ಕೊಡವೂರು: ಚಿಕ್ಕ ಮಕ್ಕಳಿಂದ ಚೊಕ್ಕ ಗ್ರಾಮ ಅಭಿಯಾನ

ಕೊಡವೂರು: ಕೊಡವೂರು ವಾರ್ಡ್ ಅನ್ನು ಸುಂದರವಾಗಿಸುವ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ರಾಮನ ವಿಗ್ರಹ ಪ್ರತಿಷ್ಠೆಯ ನಿಮಿತ್ತ ಗೋಡೆಯಲ್ಲಿ ರಾಮ ಹಾಗೂ ರಾಮಾಯಣಕ್ಕೆ ಸಂಬಂಧ ಪಟ್ಟ ಚಿತ್ರಗಳನ್ನು ಬಿಡಿಸಲಾಗಿತ್ತು. ಇದೀಗ ಕೊಡವೂರಿನ ಕಲಾಕಾರರನ್ನು ಗುರುತಿಸಿ ಹಾಗೂ ಚಿಕ್ಕ ಚಿಕ್ಕ ಮಕ್ಕಳನ್ನು ಕರೆದು ಉಳಿದ ಗೋಡೆಳ ಮೇಲೆ ಚಿತ್ರ ಬಿಡಿಸಲು ಅವಕಾಶವನ್ನು ನೀಡುತ್ತಿದೆ.

ಕೊಡವೂರು ಗ್ರಾಮದ ಪುಟಾಣಿ ಮಕ್ಕಳು ಚೊಕ್ಕ ಗ್ರಾಮದ ಸಂಕಲ್ಪವನ್ನು ತೊಟ್ಟಿದ್ದಾರೆ.

ಈ ಕಾರ್ಯಕ್ರಮಕ್ಕೆ ಉಡುಪಿಯ ಖ್ಯಾತ ಚಿತ್ರ ಕಲಾವಿದರಾದ ಚಂದ್ರ ಚಿತ್ರ ಕಡೆಕಾರ್ ಸಹಕಾರ ನೀಡಿದ್ದು, ಇವರ ಮಾರ್ಗದರ್ಶನದಲ್ಲಿ ನಗರ ಸಭಾ ಸದಸ್ಯ ವಿಜಯ್ ಕೊಡವೂರು ಇವರ ವಿಶಿಷ್ಠ ಕಲ್ಪನೆಯ ಸ್ವಚ್ಚ ಗ್ರಾಮ ಚೊಕ್ಕ ಗ್ರಾಮ ಸಾಧ್ಯವಾಗುತ್ತಿದೆ.