ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬೆಂಕಿ:15 ಹೆ. ಹುಲ್ಲುಗಾವಲು  ಬೆಂಕಿಗಾಹುತಿ

ಉಡುಪಿ: ಮಾರ್ಚ್ 4 ರಂದು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಗಂಗಾಮೂಲ ಗಸ್ತಿನ ಭಗವತಿ ಗುಡ್ಡ ವ್ಯಾಪ್ತಿಯಲ್ಲಿ ಸಂಜೆ 6.30 ರ ಸುಮಾರಿಗೆ ಯಾರೋ ಅಪರಿಚಿತರು ಬೆಂಕಿ ಹಾಕಿದ್ದು ಈ ಬೆಂಕಿಯನ್ನು ಕೂಡಲೇ ಕುದುರೆಮುಖ ವನ್ಯಜೀವಿ ವಲಯದ ಸಿಬ್ಬಂದಿಗಳನ್ನು ಬಳಸಿ ರಾತ್ರಿ 9.30 ರ ಸುಮಾರಿಗೆ ಸಂಪೂರ್ಣವಾಗಿ ಆರಿಸಲಾಗಿದೆ.

ಒಟ್ಟಾರೆ 15 ಹೆ. ಹುಲ್ಲುಗಾವಲು  ಸುಟ್ಟುಹೋಗಿದ್ದು, ಯಾವುದೇ ಮರಗಳು ಸುಟ್ಟಿರುವುದಿಲ್ಲ. ಯಾವುದೇ ವನ್ಯಪ್ರಾಣಿಗಳು ಕೂಡ ಸಾವನಪ್ಪಿರುವುದಿಲ್ಲ. ಈ ಬಗ್ಗೆ ಅರಣ್ಯ ಅಪರಾದವನ್ನು ದಾಖಲು ಮಾಡಿ, ಆರೋಪಿತರನ್ನು ಪತ್ತೆ ಹಚ್ಚಲು ಕ್ರಮ ಜರುಗಿಸಲಾಗಿದೆ ಎಂದು ಕಾರ್ಕಳ ಕುದುರೆಮುಖ ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.