ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಗಡಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

ಉಡುಪಿ: ಮುಂಬರುವ ಲೋಕ ಸಭಾ ಚುನಾವಣೆ 2019 ರ ಪ್ರಯುಕ್ತ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಹಾಗೂ ಪೊಲೀಸ್ ಜಿಲ್ಲಾ ವರಿಷ್ಟಾಧಿಕಾರಿ ನಿಶಾ ಜೇಮ್ಸ್, ಸಹಾಯಕ ಚುನಾವಣಾಧಿಕಾರಿ, ಕಾರ್ಕಳ ವಿಧಾನ ಸಭಾ ಕ್ಷೇತ್ರದ ತಹಶೀಲ್ದಾರ್, ಹೆಬ್ರಿ-ತಹಶೀಲ್ದಾರ್, ಕಾರ್ಕಳ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಎಲ್ಲಾ ಸೆಕ್ಟರ್ ಅಧಿಕಾರಿಯವರ ಜೊತೆಗೆ ಮಾ. 7 ರಂದು  ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಗಡಿ ಪ್ರದೇಶ ಹಾಗೂ ಚೆಕ್ ಪೋಸ್ಟ್ ನಿರ್ಮಾಣ ಮಾಡುವ ಸಂಬಂಧ ಕಾರ್ಕಳ ತಾಲೂಕಿಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ನಾಡ್ಪಾಲು ಗ್ರಾಮದ ಸೋಮೇಶ್ವರ ಚೆಕ್ ಪೋಸ್ಟ್‍ಗೆ ಮತ್ತು ಮುಡಾರು ಗ್ರಾಮದ ಬಜಗೋಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸ್ಥಳೀಯ ಮತದಾರರ ಚೀಟಿಯನ್ನು ಹೊಂದಿರುವ ಬಗ್ಗೆ ಪರಿಶೀಲಿಸಿದರು.

ನಂತರ ಜಿಲ್ಲಾ ಗಡಿ ಪ್ರದೇಶವಾದ ಈದು ಗ್ರಾಮಕ್ಕೆ ಭೇಟಿ ನೀಡಿದರು. ತದ ನಂತರ ಮಾಳ ಗ್ರಾಮದ ಜಿಲ್ಲಾ ಗಡಿ ಪ್ರದೇಶ ಎಸ್.ಕೆ ಬಾರ್ಡರ್‍ಗೆ ಹಾಗೂ ಸಾಣೂರು ಗ್ರಾಮದ ಮುರತಂಗಡಿ ಚೆಕ್ ಪೋಸ್ಟ್‍ಗೆ ಭೇಟಿ ನೀಡಿ ಪೊಲೀಸ್ ವರಿಷ್ಟಾದಿಕಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರೊಂದಿಗೆ ಚರ್ಚಿಸಿ, ಚೆಕ್ ಪೋಸ್ಟ್ ನಿರ್ಮಾಣ ಮಾಡುವ ಬಗ್ಗೆ ಸೂಚನೆ ನೀಡಿದರು.

ಕಾರ್ಕಳ ತಾಲೂಕು ಕಚೇರಿಗೆ ಭೇಟಿ ನೀಡಿ ಸೆಕ್ಟರ್ ಅಧಿಕಾರಿಗಳ ಸಭೆ ನಡೆಸಿ ಎಂ.ಸಿ.ಸಿ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬಗ್ಗೆ ಹಾಗೂ ಚುನಾವಣೆಗಳನ್ನು ಯಾವುದೇ ಲೋಪ ದೋಷವಿಲ್ಲದೆ ಎಚ್ಚರಿಕೆಯಿಂದ ಚುನಾವಣಾ ಕಾರ್ಯವನ್ನು ನಡೆಸುವಂತೆ ಹಾಗೂ ಕೆ.ಪಿ.ಎಸ್.ಐ.ಎಸ್ ಆಪ್ ಮೂಲಕ ದಾಖಲಿಸುವಂತೆ ಸೆಕ್ಟರ್ ಅಧಿಕಾರಿಯವರಿಗೆ ಜಿಲ್ಲಾಧಿಕಾರಿಯವರು ಸೂಚಿಸಿದರು. ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಸಲುವಾಗಿ ಇಖಔಓಇಖಿ ಮೂಲಕ 6,7,8,8 ಎ ನಮೂನೆಗಳನ್ನು ಅಪ್ ಲೋಡ್ ಮಾಡುವಂತೆ ಸೂಚಿಸಿದರು.