ಕೊಡವೂರು: ಹಗಲಿರುಳು ನೀರು ವಿತರಿಸಿದ ಕಾರ್ಯಕರ್ತರಿಗೆ ಗೌರವ

ಕೊಡವೂರು: ನೀರಿನ ಅಭಾವದಿಂದ ನಾಗರಿಕರಿಗೆ ತೊಂದರೆಯಾಗುವುದನ್ನು ಗಮನಿಸಿ ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಮತ್ತು ನಾಗರಿಕರು ಒಟ್ಟಾಗಿ ಪ್ರತ್ಯೇಕವಾದ ತಂಡವನ್ನು ರಚನೆ ಮಾಡಿಕೊಂಡಿದ್ದು,
ನಗರಸಭೆಯ ನೀರು ಪೂರೈಕೆಯಾಗದ ಸಂದರ್ಭದಲ್ಲಿ ನಗರಸಭೆ ಮತ್ತು ವಾರ್ಡ್ ಅಭಿವೃದ್ದಿಯ ಟ್ಯಾಂಕರ್ ಮೂಲಕ ನೀರು ಸರಬರಾಜು ವ್ಯವಸ್ಥೆ ಮಾಡಲಾಯಿತು.

ನೀರು ಪೂರೈಸುವ ಜವಾಬ್ದಾರಿಯನ್ನು ನಿರ್ವಹಿಸಿ ರಾತ್ರಿ ಹಗಲೆನ್ನದೆ ನೀರು ಸರಬರಾಜು ಮಾಡುವ ಪಂಪ್ ಆಪರೇಟರ್ ದಾಮೋದರ್ ಮತ್ತು ನಿತೇಶ್ ಇವರನ್ನು ಕೊಡವೂರಿನ ನಾಗರಿಕರು ಮತ್ತು ವಾರ್ಡ್ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್ ಹಾಗೂ ನಗರ ಸಭಾ ಸದಸ್ಯ ವಿಜಯ್ ಕೊಡವೂರು ಇವರ ಮುಂದಾಳತ್ವದಲ್ಲಿ ಗೌರವಿಸುವ ಕಾರ್ಯ ನಡೆಯಿತು.

ಈ ಸಂದರ್ಭದಲ್ಲಿ ವಾರ್ಡ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.