನ ಸೇವಾ ಕೇಂದ್ರದಲ್ಲಿ ಕೇಂದ್ರ ಸರಕಾರದ ಉಜ್ವಲ ಯೋಜನೆಯ ಮಾಹಿತಿ ಕಾರ್ಯಗಾರವು ನಡೆಯಿತು. ಕಾರ್ಯಕ್ರಮವನ್ನು ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್ ಉದ್ಘಾಟಿಸಿದರು. ಪ್ರಧಾನಿ ಮೋದಿಯು ಬಡ ಜನರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಜಾರಿಗೊಳಿಸುತ್ತಾರೆ. ಅಡುಗೆ ಅನಿಲ ಸಂಪರ್ಕ ಇಲ್ಲದ ಕಡು ಬಡತನದಲ್ಲಿ ಇರುವ ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ನೀಡಬೇಕು ಎನ್ನುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಮೂಲಕ ಕೊಡವೂರು ವಾರ್ಡಿನ ಕಟ್ಟ ಕಡೆಯ ವ್ಯಕ್ತಿಗೆ ಈ […]

ಉದ್ಯೋಗದಿಂದ ಸಿಗುವ ಜೀವನ ಭದ್ರತೆಯು ಸಮಾಜಕ್ಕೆ ಬೆಳಕು ನೀಡುತ್ತದೆ: ಪ್ರಕಾಶ್ ಅಮ್ಮಣ್ಣಾಯ

ಉಡುಪಿ: ಕೊಡವೂರು ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ ಆಶ್ರಯದಲ್ಲಿ, ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಮತ್ತು ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಂಘ ಇವರ ಸಹಯೋಗದಲ್ಲಿ ಉಡುಪಿಯ ನಿತ್ಯಾನಂದ ಮಠ ಮಂದಿರದಲ್ಲಿ 7ನೇಯ ಮಿನಿ ಉದ್ಯೋಗ ಮೇಳ ನಡೆಯಿತು. ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿ, ಉದ್ಯೋಗ ಯುವಕರಿಗೆ ಭದ್ರತೆಯನ್ನು ನೀಡುತ್ತದೆ ಮತ್ತು ಈ ಭದ್ರತೆಯಿಂದ ಸಮಾಜಕ್ಕೆ ಬೆಳಕಾಗುತ್ತದೆ. ನ್ಯಾಯ ನೀತಿ ಧರ್ಮದಲ್ಲಿ ನಡೆದಾಗ ನಮಗೆ ಜೀವನದಲ್ಲಿ […]

ಕೊಡವೂರು: ಹಗಲಿರುಳು ನೀರು ವಿತರಿಸಿದ ಕಾರ್ಯಕರ್ತರಿಗೆ ಗೌರವ

ಕೊಡವೂರು: ನೀರಿನ ಅಭಾವದಿಂದ ನಾಗರಿಕರಿಗೆ ತೊಂದರೆಯಾಗುವುದನ್ನು ಗಮನಿಸಿ ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಮತ್ತು ನಾಗರಿಕರು ಒಟ್ಟಾಗಿ ಪ್ರತ್ಯೇಕವಾದ ತಂಡವನ್ನು ರಚನೆ ಮಾಡಿಕೊಂಡಿದ್ದು, ನಗರಸಭೆಯ ನೀರು ಪೂರೈಕೆಯಾಗದ ಸಂದರ್ಭದಲ್ಲಿ ನಗರಸಭೆ ಮತ್ತು ವಾರ್ಡ್ ಅಭಿವೃದ್ದಿಯ ಟ್ಯಾಂಕರ್ ಮೂಲಕ ನೀರು ಸರಬರಾಜು ವ್ಯವಸ್ಥೆ ಮಾಡಲಾಯಿತು. ನೀರು ಪೂರೈಸುವ ಜವಾಬ್ದಾರಿಯನ್ನು ನಿರ್ವಹಿಸಿ ರಾತ್ರಿ ಹಗಲೆನ್ನದೆ ನೀರು ಸರಬರಾಜು ಮಾಡುವ ಪಂಪ್ ಆಪರೇಟರ್ ದಾಮೋದರ್ ಮತ್ತು ನಿತೇಶ್ ಇವರನ್ನು ಕೊಡವೂರಿನ ನಾಗರಿಕರು ಮತ್ತು ವಾರ್ಡ್ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್ […]

ಕೊಡವೂರು: ಮನೆ ಮನೆಗೆ ನೀರು ವಿತರಿಸುವ ಮಾದರಿ ಕಾರ್ಯ

ಉಡುಪಿ: ನೀರಿನ ಕೊರತೆಯಿಂದಾಗಿ ನಗರಸಭೆ ವತಿಯಿಂದ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವ ಕಾರ್ಯ ನಡೆಯುತ್ತಿದೆ. ಕೊಡವೂರು ವಾರ್ಡಿನಲ್ಲಿ ನೀರಿನ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಸಮಿತಿಯನ್ನು ರಚನೆ ಮಾಡಲಾಗಿದ್ದು, ನಾಗರಿಕರಿಗೆ ನೀರಿನ ಸಮಸ್ಯೆ ಬಂದಾಗ ತಿಳಿಸಿದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಕೊಡವೂರು ವಾರ್ಡಿನಲ್ಲಿ ನಡೆಯುತ್ತಿದೆ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರಲ್ಲಿ ಅಚ್ಚುಕಟ್ಟಾದ ನಿರ್ವಹಣೆ ಕೊಡುವೂರಿನಲ್ಲಿ ನಡೆದಿದ್ದು ಪಂಪ್ ಆಪರೇಟರ್ ಆಗಿರುವಂದಾಮೋದರ್ ಮತ್ತು ನಿತೀಶ್ ಪಾಲಕಟ್ಟೆ ಇವರ ಕಾರ್ಯವು ಉತ್ತಮವಾಗಿ ನಡೆಯುತ್ತಿದೆ. ನೀರಿನ ಸಮಸ್ಯೆ ಇರುವವರು […]