ಕಾಸರಗೋಡು-ತಿರುವನಂತಪುರ ವಂದೇ ಭಾರತ್ ಎಕ್ಸ್ ಪ್ರೆಸ್ ವೇಳಾಪಟ್ಟಿ ಮತ್ತು ಟಿಕೆಟ್ ದರಗಳು ಇಂತಿವೆ
ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಏಪ್ರಿಲ್ 25 ರಂದು ಉದ್ಘಾಟಿಸಲಿದ್ದಾರೆ. ತಿರುವನಂತಪುರಂ ಮತ್ತು ಕಾಸರಗೋಡು ಮಧ್ಯೆ ಕೇರಳದ 11 ಜಿಲ್ಲೆಗಳ ನಡುವೆ ಸಂಚರಿಸಲಿದೆ. ಇದು ದೇಶದ 16ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಾಗಿದೆ. ಕಾಸರಗೋಡು – ತಿರುವನಂತಪುರಂ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಕಾಸರಗೋಡು ಮತ್ತು ತಿರುವನಂತಪುರಂ ನಡುವೆ ಕಾರ್ಯನಿರ್ವಹಿಸಲಿದ್ದು, ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ ಟೌನ್, ತ್ರಿಶೂರ್, ಶೋರನೂರು, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ನಿಲುಗಡೆಯಾಗಲಿದೆ. ವಂದೇ […]
ಕಾಸರಗೋಡು: ಕಾಂತಾರ ವೀಕ್ಷಿಸಲು ಒಂದೇ ಬಸ್ ನಲ್ಲಿ ತೆರಳಿದ 69 ಗ್ರಾಮಸ್ಥರು!
ಕಾಸರಗೋಡು: ಎಲ್ಲೆಲ್ಲೂ ಕಾಂತಾರ ಮಾಯೆ ಆವರಿಸಿದೆ. ಹಳ್ಳಿ, ನಗರ, ದೇಶ, ಭಾಷೆಗಳ ಗಡಿಯನ್ನು ಮೀರಿ ಕಾಂತಾರ ಬೆಳೆಯುತ್ತಿದೆ. ಒಂದಾನೊಂದು ಕಾಲದಲ್ಲಿ ತುಳುನಾಡಿನ ಅವಿಭಾಜ್ಯ ಅಂಗವಾಗಿದ್ದ, ಮತ್ತು ಈಗಲೂ ತುಳುವ ಆಚರಣೆಗಳನ್ನು ಮೈಗೂಡಿಸಿಕೊಂಡಿರುವ ಕೇರಳದ ಕಾಸರಗೋಡು ಜಿಲ್ಲೆಯ ಕುಂಟಮುಕ್ಕಲ ಗ್ರಾಮದ ಒಟ್ಟು 69 ಜನರು ಕಾಂತಾರ ವೀಕ್ಷಿಸಲು ಒಂದೇ ಬಸ್ ನಲ್ಲಿ ತೆರಳಿದ್ದಾರೆ ಎನ್ನುವ ಸುದ್ದಿಯನ್ನು ನ್ಯೂಸ್ 18 ವರದಿ ಮಾಡಿದೆ. ಕಾಸರಗೋಡಿನ ಸಮೀಪದ ಚಿತ್ರಮಂದಿರದಲ್ಲಿ ಕಾಂತಾರವನ್ನು ವೀಕ್ಷಿಸಲು ಈ ಉತ್ಸಾಹಭರಿತ ಗ್ರಾಮಸ್ಥರ ಗುಂಪು ಒಂದೇ ಬಸ್ ಹತ್ತಿದೆ […]
ಕಾಸರಗೋಡು: ಭಕ್ತರ ಪ್ರೀತಿಯ ಬಬಿಯಾ ಇನ್ನಿಲ್ಲ; ವಿಷ್ಣುಲೋಕದತ್ತ ಪಯಣಿಸಿದ ದೈವಿಕ ಮೊಸಳೆ
ಕಾಸರಗೋಡು: ಇಲ್ಲಿನ ಅನಂತಪುರಂನ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಕೊಳದಲ್ಲಿ ವಾಸವಾಗಿದ್ದ ಭಕ್ತರ ಪ್ರೀತಿಯ ಮೊಸಳೆ ಬಬಿಯಾ ಸಾವನ್ನಪ್ಪಿದೆ. ಸುಮಾರು 75 ವರ್ಷ ವಯಸ್ಸಿನ ಈ ಮೊಸಳೆ ನಿನ್ನೆ ರಾತ್ರಿ ಸಾವನ್ನಪ್ಪಿದೆ. ದಂತಕಥೆಗಳ ಪ್ರಕಾರ, 1945 ರಲ್ಲಿ, ಬ್ರಿಟಿಷ್ ಅಧಿಕಾರಿಯೊಬ್ಬರು ದೇವಾಲಯದಲ್ಲಿ ಮೊಸಳೆಯೊಂದಕ್ಕೆ ಗುಂಡು ಹಾರಿಸಿದ್ದ ಕೆಲವೇ ದಿನಗಳಲ್ಲಿ ಬಬಿಯಾ ದೇವಾಲಯದ ಕೊಳದಲ್ಲಿ ಕಾಣಿಸಿಕೊಂಡಿದ್ದಳು. ಬಬಿಯಾ ಸಂಪೂರ್ಣವಾಗಿ ಸಸ್ಯಾಹಾರಿಯಾಗಿದ್ದಳು. Babiya the crocodile lived in Ananthapadmanabha Swamy Lake Temple of kasargod is no more pic.twitter.com/mFF5bjN4SU […]
ತುಳು ಭಾಷೆಗೆ ಸಂವಿಧಾನಿಕ ಮಾನ್ಯತೆಗಾಗಿ ಅಕ್ಟೋಬರ್ 10 ರಂದು ಮಿನಿ ವಿಧಾನಸೌಧದೆದುರು ಪ್ರತಿಭಟನೆ
ಮಂಗಳೂರು/ಉಡುಪಿ: ತುಳುನಾಡಿನ ಮತ್ತು ತುಳುವರ ಮಾತೃ ಭಾಷೆ ತುಳುವಿಗೆ ಭಾರತೀಯ ಸಂವಿಧಾನದ 347 ನೇ ವಿಧಿಯ ಪ್ರಕಾರ ಕರ್ನಾಟಕದ ಅಧಿಕೃತ ಭಾಷೆ ಎಂದು ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಅಕ್ಟೋಬರ್ 10 ರಂದು ಬೆಳಿಗ್ಗೆ 9.30 ಗಂಟೆಯಿಂದ ಮಂಗಳೂರಿನ ಮಿನಿ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ ನಡೆಯಲಿದೆ. ಭಾರತೀಯ ಸಂವಿಧಾನದ 29 ನೇ ವಿಧಿಯು ವಿಶಿಷ್ಟವಾದ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಹೊಂದಿರುವ ನಾಗರಿಕರ ಒಂದು ವಿಭಾಗವು ಅದನ್ನು ಸಂರಕ್ಷಿಸುವ ಹಕ್ಕನ್ನು ಹೊಂದಿದೆ ಎಂದು ಹೇಳಿದೆ. ತುಳುವಿಗೆ ತನ್ನದೇ […]
ಕಾಸರಗೋಡಿನ ಕಲಾವಿದ ಕರಣ್ ಆಚಾರ್ಯ ಕಮಾಲಿಗೆ ಫಿದಾ ಆದ ನೆಟ್ಟಿಗರು!
ಕಾಸರಗೋಡು: ಜಿಲ್ಲೆಯ ಕೂಡ್ಲು ನಿವಾಸಿ ಆಂಗ್ರಿ ಹನುಮಾನ್ ಖ್ಯಾತಿಯ ಗ್ರಾಫಿಕ್ ಡಿಸೈನರ್ ಕರಣ್ ಆಚಾರ್ಯ ಅವರ ಬಾಲಕೃಷ್ಣ ಮತ್ತು ಬಾಲರಾಧೆಯ ಕಲಾಕೃತಿಯೊಂದು ನೆಟ್ಟಿಗರ ಮನ ಸೂರೆಗೊಂಡಿದೆ. ತಮಿಳುನಾಡಿನ ಇನ್ಸ್ಟಾಗ್ರಾಂ ಬಳಕೆದಾರ ನವೀನ್ ಎಂಬವರೊಬ್ಬರು, ಮಕ್ಕಳ ಚಿತ್ರವೊಂದನ್ನು ಹಂಚಿಕೊಂಡಿದ್ದು ಕರಣ್ ಅವರನ್ನು ಟ್ಯಾಗ್ ಮಾಡಿ ಇದನ್ನು ಎಡಿಟ್ ಮಾಡಬಹುದೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕರಣ್ ಆಚಾರ್ಯ ಆ ಇಬ್ಬರು ಮಕ್ಕಳ ಚಿತ್ರವನ್ನು ಬಾಲರಾಧೆ ಮತ್ತು ಬಾಲಕೃಷ್ಣ ರೀತಿ ಎಡಿಟ್ ಮಾಡಿ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಇದನ್ನು […]