ಕಾರ್ಕಳ ಕ್ಷೇತ್ರದಾದ್ಯಂತ ಬಿಜೆಪಿ ಅಲೆ, ಎರಡು ಲಕ್ಷ ಮತಗಳ ಅಂತರದಲ್ಲಿ ಶೋಭಾ ಗೆಲುವು: ಮಣಿರಾಜ್ ಶೆಟ್ಟಿ
ಕಾರ್ಕಳ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಕಳ ಕ್ಷೇತ್ರದಾದ್ಯಂತ ಈಗಾಗಲೇ ಹಲವು ಭಾರಿ ಪ್ರವಾಸ ಮಾಡಿದ್ದು, ಬಿಜೆಪಿಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಬೇಕೆನ್ನುವ ನಿಟ್ಟಿನಲ್ಲಿ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರು ಮತ್ತೊಮ್ಮೆ ಸಂಸದರಾಗಲಿದ್ದು, 2 ಲಕ್ಷಕ್ಕೂ ಅಧಿಕ ಮತಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ಕಾರ್ಕಳ ಕ್ಷೇತ್ರವೊಂದರಲ್ಲೇ ಸುಮಾರು 50 ಸಾವಿರಕ್ಕೂ ಅಧಿಕ ಬಹುಮತ ಬರಲಿದೆ ಎಂದು ಕ್ಷೇತ್ರಾಧ್ಯಕ್ಚ ಮಣಿರಾಜ್ ಶೆಟ್ಟಿ ಅವರು ಪ್ರಕಟನೆಯಲ್ಲಿ […]
ಡಾ. ಕಾಂತಿ ಶೆಟ್ಟಿ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

ಕಾರ್ಕಳ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಡಮಾಡುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಕಾರ್ಕಳ ವಿಜೇತ ವಿಶೇಷ ಶಾಲೆಯ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಅವರು ಪುರಸ್ಕೃತರಾಗಿದ್ದಾರೆ. ಇಲಾಖೆಯ ವತಿಯಿಂದ ಮಾ. 8ರಂದು ರವೀಂದ್ರ ಕಲಾ ಕ್ಷೇತ್ರ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಡಾ. ಜಯಮಾಲ ರಾಮಚಂದ್ರ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿದರು.
ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಗಡಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

ಉಡುಪಿ: ಮುಂಬರುವ ಲೋಕ ಸಭಾ ಚುನಾವಣೆ 2019 ರ ಪ್ರಯುಕ್ತ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಹಾಗೂ ಪೊಲೀಸ್ ಜಿಲ್ಲಾ ವರಿಷ್ಟಾಧಿಕಾರಿ ನಿಶಾ ಜೇಮ್ಸ್, ಸಹಾಯಕ ಚುನಾವಣಾಧಿಕಾರಿ, ಕಾರ್ಕಳ ವಿಧಾನ ಸಭಾ ಕ್ಷೇತ್ರದ ತಹಶೀಲ್ದಾರ್, ಹೆಬ್ರಿ-ತಹಶೀಲ್ದಾರ್, ಕಾರ್ಕಳ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಎಲ್ಲಾ ಸೆಕ್ಟರ್ ಅಧಿಕಾರಿಯವರ ಜೊತೆಗೆ ಮಾ. 7 ರಂದು ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಗಡಿ ಪ್ರದೇಶ ಹಾಗೂ ಚೆಕ್ ಪೋಸ್ಟ್ ನಿರ್ಮಾಣ ಮಾಡುವ ಸಂಬಂಧ ಕಾರ್ಕಳ ತಾಲೂಕಿಗೆ ಭೇಟಿ ನೀಡಿದ್ದು, […]
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬೆಂಕಿ:15 ಹೆ. ಹುಲ್ಲುಗಾವಲು ಬೆಂಕಿಗಾಹುತಿ

ಉಡುಪಿ: ಮಾರ್ಚ್ 4 ರಂದು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಗಂಗಾಮೂಲ ಗಸ್ತಿನ ಭಗವತಿ ಗುಡ್ಡ ವ್ಯಾಪ್ತಿಯಲ್ಲಿ ಸಂಜೆ 6.30 ರ ಸುಮಾರಿಗೆ ಯಾರೋ ಅಪರಿಚಿತರು ಬೆಂಕಿ ಹಾಕಿದ್ದು ಈ ಬೆಂಕಿಯನ್ನು ಕೂಡಲೇ ಕುದುರೆಮುಖ ವನ್ಯಜೀವಿ ವಲಯದ ಸಿಬ್ಬಂದಿಗಳನ್ನು ಬಳಸಿ ರಾತ್ರಿ 9.30 ರ ಸುಮಾರಿಗೆ ಸಂಪೂರ್ಣವಾಗಿ ಆರಿಸಲಾಗಿದೆ. ಒಟ್ಟಾರೆ 15 ಹೆ. ಹುಲ್ಲುಗಾವಲು ಸುಟ್ಟುಹೋಗಿದ್ದು, ಯಾವುದೇ ಮರಗಳು ಸುಟ್ಟಿರುವುದಿಲ್ಲ. ಯಾವುದೇ ವನ್ಯಪ್ರಾಣಿಗಳು ಕೂಡ ಸಾವನಪ್ಪಿರುವುದಿಲ್ಲ. ಈ ಬಗ್ಗೆ ಅರಣ್ಯ ಅಪರಾದವನ್ನು ದಾಖಲು ಮಾಡಿ, ಆರೋಪಿತರನ್ನು ಪತ್ತೆ ಹಚ್ಚಲು […]
ಕಾರ್ಕಳದಲ್ಲಿ ಎರಡು ಮಂಗಗಳ ಶವ ಪತ್ತೆ

ಕಾರ್ಕಳ: ತಾಲೂಕಿನ ಕುಕ್ಕುಂದೂರು ಅಯ್ಯಪ್ಪ ನಗರ ಹಾಗೂ ನಕ್ರೆಯಲ್ಲಿ ಬುಧವಾರ ಎರಡು ಮಂಗಗಳ ಶವ ಪತ್ತೆಯಾಗಿದ್ದು, ಕಾರ್ಕಳದಲ್ಲೂ ಮಂಗನ ಕಾಯಿಲೆಯ ಭೀತಿ ಆವರಿಸಿದೆ. ಕುಂದಾಪುರ ಭಾಗದಲ್ಲಿ ಸರಣಿ ಸಾವಿಗೀಡಾಗುತ್ತಿದ್ದ ಮಂಗಗಳ ಸಾವು ಸದ್ಯ ಕಾರ್ಕಳ ಭಾಗಕ್ಕೂ ಹಬ್ಬಿದೆ. ಬುಧವಾರ ದೊರೆತ ಎರಡು ಶವಗಳ ಪೈಕಿ ಒಂದನ್ನು ಹೆಚ್ಚಿನ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಈಗಾಗಲೇ ತಾಲೂಕಿನ ಹಿರ್ಗಾನ, ಈದು, ಮಾಳ ಮೊದಲಾದ ಭಾಗದಲ್ಲಿ ಮಂಗಗಳ ಶವ ಪತ್ತೆಯಾಗಿದ್ದು, ಐದಾರು ಮಂಗಗಳ ಶವ ಪತ್ತೆಯಾಗಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು, […]